ETV Bharat / state

ಬೆಂಗಳೂರು: ಹಾಡಹಗಲೇ ಚಾಕುವಿನಿಂದ ಕತ್ತು ಸೀಳಿ ದಂಪತಿಯ ಬರ್ಬರ ಹತ್ಯೆ.. 4 ವಿಶೇಷ ತನಿಖಾ ತಂಡ ರಚನೆ - bengalore double murder case

ಬಿಎಂಟಿಸಿಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಶಾಂತರಾಜು, ಐದು ವರ್ಷಗಳ ಹಿಂದೆ ನಿವೃತ್ತಿಯಾಗಿದ್ದರು. ಶಾಂತರಾಜ್ ದಂಪತಿಗೆ ಮಕ್ಕಳಿರಲಿಲ್ಲ. ಇಂದು ಮಧ್ಯಾಹ್ನದವರೆಗೂ ನೆರೆಹೊರೆ ಮನೆಯವರೊಂದಿಗೆ ಮಾತನಾಡಿದ್ದರು. ಮಧ್ಯಾಹ್ನದ ಬಳಿಕ ಪಕ್ಕದ ಮನೆಯವರು ಮನೆಗೆ ಬಂದು ನೋಡಿದಾಗ ಕೊಲೆ ಸಂಗತಿ ಬೆಳಕಿಗೆ ಬಂದಿದೆ‌.

double-murder-case-in-bengalore
ದಂಪತಿಯ ಬರ್ಬರ ಹತ್ಯೆ
author img

By

Published : Aug 20, 2021, 4:54 PM IST

Updated : Aug 20, 2021, 10:46 PM IST

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ದಿನದಂದೇ ಅಪರಿಚಿತ ಹಂತಕರು ವೃದ್ಧ ದಂಪತಿಯನ್ನು ಗುರಿಯಾಗಿಸಿಕೊಂಡು ಚಾಕುವಿನಿಂದ ತಿವಿದು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ‌‌.

ಕೆ. ಎಸ್​ ಲೇಔಟ್​ನ ಕಾಶಿನಗರದಲ್ಲಿ ವಾಸವಾಗಿದ್ದ ಶಾಂತರಾಜು (65) ಹಾಗೂ ಪ್ರೇಮಲತಾ (62) ಕೊಲೆಯಾದ ದಂಪತಿಯಾಗಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲಿಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡು ಹಂತಕರ ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ.

ವೃದ್ಧ ದಂಪತಿ ಮನೆಗೆ ನಗರ ಪೊಲೀಸ್ ಕಮೀಷನರ್​ ಕಮಲ್ ಪಂತ್ ಭೇಟಿ ನೀಡಿದರು

ಬಿಎಂಟಿಸಿಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಶಾಂತರಾಜು, ಐದು ವರ್ಷಗಳ ಹಿಂದೆ ನಿವೃತ್ತಿಯಾಗಿದ್ದರು. ಕಾಶಿನಗರದಲ್ಲಿ ಸ್ವಂತ ಮನೆಯಲ್ಲಿ ವಾಸವಾಗಿದ್ದ ಶಾಂತರಾಜು ದಂಪತಿಗೆ ಮಕ್ಕಳಿರಲಿಲ್ಲ. ತಮ್ಮ ಮನೆಯಲ್ಲಿನ ಇತರ ಎರಡು ರೂಂಗಳನ್ನು ಬಾಡಿಗೆಗೆ ನೀಡಿದ್ದರು.‌ ಬಾಡಿಗೆಯಿಂದ ಬಂದ ಹಣದಿಂದಲೇ ಜೀವನ ನಡೆಸುತ್ತಿದ್ದರು. ಇಂದು ಮಧ್ಯಾಹ್ನದವರೆಗೂ ನೆರೆಹೊರೆ ಮನೆಯವರೊಂದಿಗೆ ಮಾತನಾಡಿದ್ದರು. ಮಧ್ಯಾಹ್ನದ ಬಳಿಕ ಪಕ್ಕದ ಮನೆಯವರು ಮನೆಗೆ ಬಂದು ನೋಡಿದಾಗ ಕೊಲೆ ಸಂಗತಿ ಬೆಳಕಿಗೆ ಬಂದಿದೆ‌.

ಪರಿಚಯಸ್ಥರೇ ಕೊಲೆ ಮಾಡಿರುವ ಶಂಕೆ:

