ETV Bharat / state

ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಲುಲು ಹೈಪರ್ ಮಾರ್ಕೆಟ್ ಉದ್ಘಾಟನೆ

ಬೆಂಗಳೂರಿನ ರಾಜಾಜಿನಗರದಲ್ಲಿ ಅಂತಾರಾಷ್ಟ್ರೀಯ ಹೈಪರ್ ಮಾರುಕಟ್ಟೆ ನಿರ್ಮಾಣವಾಗಿದ್ದು ಮಾಜಿ ಸಿಎಂ ಎಸ್.ಎಂ.ಕೃಷ್ಣ ಉದ್ಘಾಟಿಸಿದರು.

author img

By

Published : Oct 12, 2021, 7:05 AM IST

lulu hypermarket
ಲುಲು ಹೈಪರ್ ಮಾರ್ಕೆಟ್

ಬೆಂಗಳೂರು: ರಾಜಾಜಿನಗರದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಲುಲು ಹೈಪರ್ ಮಾರ್ಕೆಟ್​ ಅನ್ನು ಮಾಜಿ ಸಿಎಂ ಎಸ್​.ಎಂ.ಕೃಷ್ಣ ಉದ್ಘಾಟಿಸಿದ್ದಾರೆ. ಈ ವೇಳೆ ಸಂಸ್ಥೆಯ ಎಂಡಿ ಎಂ​.ಎ.ಯೂಸುಫ್ ಅಲಿ ಹಾಗೂ ಸಹ ಉದ್ಯಮಿಗಳಾದ ಡಿ.ಕೆ.ಶಿವಕುಮಾರ್ ಹಾಗೂ ಶರ್ಮಾ ಭಾಗಿಯಾಗಿದ್ದರು.

ಲುಲು ಹೈಪರ್ ಮಾರ್ಕೆಟ್ ಉದ್ಘಾಟನೆ

ಕೆಪಿಸಿಸಿ ಅಧ್ಯಕ್ಷ ಹಾಗೂ ಲುಲು ಮಾಲ್ ಸಹ ಉದ್ಯಮಿ ಡಿ.ಕೆ.ಶಿವಕುಮಾರ್ ಮಾತನಾಡಿ, 'ಬೆಂಗಳೂರಲ್ಲಿ 20 ಮಾಲ್​ಗಳಿವೆ. ಆದರೆ, ಎಲ್ಲದ್ದಕ್ಕಿಂತ ಲುಲು ಮಾಲ್ ವಿಭಿನ್ನವಾಗಿದ್ದು, ಜನರನ್ನು ಆಕರ್ಷಿಸುತ್ತದೆ. ಈ ಜಾಗದಲ್ಲಿ ಬಿಡಿಎ ವತಿಯಿಂದ ಅಭಿವೃದ್ಧಿಗಾಗಿ ಚಿಂತಿಸಲಾಗುತ್ತಿತ್ತು. ಅದು ಸಾಧ್ಯವಾಗದೇ ಇದ್ದಾಗ ನಾನೇ ಈ ಜಾಗ ಖರೀದಿಸಿ, ಇಲ್ಲಿ ವಿದ್ಯಾಸಂಸ್ಥೆ ನಿರ್ಮಿಸುವ ಯೋಜನೆ ಹೊಂದಿದ್ದೆ. ಅದೂ ಸಾಧ್ಯವಾಗದೆ ಇದ್ದಾಗ, ಜ್ಯೋತಿಷಿ ಗುರೂಜಿಗಳ ಮಾರ್ಗದರ್ಶನದಂತೆ ಮಾಲ್ ಕಟ್ಟಡ ನಿರ್ಮಿಸಲಾಯಿತು. ಇಂದು ಕನಸು ನನಸಾಗಿದ್ದು, ಇದರ ಏಳಿಗೆಗೆ ಕಾರಣವಾದ ಶೋಭಾ ಡೆವಲಪರ್ಸ್ ಹಾಗೂ ಲುಲುಗೆ ಧನ್ಯವಾದ' ಎಂದರು.

'ಎಸ್.ಎಂ.ಕೃಷ್ಣ ಅವರು ನಗರ ಬೆಳೆಸಿದ ರೀತಿಗೆ, ಇಂದು ಅಂತಾರಾಷ್ಟ್ರೀಯ ಜನರು ಮೊದಲು ಬೆಂಗಳೂರಿಗೆ ಬಂದು ನಂತರ ದೆಹಲಿಗೆ ಹೋಗ್ತಾರೆ. ಪ್ರಪಂಚದಾದ್ಯಂತ ನೂರು ಮಾಲ್​​ಗಳನ್ನು ಸುತ್ತಿ ಈ ಮಾಲ್​ ಡಿಸೈನ್ ಮಾಡಲಾಗಿದೆ' ಎಂದು ಹೇಳಿದರು.

