ETV Bharat / state

ಡಾ. ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ಕಟ್ಟಡ ಕಾಮಗಾರಿ ಸೆಪ್ಟೆಂಬರ್‌ಗೆ ಪೂರ್ಣ: ಡಿಸಿಎಂ ಅಶ್ವತ್ಥ್​ನಾರಾಯಣ್​ ಸ್ಪಷ್ಟನೆ

"ಐಐಎಂನಂತಹ ರಾಷ್ಟ್ರೀಯ ಸಂಸ್ಥೆ ಮಾದರಿಯಲ್ಲೇ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‌ ಸಂಸ್ಥೆಯನ್ನು ಅಭಿವೃದ್ಧಿ ಪಡಿಸಲಾಗುವುದು. ವಿಶ್ವಮಟ್ಟದಲ್ಲಿ ಸಂಸ್ಥೆ ಹೆಸರು ಮಾಡಬೇಕು ಎಂಬ ಗುರಿಯೊಂದಿಗೆ ರಾಜ್ಯ ಸರ್ಕಾರ ಇದಕ್ಕೆ ಆದ್ಯತೆ ನೀಡಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ್​ನಾರಾಯಣ ತಿಳಿಸಿದರು.

author img

By

Published : May 18, 2020, 6:36 PM IST

Ashwath Narayan
ಅಶ್ವತ್ಥ್​ನಾರಾಯಣ್​

ಬೆಂಗಳೂರು: ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮಾದರಿಯ ಪ್ರತಿಷ್ಠಿತ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಕಟ್ಟಡದ ಕಾಮಗಾರಿ ಮುಂದಿನ ಸೆಪ್ಟೆಂಬರ್‌ ಒಳಗೆ ಪೂರ್ಣಗೊಳ್ಳಲಿದ್ದು, ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ್​ನಾರಾಯಣ ಹೇಳಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬೇಸ್‌) ಕಟ್ಟಡದ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.
"ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಸ್ವಾಯತ್ತ ಸಂಸ್ಥೆಯಾಗಿ ತಲೆ ಎತ್ತಲಿರುವ ಕಟ್ಟಡದ ಕಾಮಗಾರಿ ಶೇ. 90ರಷ್ಟು ಆಗಿದ್ದು, ಸೆಪ್ಟೆಂಬರ್‌ ಒಳಗೆ ಪೂರ್ಣಗೊಳ್ಳುವುದು. ಈಗಾಗಲೇ ಬೇರೆ ಕಡೆ ತರಗತಿಗಳು ಆರಂಭವಾಗಿವೆ. 166 ಕೋಟಿ ರೂ. ವೆಚ್ಚದಲ್ಲಿ 2 ವರ್ಷದಲ್ಲಿ ಕಟ್ಟಡ ಕಾಮಗಾರಿ ನಡೆಸುವ ಗುರಿ ಹೊಂದಲಾಗಿತ್ತು. ಅದರಂತೆ ಸೆಪ್ಟೆಂಬರ್ ವೇಳೆಗೆ ಕಾಮಗಾರಿ ಮುಗಿಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಈ ಕಟ್ಟಡವನ್ನು ದೇಶಕ್ಕೆ ಅರ್ಪಣೆ ಮಾಡಬೇಕು ಎಂಬುದು ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ನಮ್ಮೆಲ್ಲರ ಇಚ್ಛೆಯಾಗಿದೆ," ಎಂದು ಸಚಿವರು ತಿಳಿಸಿದರು.

