ಬೆಂಗಳೂರು: ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಹತೆಯ ಆಧಾರದ ಮೇರೆಗೆ ನೇಮಕ ಮಾಡಿ ಕೊಳ್ಳದೆ ಹೋದರೆ ರಾಜ್ಯ ಸರ್ಕಾರದ ವಿರುದ್ದವೇ ಹೋರಾಟ ಮಾಡಬೇಕಾಗುತ್ತದೆ ಎಂದು ಬಿಜೆಪಿ ವಿಧಾನಸಭ ಸದಸ್ಯ ಆಯನೂರು ಮಂಜುನಾಥ್ ಸರ್ಕಾರಕ್ಕೆ ಖಡಕ್ ಎಚ್ಷರಿಕೆ ನೀಡಿದ್ದಾರೆ.
ತಮ್ಮಕಚೇರಿಯಲ್ಲಿ ಮಾತನಾಡಿದ ಅವರು ರಾಜ್ಯಾದ್ಯಾಂತ 13 ಸಾವಿರ ಅತಿಥಿ ಉಪನ್ಯಾಸಕರಿದ್ದಾರೆ. ಈಗ ಸರ್ಕಾರ 1.247 ಉಪನ್ಯಾಸಕರ ನೇಮಕಾತಿಗೆ ಮುಂದಾಗಿದ್ದು, ಈ ನೇಮಕಾತಿಯಲ್ಲಿ ಹೊಸಬರನ್ನು ನಿಯೋಜನೆ ಮಾಡಿ ಕೊಳ್ಳದೆ ಕಳೆದ 15 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರನ್ನು ನೇಮಿಸಬೇಕು ಎಂದು ಆಗ್ರಹಿಸಿದ್ದಾರೆ.