ಎಂಡಿ ಎಂ.ಎ.ಯೂಸುಫ್ ಅಲಿ ಮಾತನಾಡುತ್ತಾ, 'ನಾವು ಪ್ರಪಂಚದಾದ್ಯಂತ ಲುಲು ಹೈಪರ್ ಮಾರ್ಕೆಟ್​ ಉದ್ಯಮಗಳನ್ನು ನಡೆಸುತ್ತಿದ್ದು, ಭಾರತದಲ್ಲಿ ಯಾವುದೇ ಯೋಜನೆಯು ನಮಗೆ ಯಾವಾಗಲೂ ವಿಶೇಷವಾಗಿರುತ್ತದೆ. ಬೆಂಗಳೂರಿನ ಬಹು-ಜನಾಂಗೀಯ ಮತ್ತು ಕಾಸ್ಮೋಪಾಲಿಟನ್ ನಿವಾಸಿಗಳಿಗೆ, ವಿಶ್ವ ದರ್ಜೆಯ ಶಾಪಿಂಗ್ ಅನುಭವವನ್ನು ನೀಡುವ ಸಲುವಾಗಿ ಲುಲುವನ್ನು ಆರಂಭಿಸಲಾಗಿದೆ. ಲುಲು ಗ್ರೂಪ್ ಭಾರತದಲ್ಲಿ 5 ಪ್ರಾಪರ್ಟಿಗಳಲ್ಲಿ 5,000 ಕೋಟಿ ರೂಪಾಯಿಗಳ ಚಿಲ್ಲರೆ ಹೂಡಿಕೆ ಮಾಡಿದೆ. ಲುಲು ಮಾಲ್​​ಅನ್ನು ಈಗಾಗಲೇ ಬೆಂಗಳೂರು, ಕೊಚ್ಚಿಯಲ್ಲಿ ನಿರ್ಮಿಸಲಾಗಿದ್ದು, ಮುಂಬರುವ ದಿನಗಳಲ್ಲಿ ತಿರುವನಂತಪುರಂ ಮತ್ತು ಲಖನೌಗಳಲ್ಲಿ ಪ್ರಾರಂಭಿಸಲಾಗುವುದು' ಎಂದು ಹೇಳಿದರು.

ಮಾಲ್ ಉದ್ಘಾಟಿಸಿದ ಮಾಜಿ ಸಿಎಂ ಎಸ್​.ಎಂ.ಕೃಷ್ಣ ಮಾತನಾಡಿ, 'ಬೆಂಗಳೂರು ಬೆಳೆಯುತ್ತಿದೆ. ರಾಜ್ಯ ಸರ್ಕಾರ ನೀರು, ವಿದ್ಯುತ್ ಮೊದಲಾದ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ಕೊಡಬೇಕು. ನಗರಕ್ಕೆ ತುಂಬಾ ಸಾಮರ್ಥ್ಯ ಇದ್ದು, ಇದಕ್ಕೆ ತಕ್ಕ ಹಾಗೆ ಸರ್ಕಾರ ಬೆಳೆಸಬೇಕಿದೆ' ಎಂದರು.

ಮಾಲ್​ನ ವಿಶೇಷತೆಗಳು:

  • ಲುಲು ಮಾಲ್​ ಬೆಂಗಳೂರಿನ ಅತಿ ದೊಡ್ಡ ಹೈಪರ್ ಮಾರ್ಕೆಟ್ ಆಗಿದ್ದು, ಅತಿ ದೊಡ್ಡ ಒಳಾಂಗಣ ಮನರಂಜನಾ ಕೇಂದ್ರವನ್ನು ಹೊಂದಿದೆ.
  • ವಿಧಾನಸೌಧ, ಮೆಜೆಸ್ಟಿಕ್​ಗೆ ಸಮೀಪಿದಲ್ಲಿರುವ ಮಾಲ್​ ಇದಾಗಿದ್ದು, ಐದು ಮಹಡಿಗಳಲ್ಲಿ 8 ಲಕ್ಷ ಚದರ ಅಡಿ ವಿಸ್ತಾರ ಹೊಂದಿದೆ.
  • 132 ಮಳಿಗೆಗಳು ಮತ್ತು 17 ಕಿಯೋಸ್ಕ್​ಗಳಿವೆ.
  • ಬ್ರಾಂಡೆಡ್ ಉಡುಪುಗಳು, ಫ್ಯಾಷನ್ ಪರಿಕರಗಳು, ಆಭರಣಗಳು, ಉಡುಗೊರೆಗಳು, ಎಲೆಕ್ಟ್ರಾನಿಕ್ ವಸ್ತುಗಳು, ಫುಡ್ ಕೋರ್ಟ್, ರೆಸ್ಟೋರೆಂಟ್‌ಗಳು ಮತ್ತು ಕೆಫೆಗಳನ್ನು ಹೊಂದಿದೆ.
  • ಮಕ್ಕಳಿಗಾಗಿ 60,000 ಚದರ ಅಡಿ ವಿಸ್ತಾರವನ್ನು ಹೊಂದಿರುವ ಫಂಚುರಾದಲ್ಲಿ, ಫಂಚುರಾ ರೋಲರ್ ಗ್ಲೈಡರ್, ಟ್ಯಾಗ್ ಅರೆನಾ, ಸಾಹಸ ಕೋರ್ಸ್ ಮತ್ತು ಟ್ರ್ಯಾಂಪೊಲೈನ್, ಇತ್ತೀಚಿನ ವಿಆರ್ ರೈಡ್ಸ್, 9 ಡಿ ಥಿಯೇಟರ್ ಮತ್ತು ಬಂಪರ್ ಕಾರುಗಳಂತಹ ಆಕರ್ಷಣೆಗಳನ್ನು ಹೊಂದಿದೆ.
  • 23 ಫುಡ್ ಕೋರ್ಟ್ ಹೊಂದಿದ್ದು, 1000 ಆಸನಗಳನ್ನು ಹೊಂದಿದೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಕರಾಟೆ ಸ್ಪರ್ಧೆ ಆಯೋಜನೆ: ಗಮನಸೆಳೆದ ಪಂಚ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.