ETV Bharat / state

ಕೇರಳಕ್ಕೆ ಹೊರಟ 25 ಮಂದಿ ಪ್ರಯಾಣಿಕರ ವಾಹನಕ್ಕೆ ಡಿಕೆಶಿ ಚಾಲನೆ - passengers vehicle

ಕೊರೊನಾ ಹಿನ್ನೆಲೆ ಹೇರಲಾಗಿದ್ದ ಲಾಕ್​ಡೌನ್​ ಸ್ವಲ್ಪ ಪ್ರಮಾಣದಲ್ಲಿ ಸಡಿಲಗೊಂಡಿದ್ದು, ಇಂದು ಆಯಾ ಹೊರ ರಾಜ್ಯಗಳಿಗೆ ತೆರಳಬೇಕಾದ ಕಾರ್ಮಿಕರು ತೆರಳಿದರು. ಬೆಂಗಳೂರಿನಲ್ಲಿ ನೆಲೆಯೂರಿದ್ದ ಕೇರಳ ಮೂಲದ 25 ಮಂದಿ ಇಂದು ತಮ್ಮ ಊರಿಗೆ ವಾಪಸ್ ತೆರಳುತ್ತಿದ್ದ ಬಸ್​ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷದ ಬಾವುಟ ತೋರಿಸುವ ಮೂಲಕ ಬೀಳ್ಕೊಟ್ಟರು.

DK Shivakumar green signal to Kerala bus
ಕೇರಳಕ್ಕೆ ಹೊರಟ 25 ಮಂದಿ ಪ್ರಯಾಣಿಕರ ವಾಹನಕ್ಕೆ ಡಿಕೆಶಿ ಚಾಲನೆ
author img

By

Published : May 11, 2020, 11:27 PM IST

ಬೆಂಗಳೂರು: ರಾಜ್ಯದಲ್ಲಿದ್ದ ಕೇರಳ ಮೂಲದ 25 ಮಂದಿ ತಮ್ಮ ಊರಿಗೆ ವಾಪಸ್ ತೆರಳಲು ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಕಲ್ಪಿಸಿದ್ದ ವಿಶೇಷ ಬಸ್​​ಅನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಸೋಮವಾರ ರಾತ್ರಿ ಪಕ್ಷದ ಬಾವುಟ ತೋರಿಸುವ ಮೂಲಕ ಬೀಳ್ಕೊಟ್ಟರು.

DK Shivakumar green signal to Kerala bus
ಬಸ್​ಗೆ ಚಾಲನೆ ನೀಡುತ್ತಿವುದು

ಈಗಾಗಲೇ ರಾಜ್ಯ ಸರ್ಕಾರ ಬಸ್ ಹಾಗೂ ರೈಲುಗಳ ಮೂಲಕ ರಾಜ್ಯದಿಂದ ಅನ್ಯ ರಾಜ್ಯಗಳಿಗೆ ತೆರಳುವವರಿಗೆ ವಿಶೇಷ ವ್ಯವಸ್ಥೆ ಕಲ್ಪಿಸುತ್ತಿದೆ. ಇದನ್ನು ನಿರಂತರವಾಗಿ ಗಮನಿಸುತ್ತಾ ಬಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರಕ್ಕೆ ಸಾಕಷ್ಟು ಸಲಹೆ ಸೂಚನೆ ನೀಡುತ್ತಾ ಬಂದಿದ್ದಾರೆ. ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ಕಾರ್ಮಿಕರನ್ನು ಕಳೆದ ವಾರ ಭೇಟಿಯಾಗಿ ಅವರ ಅಹವಾಲು ಸ್ವೀಕರಿಸಿ ಸರ್ಕಾರಕ್ಕೆ ಕೆಪಿಸಿಸಿ ವತಿಯಿಂದ ಒಂದು ಕೋಟಿ ರೂ. ಮೊತ್ತದ ಚೆಕ್ ನೀಡಲು ಮುಂದಾಗಿದ್ದರು. ಇಂದು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಭೇಟಿ ಕೊಟ್ಟು ರೈಲ್ವೆ ವ್ಯವಸ್ಥಾಪಕರ ಜೊತೆ ಸಭೆ ನಡೆಸಿ ರಾಜ್ಯದಿಂದ ತೆರಳುವ ಹಾಗೂ ರಾಜ್ಯಕ್ಕೆ ಆಗಮಿಸುವ ಶ್ರಮಿಕರ ಸಂಚಾರಕ್ಕೆ ಅಗತ್ಯ ಪ್ರಯಾಣ ವೆಚ್ಚವನ್ನು ಪಕ್ಷವೇ ಭರಿಸುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಪತ್ರ ಸಲ್ಲಿಸಿ ಬಂದಿದ್ದಾರೆ.

