ETV Bharat / state

ಕಾಯ್ದೆ ಪರಾಮರ್ಶೆ ಮಾಡುವುದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ: ರೈತ ಮುಖಂಡರು

ರಾಜಭವನದ ಅಧಿಕಾರಿಗಳು ವಿಶೇಷವಾಗಿ ನಮ್ಮನ್ನು ಬರಮಾಡಿಕೊಂಡು ನಮ್ಮ ಅಹವಾಲು ಆಲಿಸಿದರು. ಭೂಸುಧಾರಣಾ ಕಾಯ್ದೆ ರೈತರಿಗೆ ತೊಂದರೆ ಆಗೋದಾದ್ರೆ ಸರ್ಕಾರಕ್ಕೆ ಸೂಚನೆ ಕೊಡೋದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ ಎಂದು ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.

ರೈತ ಮುಖಂಡರ ಹೇಳಿಕೆ
ರೈತ ಮುಖಂಡರ ಹೇಳಿಕೆ
author img

By

Published : Dec 10, 2020, 7:02 PM IST

Updated : Dec 10, 2020, 7:12 PM IST

ಬೆಂಗಳೂರು: ರೈತ, ಕಾರ್ಮಿಕ ವಿರೋಧಿ ನೀತಿ ಎಂದು ಎಲ್ಲೆಡೆ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ರೈತ ಮುಖಂಡರು ರಾಜ್ಯಪಾಲರನ್ನು ಭೇಟಿ ಮಾಡಿ, ಹೊರಬಂದಿದ್ದಾರೆ.

ರೈತ ಮುಖಂಡ ಕುರುಬೂರು ಶಾಂತಕುಮಾರ್

ರೈತ ಮುಖಂಡ ಕುರುಬೂರು ಶಾಂತಕುಮಾರ್ ಮಾತನಾಡಿ, ರಾಜಭವನದ ಅಧಿಕಾರಿಗಳು ವಿಶೇಷವಾಗಿ ನಮ್ಮನ್ನ ಬರಮಾಡಿಕೊಂಡು ನಮ್ಮ ಅಹವಾಲು ಆಲಿಸಿದರು. ಭೂಸುಧಾರಣಾ ಕಾಯ್ದೆ ರೈತರಿಗೆ ತೊಂದರೆ ಆಗೋದಾದ್ರೆ ಸರ್ಕಾರಕ್ಕೆ ಸೂಚನೆ ಕೊಡೋದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ. ಇದು ನಮ್ಮ ಹೋರಾಟಕ್ಕೆ ಸಿಕ್ಕ ಜಯ ಎಂದಿದ್ದಾರೆ.

ಓದಿ: ಜನರು ಉಡುಗೊರೆಯಾಗಿ ನೀಡಿದ್ದ ಬಂಗಾರದ ಕಿರೀಟವನ್ನು ಸರ್ಕಾರಕ್ಕೆ ಒಪ್ಪಿಸಿದ ಡಿಸಿಎಂ ಕಾರಜೋಳ..

ರೈತ ಮುಖಂಡ ಬಡಗಲಪುರ ನಾಗೇಂದ್ರ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಮೊಟ್ಟ ಮೊದಲನೆಯದಾಗಿ ರಾಜ್ಯಪಾಲರು ಸಾರ್ವಜನಿಕ ಭೇಟಿಗೆ ಲಭ್ಯವಾಗಿದ್ದಾರೆ. ಸೌಹಾರ್ದಯುತವಾಗಿ ಮನವಿ ಮಾಡಿದ್ದೇವೆ. ಕಾಯ್ದೆ ವಿರೋಧಿಸಲು ಕಾರಣವಾದ 8-9 ಕಾರಣಗಳನ್ನು ರಾಜ್ಯಪಾಲರ ಮುಂದಿಟ್ಟಿದ್ದೇವೆ. ಚರ್ಚೆಗಳಾಗದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಸಾರ್ವಜನಿಕರು, ರೈತ ಮುಖಂಡರ ಅಭಿಪ್ರಾಯ ಸಂಗ್ರಹಿಸಿಯೇ ನಿರ್ಧಾರ ಕೈಗೊಳ್ಳುವುದಾಗಿ‌ ಹೇಳಿದ್ದಾರೆ. ಸರ್ಕಾರದ ಮಟ್ಟದಲ್ಲಿ ಕಾಯ್ದೆ ಅಂಗೀಕಾರವಾದರೂ‌ ರಾಜ್ಯಪಾಲರು ಪರಾಮರ್ಶೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ಹೋರಾಟ ಮಾಡುತ್ತಿದ್ದೇವೆ. ನಮ್ಮ ಹೋರಾಟ ರಾಜ್ಯಪಾಲರ ಗಮನ ಸೆಳೆದಿದೆ. ತುರ್ತು ಭೇಟಿಗೆ ಅವಕಾಶ ನೀಡಿರುವುದು ನಮ್ಮ ಹೋರಾಟಕ್ಕೆ ಬಲ ತಂದಿದೆ. ರಾಜ್ಯಪಾಲರ ನಿರ್ಧಾರದ ಬಗ್ಗೆ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Last Updated : Dec 10, 2020, 7:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.