ETV Bharat / state

ಎಪಿಎಂಸಿ ಕಾನೂನು ಕುರಿತಾಗಿ ಸುಗ್ರೀವಾಜ್ಞೆ ಬೇಡ.. ಸಿಎಂಗೆ ಹೆಚ್ ಕೆ ಪಾಟೀಲ್ ಪತ್ರ - h k patil

ರೈತರ ಹಿತದೃಷ್ಟಿಯಿಂದ ಎಪಿಎಂಸಿ ಕಾನೂನು ಕುರಿತಾಗಿ ಸುಗ್ರೀವಾಜ್ಞೆ ಬೇಡ ಎಂದು ಮಾಜಿ ಸಚಿವ ಎಚ್ ಕೆ ಪಾಟೀಲ್ ಸರ್ಕಾರವನ್ನು ಆಗ್ರಹಿದ್ದು, ಈ ಸಂಬಂಧ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಎಚ್ ಕೆ ಪಾಟೀಲ್
ಎಚ್ ಕೆ ಪಾಟೀಲ್
author img

By

Published : May 14, 2020, 3:30 PM IST

Updated : May 14, 2020, 4:11 PM IST

ಬೆಂಗಳೂರು : ಎಪಿಎಂಸಿ ತಿದ್ದುಪಡಿ ಕಾನೂನು ಕುರಿತಾಗಿ ಸುಗ್ರೀವಾಜ್ಞೆ ಬೇಡ. ಶೋಷಣೆ ಮುಕ್ತ ಕೃಷಿ ಉತ್ಪನ್ನಗಳ ಮಾರಾಟ ವ್ಯವಸ್ಥೆ ನಿರ್ಮಾಣ ಪ್ರಯತ್ನಕ್ಕೆ ತಿಲಾಂಜಲಿ ನೀಡುವುದನ್ನು ಕೈಬಿಡಿ ಎಂದು ಎಂದು ಮಾಜಿ ಸಚಿವ ಹೆಚ್ ಕೆ ಪಾಟೀಲ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ಅಧಿನಿಯಮ 1966 ತಿದ್ದುಪಡಿ ಮಾಡಲು ಸುಗ್ರೀವಾಜ್ಞೆ ತರಲು ಇಂದು ತಮ್ಮ ಸಚಿವ ಸಂಪುಟದಲ್ಲಿ ವಿಷಯ ಇರಿಸಲಾಗಿದೆ ಎಂದು ಪತ್ರಿಕೆಗಳಲ್ಲಿ ಓದಿ ತಿಳಿದೆ. ಮುಗ್ಧ ರೈತರ ಶೋಷಣೆ ಮಾಡಿದವರಿಗೆ ದಂಡ, ಶಿಕ್ಷೆಗೆ ಅವಕಾಶ ಮಾಡಿದ್ದ ಕಲಂ 117 ತಿದ್ದುಪಡಿಗೊಳಿಸುವ ತರಾತುರಿಯಲ್ಲಿ ಸರ್ಕಾರವಿದ್ದಂತಿದೆ. ಕೇಂದ್ರದ ಕೆಲವು ಅಧಿಕಾರಿಗಳು ಈ ತಿದ್ದುಪಡಿಗೆ ನಿರ್ದೇಶನ ನೀಡಿದ್ದಾರೆಂದು ಅಲ್ಲಲ್ಲಿ ಬಂದ ಟೀಕೆ ಟಿಪ್ಪಣಿಯಿಂದ ಅರಿತೆ. ಈ ತಿದ್ದುಪಡಿಯು ರೈತರ ಮೇಲೆ ಯಾವ ಪ್ರಮಾಣದಲ್ಲಿ ದುಷ್ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಅರಿಯದೇ ಈ ಸುಗ್ರೀವಾಜ್ಞೆ ತರಲಾಗುತ್ತಿದೆ ಎಂದಿದ್ದಾರೆ.

h k patil writes letter to cm
ಎಚ್ ಕೆ ಪಾಟೀಲ್ ಪತ್ರ

ಈಗ ಪ್ರಸ್ತಾಪಿಸಿದ ಸುಗ್ರೀವಾಜ್ಞೆಯಿಂದ ರೈತರ ಶೋಷಣೆಗೆ ಮಣೆ ಹಾಕಿದಂತಾಗುತ್ತದೆ. ಕೃಷಿ ಉತ್ಪನ್ನ ಮಾರಾಟದಲ್ಲಿ ಶಿಸ್ತು ಹಾಗೂ ಶೋಷಣೆ ಮುಕ್ತ ವ್ಯವಸ್ಥೆ ತರುವ ಪ್ರಯತ್ನಕ್ಕೆ ತಿಲಾಂಜಲಿ ಬೀಳಲಿದೆ. ಇದು ಅತ್ಯಂತ ರೈತ ವಿರೋಧಿ, ಶೋಷಣೆಗೆ ಅವಕಾಶ ನೀಡುವ ಕಾನೂನಾಗುವುದು. ಕಾನೂನನ್ನು ಸಡಿಲಿಸಿದರೆ ಕಾಳಸಂತೆಗೆ ಬಾಗಿಲ ತೆಗೆಯುತ್ತೀರಿ, ಸರ್ಕಾರದ ಆದಾಯಕ್ಕೂ ಹೊಡೆತ ಬೀಳುವುದು ಎಂದಿದ್ದಾರೆ.

ಈ ಮೇಲಿನ ಕಾರಣಗಳಿಗಾಗಿ ಹಾಗೂ ರೈತರ ಹಿತದೃಷ್ಟಿಯಿಂದ ಸುಗ್ರೀವಾಜ್ಞೆ ತರುವ ಪ್ರಯತ್ನ ಬೇಡ. ವಿಧಾನಸಭೆಯಲ್ಲಿ ಮಸೂದೆಯನ್ನು ಮಂಡಿಸಿ, ಚರ್ಚಿಸಿ ಮುಂದಿನ ಕ್ರಮವಿಡಲು ಆಗ್ರಹಿಸುವೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

Last Updated : May 14, 2020, 4:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.