ETV Bharat / state

ದೇಶದಲ್ಲಿ ಕೇವಲ 13 ನ್ಯಾಯಾಲಯಗಳು ಇವೆ : ಹೆಚ್. ಶಶಿಧರ್ ಶೆಟ್ಟಿ - ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ

ಕಳೆದ ವರ್ಷದಲ್ಲಿಯೇ ಸುಮಾರು 9 ಕೋಟಿ 69 ಲಕ್ಷ ರೂ. ಗಳನ್ನು ಸಂತ್ರಸ್ತರಿಗೆ ಪರಿಹಾರವಾಗಿ ಕೊಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ಹಾಗಾಗಿ, ಕಾನೂನು ವಿದ್ಯಾರ್ಥಿಗಳು ಹಿಂದುಳಿದ ಗ್ರಾಮಗಳನ್ನು ದತ್ತು ಪಡೆದುಕೊಂಡು ಅವರಿಗೆ ಬೇಕಾದ ಸೌಲಭ್ಯಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಮೂಲಕ ದೊರಕಿಸಿಕೊಡುವ ಪ್ರಯತ್ನವನ್ನು ಮಾಡಬೇಕು ಎಂದು ತಿಳಿಸಿದರು..

‘Legal Awareness’ Day
'ಕಾನೂನು ಅರಿವು' ದಿನ
author img

By

Published : Nov 12, 2021, 7:54 PM IST

ಬೆಂಗಳೂರು : ಬೇರೆ ರಾಷ್ಟ್ರಗಳಲ್ಲಿ 10 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲು 114 ನ್ಯಾಯಾಲಯಗಳು ಇವೆ. ಆದರೆ, ದೇಶದಲ್ಲಿ ಕೇವಲ 13 ನ್ಯಾಯಾಲಯಗಳು ಇವೆ. ಹಾಗಾಗಿ, ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಲು ಕಷ್ಟಕರವಾಗಿದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್. ಶಶಿಧರ್ ಶೆಟ್ಟಿ (H. Shashidhar Shetty) ತಿಳಿಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜಿ(Bangalore university law college)ನಲ್ಲಿಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ 'ಕಾನೂನು ಅರಿವು' ದಿನವನ್ನ ಆಚರಿಸಲಾಯ್ತು. ಈ ವೇಳೆ ಕಾನೂನು ಸೇವೆ ಸ್ವಯಂಸೇವಕರ ತರಬೇತಿ ಕಾರ್ಯಕ್ರಮ ಹಾಗೂ ಉಚಿತ ಕಾನೂನು ನೆರವು ಅರಿವಿನ ಬೈಕ್ ರ್ಯಾಲಿ ಜಾಥಾವನ್ನು ಅವರು ಉದ್ಘಾಟಿಸಿದರು.

ನಂತರ ಈ ಕುರಿತು ಮಾತನಾಡಿದ ಅವರು, ರಾಜಿ ಸಂಧಾನಗಳ ಮೂಲಕ, ಕಾನೂನು ಕಾಲೇಜುಗಳ ವಿದ್ಯಾರ್ಥಿಗಳ ಮೂಲಕ, ಉಚಿತ ಕಾನೂನು ಅರಿವು ನೆರವುಗಳ ಬಗ್ಗೆ ಜನಜಾಗೃತಿಯನ್ನು ವಹಿಸಿ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು ಎಂದು ತಿಳಿಸಿದರು.

ಹಲವಾರು ನೈಸರ್ಗಿಕ ವಿಪತ್ತಿಗೆ, ಮಾನವ ನಿರ್ಮಿತ ವಿಪತ್ತುಗಳು ಹಾಗೂ ಅಪರಾಧಕ್ಕೊಳಗಾದ ಸಂತ್ರಸ್ತರಿಗೆ ಪರಿಹಾರ ಕೊಡಿಸುವಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಪಾತ್ರ ಅದ್ವಿತೀಯ ಎಂದರು.

ಕಳೆದ ವರ್ಷದಲ್ಲಿಯೇ ಸುಮಾರು 9 ಕೋಟಿ 69 ಲಕ್ಷ ರೂ. ಗಳನ್ನು ಸಂತ್ರಸ್ತರಿಗೆ ಪರಿಹಾರವಾಗಿ ಕೊಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ಹಾಗಾಗಿ, ಕಾನೂನು ವಿದ್ಯಾರ್ಥಿಗಳು ಹಿಂದುಳಿದ ಗ್ರಾಮಗಳನ್ನು ದತ್ತು ಪಡೆದುಕೊಂಡು ಅವರಿಗೆ ಬೇಕಾದ ಸೌಲಭ್ಯಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಮೂಲಕ ದೊರಕಿಸಿಕೊಡುವ ಪ್ರಯತ್ನವನ್ನು ಮಾಡಬೇಕು ಎಂದು ತಿಳಿಸಿದರು.

ಇದೇ ವೇಳೆ ವಿಶ್ವವಿದ್ಯಾಲಯದ ಕಾನೂನು ಕಾಲೇಜು ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಕಾನೂನು ಅರಿವು ನೆರವು ಕರಪತ್ರವನ್ನು ಸಾರ್ವಜನಿಕರಿಗೆ ಹಂಚಲಾಯ್ತು.

ಓದಿ: ಕುತೂಹಲ ಕೆರಳಿಸಿದ 'ಚಿಟಗುಪ್ಪಿ ಬ್ರಿಟಿಷರ ಲಾಕರ್'.. ಗೋಡೆಯಲ್ಲಿರುವ ಲಾಕರ್​ನಲ್ಲಿ ಏನಿದೆ!?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.