ಈ ರೀತಿ ಪ್ರತಿಪಕ್ಷದ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದ್ದು, ವಿವಿಧ ಹಂತಗಳಲ್ಲಿ ಸರ್ಕಾರಕ್ಕೆ ಸಲಹೆ ನೀಡುತ್ತಾ ಬಂದಿರುವ ಡಿಕೆಶಿ ಇಂದು ಪಕ್ಷದ ಹಿರಿಯ ನಾಯಕರಾದ ಎನ್.ಎ.ಹ್ಯಾರಿಸ್ ತಮ್ಮ ಕ್ಷೇತ್ರ ವ್ಯಾಪ್ತಿಯಿಂದ ಕೇರಳಕ್ಕೆ ತೆರಳಲು ಮುಂದಾದ ಯಾತ್ರಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಿದ್ದು ಇದಕ್ಕೆ ಚಾಲನೆ ನೀಡಿದ್ದಾರೆ.

ಕೊರೊನಾ ಅಟ್ಟಹಾಸ ಮೆರೆಯುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸುತ್ತಿದ್ದು, ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕಾಂಗ್ರೆಸ್ ಇದಕ್ಕೆ ಸಲಹೆ ಸೂಚನೆ ನೀಡುವ ಕಾರ್ಯ ಮಾಡುತ್ತಿದೆ. ಸರ್ಕಾರಕ್ಕೆ ಹಾಗೂ ಅದು ಕೈಗೊಳ್ಳುವ ನಿರ್ಧಾರಕ್ಕೆ ತಮ್ಮ ಬೆಂಬಲ ಸದಾ ಇರಲಿದೆ ಎಂದು ಶಿವಕುಮಾರ್ ಇದೇ ಸಂದರ್ಭ ಇನ್ನೊಮ್ಮೆ ಸ್ಪಷ್ಟಪಡಿಸಿದ್ದಾರೆ.

DK Shivakumar green signal to Kerala bus
ಕೇರಳಕ್ಕೆ ಹೊರಟ 25 ಮಂದಿ ಪ್ರಯಾಣಿಕರ ವಾಹನಕ್ಕೆ ಡಿಕೆಶಿ ಚಾಲನೆ

ಶಾಸಕ ಹ್ಯಾರಿಸ್ ಸಾಮಾಜಿಕ ಕಳಕಳಿ ಮೆರೆಯುವ ಮೂಲಕ ಕೇರಳಕ್ಕೆ ತೆರಳಲು ಇಚ್ಛಿಸಿದ್ದ 25 ಮಂದಿಗೆ ತವರು ಸೇರುವ ಸೌಕರ್ಯ ಕಲ್ಪಿಸಿಕೊಟ್ಟಿದ್ದಾರೆ. ಸರ್ಕಾರದ ಮಟ್ಟದಲ್ಲಿ ಸಮಾಲೋಚಿಸಿ ಇಂತಹ ಉದಾತ್ತ ಕಾರ್ಯವನ್ನು ನಾಯಕರು ಮಾಡಲು ಮುಂದಾದರೆ ಸರ್ಕಾರದ ಮೇಲೆ ಅನಗತ್ಯವಾಗಿ ಬೀಳುವ ಇನ್ನಷ್ಟು ಹೊರೆ ತಗ್ಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.