Dr. Ambedkar School of Economics to be completed by September: Ashwath Narayan
ಡಾ. ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ಕಟ್ಟಡ ಪರಿಶೀಲಿಸಿದ ಡಿಸಿಎಂ
"ಐಐಎಂನಂತಹ ರಾಷ್ಟ್ರೀಯ ಸಂಸ್ಥೆ ಮಾದರಿಯಲ್ಲೇ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‌ ಸಂಸ್ಥೆಯನ್ನು ಅಭಿವೃದ್ಧಿ ಪಡಿಸಲಾಗುವುದು. ವಿಶ್ವಮಟ್ಟದಲ್ಲಿ ಸಂಸ್ಥೆ ಹೆಸರು ಮಾಡಬೇಕು ಎಂಬ ಗುರಿಯೊಂದಿಗೆ ರಾಜ್ಯ ಸರ್ಕಾರ ಇದಕ್ಕೆ ಆದ್ಯತೆ ನೀಡಿದೆ. ಸಂಸ್ಥೆಯಲ್ಲಿ ಶಿಕ್ಷಣ ಪೂರೈಸುವ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವೂ ಉತ್ತಮವಾಗಿದ್ದು, ವಿಶ್ವಮಟ್ಟದ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಸಮಾಜ ಹಾಗೂ ಕಾರ್ಯಕ್ಷೇತ್ರದಲ್ಲಿ ದೊಡ್ಡ ವ್ಯತ್ಯಾಸ ಮಾಡಬಲ್ಲರು,"ಎಂದು ಸಂಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹೈಟೆಕ್‌ ಕ್ಯಾಂಪಸ್‌: "ಬೇಸ್‌ನಲ್ಲಿ ಕಲಿಕೆಗೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಉಪನ್ಯಾಸಕರ ಪ್ರತಿ ಪಾಠ ರೆಕಾರ್ಡ್‌ ಆಗುವ ವ್ಯವಸ್ಥೆ ಇರಲಿದೆ. ವಿದ್ಯಾರ್ಥಿಗಳ ಹಾಸ್ಟೆಲ್‌ ಬ್ಲಾಕ್‌, ಬೋಧಕ ಸಿಬ್ಬಂದಿಯ ಬ್ಲಾಕ್‌, ಅಧ್ಯಾಪಕರ ವಸತಿ ಸಮುಚ್ಚಯ, ಅತಿಥಿ ಗೃಹ, ವಾಕಿಂಗ್ ಪಾತ್‌ ಎಲ್ಲವೂ ಕ್ಯಾಂಪಸ್‌ನಲ್ಲಿ ಇರಲಿದೆ,"ಎಂದು ವಿವರಿಸಿದರು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 126ನೇ ಜಯಂತಿ ಸ್ಮರಣಾರ್ಥ ಆರಂಭಿಸಲಾದ ಅಂಬೇಡ್ಕರ್​​​​ ಸ್ಕೂಲ್​‌ ಆಫ್‌ ಎಕನಾಮಿಕ್ಸ್‌' ಕಟ್ಟಡದ ಶಿಲಾನ್ಯಾಸವನ್ನು 2017ರ ಏಪ್ರಿಲ್ 14 ರಂದು ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನೆರವೇರಿಸಿದ್ದರು. 2017ರ ಅಕ್ಟೋಬರ್‌ನಲ್ಲಿ ಐದು ವರ್ಷಗಳ ಇಂಟಿಗ್ರೇಟೆಡ್‌ ಎಂಎಸ್‌ಸಿ ಅರ್ಥಶಾಸ್ತ್ರ ಕೋರ್ಸ್‌ ಆರಂಭವಾಗಿತ್ತು. ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನ ನಿರ್ದೇಶಕರೂ ಆಗಿರುವ ಮುಖ್ಯಮಂತ್ರಿಗಳ ಸಲಹೆಗಾರ ಎಂ. ಲಕ್ಷ್ಮೀನಾರಾಯಣ ಹಾಗೂ ಸಿಇಓ ಎಂ.ಬಿ ದ್ಯಾಬೇರಿ, ಉನ್ನತ ಶಿಕ್ಷಣ ಮಂಡಳಿ ಉಪಾಧ್ಯಕ್ಷ ಎಸ್.ವಿ. ರಂಗನಾಥ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್‌ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.