ETV Bharat / state

ರೇಸ್ ಕ್ಲಬ್​ಗಳ ಸಂಪೂರ್ಣ ಬೆಟ್ಟಿಂಗ್ ಮೊತ್ತದ ಮೇಲೆ ಜಿಎಸ್​ಟಿ: ನಿಯಮ ರದ್ದುಪಡಿಸಿದ ಹೈಕೋರ್ಟ್ - High Court repealed the rule of GST on the total betting amount of race clubs

ಬೆಟ್ಟಿಂಗ್ ಮೊತ್ತದ ಮೇಲೆ ಜಿಎಸ್​ಟಿ ವಿಧಿಸುವ ಕೇಂದ್ರ ಹಾಗೂ ರಾಜ್ಯಗಳ ಕ್ರಮ ಪ್ರಶ್ನಿಸಿ ಬೆಂಗಳೂರು ಹಾಗೂ ಮೈಸೂರಿನ ರೇಸ್ ಕ್ಲಬ್​ಗಳು ಸಲ್ಲಿಸಿದ್ದ ಅರ್ಜಿಗಳನ್ನು ಮಾನ್ಯ ಮಾಡಿರುವ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ, ಕೇಂದ್ರ ಸರಕು ಮತ್ತು ಸೇವೆ-2017ರ ನಿಯಮ 31ಎ(3) ಹಾಗೂ ಕರ್ನಾಟಕ ಸರಕು ಮತ್ತು ಸೇವೆ ತೆರಿಗೆ ನಿಯಮ 31ಎ ಅನ್ನು ರದ್ದುಪಡಿಸಿದೆ.

high-court
ಹೈಕೋರ್ಟ್
author img

By

Published : Jun 3, 2021, 10:57 PM IST

ಬೆಂಗಳೂರು: ಬೆಂಗಳೂರು ಟರ್ಫ್ ಕ್ಲಬ್ ಹಾಗೂ ಮೈಸೂರು ರೇಸ್ ಕ್ಲಬ್ ಲಿಮಿಟೆಡ್​ಗಳು ನಡೆಸುವ ಕುದುರೆ ರೇಸ್​ನ ಸಂಪೂರ್ಣ ಬೆಟ್ಟಿಂಗ್ ಮೊತ್ತದ ಮೇಲೆ ತೆರಿಗೆ ಪಾವತಿಸುವಂತೆ ಜಿಎಸ್​ಟಿ ನಿಯಮ ಹೇರಿದ್ದ ಕೇಂದ್ರ ಸರ್ಕಾರದ ಕ್ರಮವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.

ಒಟ್ಟು ಬೆಟ್ಟಿಂಗ್ ಮೊತ್ತದ ಮೇಲೆ ಜಿಎಸ್​ಟಿ ವಿಧಿಸುವ ಕೇಂದ್ರ ಹಾಗೂ ರಾಜ್ಯಗಳ ಕ್ರಮ ಪ್ರಶ್ನಿಸಿ ಬೆಂಗಳೂರು ಹಾಗೂ ಮೈಸೂರಿನ ರೇಸ್ ಕ್ಲಬ್​ಗಳು ಸಲ್ಲಿಸಿದ್ದ ಅರ್ಜಿಗಳನ್ನು ಮಾನ್ಯ ಮಾಡಿರುವ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ, ಕೇಂದ್ರ ಸರಕು ಮತ್ತು ಸೇವೆ-2017ರ ನಿಯಮ 31ಎ(3) ಹಾಗೂ ಕರ್ನಾಟಕ ಸರಕು ಮತ್ತು ಸೇವೆ ತೆರಿಗೆ ನಿಯಮ 31ಎ ಅನ್ನು ರದ್ದುಪಡಿಸಿದೆ.

ಪೀಠ ತನ್ನ ತೀರ್ಪಿನಲ್ಲಿ, ಅರ್ಜಿದಾರ ರೇಸ್ ಕ್ಲಬ್​ಗಳು ಸ್ಟಾಕ್ ಬ್ರೋಕರ್ ಅಥವಾ ಟ್ರಾವೆಲ್ ಏಜೆಂಟ್ ರೀತಿಯಲ್ಲಿ ಕೇವಲ ಕಮಿಷನ್ ಪಡೆಯುತ್ತಾರೆ. ಹೀಗಾಗಿ, ಸಂಪೂರ್ಣ ಬೆಟ್ಟಿಂಗ್ ಮೊತ್ತದ ಮೇಲೆ ಜಿಎಸ್​ಟಿ ಪಾವತಿಸುವಂತಿಲ್ಲ. ಕಮಿಷನ್​ನಿಂದ ಪಡೆದಿರುವ ಆದಾಯಕ್ಕೆ ಮಾತ್ರ ಜಿಎಸ್​ಟಿ ಪಾವತಿಸಬೇಕಾಗುತ್ತದೆ. ಆದ್ದರಿಂದ ಸಂಪೂರ್ಣ ಬೆಟ್ಟಿಂಗ್ ಮೊತ್ತದ ಮೇಲೆ ತೆರಿಗೆ ಪಾವತಿಸುವಂತೆ ಹೇರಿರುವ ಜಿಎಸ್​ಟಿ ನಿಯಮಗಳು ಈ ರೇಸ್ ಕ್ಲಬ್​ಗಳಿಗೆ ಅನ್ವಯ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಸರಕು ಮತ್ತು ಸೇವೆಗಳು ತೆರಿಗೆ ಕಾಯ್ದೆ-2017ಕ್ಕೆ 2018ರ ಜನವರಿ 25 ರಂದು ಕೇಂದ್ರ ಸರ್ಕಾರ ತಿದ್ದುಪಡಿ ತಂದು ನಿಯಮ 31ಎ(3) ಸೇರ್ಪಡೆಗೊಳಿಸಿದ್ದನ್ನು ಪ್ರಶ್ನಿಸಿ ಈ ಎರಡು ರೇಸ್ ಕ್ಲಬ್​ಗಳು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದವು. ರೇಸ್ ಚಟುವಟಿಕೆಗಳ ಸಂಬಂಧ ಗಳಿಸುವ ಕಮಿಷನ್ ಮೇಲೆ ಮಾತ್ರ ತೆರಿಗೆ ಪಾವತಿಸಲು ಅವಕಾಶವಿದೆ. ಆದರೆ, ಸಂಪೂರ್ಣ ಬೆಟ್ಟಿಂಗ್ ಮೊತ್ತದ ಮೇಲೆ ತೆರಿಗೆ ಪಾವತಿಸಲು ಅವಕಾಶವಿಲ್ಲ ಎಂದು ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು.

ಓದಿ: ಲಾಕ್​ಡೌನ್​ ಫಜೀತಿ: ಅಂತಿಮ ಕ್ಷಣಗಳಲ್ಲೂ ಸಿಗುತ್ತಿಲ್ಲ ಪುರೋಹಿತರು..ಅವರಿಗಿದೆ ಅವರದ್ದೇ ನೋವು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.