ETV Bharat / state

ದಾವಣಗೆರೆ ಪಾಲಿಕೆ ಚುನಾವಣೆಗೆ ಹೈಕೋರ್ಟ್​ ಗ್ರೀನ್​ ಸಿಗ್ನಲ್​: ಫಲಿತಾಂಶ ಕುರಿತು ನ್ಯಾಯಾಲಯ ಹೇಳಿದ್ದೇನು?

author img

By

Published : Feb 18, 2020, 10:52 PM IST

ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಬುಧವಾರ ನಡೆಯಲಿರುವ ಚುನಾವಣೆಗೆ ಹಸಿರು ನಿಶಾನೆ ತೋರಿರುವ ಹೈಕೋರ್ಟ್, ಚುನಾವಣಾ ಪ್ರಕ್ರಿಯೆ ಮತ್ತು ಫಲಿತಾಂಶವು ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಹೇಳಿದೆ.

HC clears election for Davanagere
ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಗೆ ಹೈಕೋರ್ಟ್ ಅನುಮತಿ

ಬೆಂಗಳೂರು: ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಬುಧವಾರ ನಡೆಯಲಿರುವ ಚುನಾವಣೆಗೆ ಹಸಿರು ನಿಶಾನೆ ತೋರಿರುವ ಹೈಕೋರ್ಟ್, ಚುನಾವಣಾ ಪ್ರಕ್ರಿಯೆ ಮತ್ತು ಫಲಿತಾಂಶವು ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಹೇಳಿದೆ.

ಈ ಕುರಿತಂತೆ ಎಂ. ಸುಧಾ ಹಾಗೂ ಇತರರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್. ಸುನೀಲ್‌ದತ್ ಯಾದವ್ ಅವರಿದ್ದ ಪೀಠ ಮಂಗಳವಾರ ಮಧ್ಯಂತರ ಆದೇಶ ನೀಡಿದೆ. ಜೊತೆಗೆ 12 ಮಂದಿ ವಿಧಾನಪರಿಷತ್ ಸದಸ್ಯರು ಸೇರಿದಂತೆ ಅರ್ಜಿಯಲ್ಲಿನ ಎಲ್ಲ ಪ್ರತಿವಾದಿಗಳಿಗೆ ತುರ್ತು ನೋಟಿಸ್ ಜಾರಿ ಮಾಡಿರುವ ಪೀಠ, ಬೆಂಗಳೂರು ಪ್ರಾದೇಶಿಕ ಆಯುಕ್ತರನ್ನು ಪ್ರತಿವಾದಿಯನ್ನಾಗಿ ಸೇರಿಸಲು ಅರ್ಜಿದಾರರಿಗೆ ಸೂಚಿಸಿದೆ.

ಪ್ರಕರಣದ ಹಿನ್ನೆಲೆ: ದಾವಣಗೆರೆ ಮಹಾನಗರ ಪಾಲಿಕೆಗೆ 2019ರ ನ.14ರಂದು ಚುನಾವಣೆ ನಡೆದಿತ್ತು. ಈ ವೇಳೆ ವಿಧಾನ ಪರಿಷತ್ ಸದಸ್ಯರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇರಲಿಲ್ಲ ಮತ್ತು ಇವರ್ಯಾರು ಮತ ಚಲಾಯಿಸಿರಲಿಲ್ಲ. ಆದರೆ, ಮೇಯರ್, ಉಪ ಮೇಯರ್ ಚುನಾವಣೆಗೆ ಸಿದ್ಧಪಡಿಸಲಾದ ಮತದಾರರ ಪಟ್ಟಿಯಲ್ಲಿ ವಿಧಾನಪರಿಷತ್ ಸದಸ್ಯರಾದ ಯು.ಬಿ. ವೆಂಕಟೇಶ್, ಕೆ.ಸಿ. ಕೊಂಡಯ್ಯ, ಹೆಚ್.ಎಂ. ರೇವಣ್ಣ, ರಘು ಆಚಾರ್, ಬಿಜೆಪಿಯ ಲೆಹರ್ ಸಿಂಗ್, ಕೆ.ಪಿ. ನಂಜುಂಡಿ, ವೈ.ಎ. ನಾರಾಯಣಸ್ವಾಮಿ, ಎನ್. ರವಿಕುಮಾರ್, ಡಾ.ತೇಜಸ್ವಿನಿಗೌಡ, ಎಸ್. ರುದ್ರೇಗೌಡ, ಹನುಮಂತ ನಿರಾಣಿ, ಪಕ್ಷೇತರ ಸದಸ್ಯ ಡಿ.ಯು. ಮಲ್ಲಿಕಾರ್ಜುನ ಅವರ ಹೆಸರುಗಳನ್ನು 2020ರ ಫೆ.10ರಂದು ಸೇರಿಸಲಾಗಿದೆ. ಇವರಲ್ಲಿ ಯಾರೂ ಕೂಡ ದಾವಣಗೆರೆಯ ನಿವಾಸಿಗಳಲ್ಲ ಎಂದು ದೂರಿರುವ ಅರ್ಜಿದಾರರು, ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಸ್ಥಾನದ ಚುನಾವಣೆಗೆ ತಡೆ ನೀಡಬೇಕು. ಮತದಾನದಲ್ಲಿ ಪಾಲ್ಗೊಳ್ಳದಂತೆ ಪ್ರತಿವಾದಿ ವಿಧಾನಪರಿಷತ್ ಸದಸ್ಯರಿಗೆ ನಿರ್ಬಂಧ ಹೇರಬೇಕು ಎಂದು ಮನವಿ ಮಾಡಿದ್ದಾರೆ.

ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್​ ಪೀಠ, ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳದ ಹೊರತು ಯಾವುದೇ ಆದೇಶ ನೀಡುವುದು ಸಮಂಜಸವಲ್ಲ. ಆದರೆ, ಮೆರಿಟ್ ಆಧಾರದಲ್ಲಿ ಅರ್ಜಿಯ ವಿಚಾರಣೆ ನಡೆಯಬೇಕಿದೆ. ಆದ್ದರಿಂದ, ನಿಗದಿಯಂತೆ ಚುನಾವಣಾ ಪ್ರಕ್ರಿಯೆ ನಡೆಯಲಿ. ಕೈ ಎತ್ತುವ ಮೂಲಕ ಮತದಾನ ನಿಗದಿಯಾದ ಕಾರಣ ಬೆಂಗಳೂರು ಪ್ರಾದೇಶಿಕ ಆಯುಕ್ತರು ಇಡೀ ಚುನಾವಣಾ ಪ್ರಕ್ರಿಯೆಯನ್ನು ವಿಡಿಯೋ ರಿಕಾರ್ಡಿಂಗ್ ಮಾಡಿ ಅದರ ಸಿ.ಡಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಚುನಾವಣೆಯ ಫಲಿತಾಂಶ ತಕಾರರು ಅರ್ಜಿಯ ಅಂತಿಮ ಇತ್ಯರ್ಥಕ್ಕೆ ಒಳಪಟ್ಟಿರುತ್ತದೆ ಎಂದು ತಿಳಿಸಿ, ವಿಚಾರಣೆಯನ್ನು ಫೆ.24ಕ್ಕೆ ಮುಂದೂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.