ಪ್ರಾಥಮಿಕ ತನಿಖೆಯಲ್ಲಿ ಪರಿಚಯಸ್ಥರೇ ದಂಪತಿಯನ್ನು ಕೊಲೆ ಮಾಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇಂದು ಮಧ್ಯಾಹ್ನ ಮನೆಗೆ ಬಂದಿದ್ದ ಆಗಂತುಕರು ಕೆಲ ಹೊತ್ತು ಕಾಲ ಕಳೆದಿದ್ದಾರೆ‌‌‌. ಇದಕ್ಕೆ ಪೂರಕವಾಗಿ ಸಾವಿನ ಮನೆಯ ಟೇಬಲ್​ನಲ್ಲಿ ಮೂವರು ಚಹಾ ಕುಡಿದಿರುವ ಲೋಟ ಇರುವುದು ಪತ್ತೆಯಾಗಿದೆ. ಬಲವಂತವಾಗಿ ಮನೆಗೆ ನುಗ್ಗಿ ಬರದಿರುವುದು ತನಿಖೆಯಲ್ಲಿ ಕಂಡುಕೊಂಡಿರುವ ಪೊಲೀಸರು ಮೇಲ್ನೋಟಕ್ಕೆ ಪರಿಚಯಸ್ಥರೇ ಕೊಲೆ ಮಾಡಿರುವ ಸಾಧ್ಯತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಚಾಕುವಿನಿಂದ ಚುಚ್ಚಿ ದಿಂಬಿನಿಂದ ಸಾಯಿಸಿದ ಹಂತಕರು:

ಪೂರ್ವ ಸಂಚಿನಂತೆ ಆಗಮಿಸಿದ್ದ ಹಂತಕರು ಶಾಂತರಾಜುನನ್ನು ಚಾಕುವಿನಿಂದ ಚುಚ್ಚಿ, ದಿಂಬಿನಿಂದ ಉಸಿರುಗಟ್ಟಿ ಸಾಯಿಸಿದ್ದರೆ, ಮತ್ತೊಂದು ಕೊಠಡಿಯಲ್ಲಿ ಪ್ರೇಮಲತಾರನ್ನು ಕೇಬಲ್​​ ವೈರ್​ನಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾರೆ. ಘಟನಾ ಸ್ಥಳದಲ್ಲಿ‌ ಕೇಬಲ್ ವೈರ್ ಪತ್ತೆಯಾಗಿದೆ‌. ಸ್ಥಳೀಯ ಪೊಲೀಸರು ಮನೆ ಸುತ್ತಮುತ್ತಲು ಹಂತಕರು ಬಂದು ಹೋಗಿರುವುದನ್ನು ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಯ ಮೂಲಕ ಪರಿಶೀಲನೆ ನಡೆಸುತ್ತಿದ್ದಾರೆ.

ಮತ್ತೊಂದೆಡೆ ನೆರೆಹೊರೆಯವರು ಹಾಗೂ ಸಂಬಂಧಿಕರಿಂದ ಪೊಲೀಸರು ಹೇಳಿಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಎಫ್ಎಸ್​​ಎಲ್ ಅಧಿಕಾರಿಗಳು ಬಂದು‌ ಸಾಕ್ಷ್ಯಾಧಾರ ಸಂಗ್ರಹಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.

ಘಟನಾ ಸ್ಥಳಕ್ಕೆ ಕಮೀಷರ್ ಕಮಲ್ ಪಂತ್ ದೌಡು:

ಘಟನೆ ಗಂಭೀರತೆ ಅರಿತ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ನಗರ ಹೆಚ್ಚುವರಿ‌ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ನಂತರ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಪಂತ್, ದಂಪತಿ‌ ಮನೆಗೆ ಅಕ್ಕಪಕ್ಕದ ಮನೆಯವರು ಬಿಟ್ಟರೆ ಯಾರೂ ಹೋಗುತ್ತಿರಲಿಲ್ಲ.

ಇಂದು ಮಧ್ಯಾಹ್ನ ದಂಪತಿ ಮನೆಯಲ್ಲಿ ಇದ್ದಾಗ ಅಪರಿಚಿತರು ಮನೆಗೆ ಬಂದು ಕೆಲ ಸಮಯ ಕಳೆದ ಬಳಿಕ‌ ಕೃತ್ಯ ಎಸಗಿದ್ದಾರೆ. ಮನೆಯಲ್ಲಿದ್ದ ಅಲ್ಮೇರಾ ತೆರೆದಿದ್ದಾರೆ. ಏನಾದರೂ ಕೊಂಡೊಯ್ಯಲಾಗಿದೆಯಾ ಎಂದು‌ ಪರಿಶೀಲನೆ ಮಾಡಲಾಗುತ್ತಿದೆ ಎಂದರು.

ಹಂತಕರ ಪತ್ತೆಗಾಗಿ ನಾಲ್ಕು ವಿಶೇಷ ತಂಡ ರಚನೆ:

ಮೆಲ್ನೋಟಕ್ಕೆ ಪರಿಚಿತರಿಂದಲೇ ಕೃತ್ಯ ನಡೆದಿರುವಂತಿದೆ. ಪ್ರಕರಣದ ತನಿಖೆಗಾಗಿ ನಾಲ್ಕು ವಿಶೇಷ ತಂಡಗಳನ್ನ ರಚನೆ ಮಾಡಲಾಗಿದೆ. ಹತ್ಯೆಯಾದವರ ಸಂಬಂಧಿಕರು ನಿಖರವಾಗಿ ಹೇಳಿದರೆ, ಮಾಹಿತಿ ಸಂಗ್ರಹಿಸಿ ತನಿಖೆ ನಡೆಸಲಾಗುವುದು.‌ ಘಟನೆ ಹಿನ್ನೆಲೆ ನೆರೆಹೊರೆಯವರನ್ನು ವಿಚಾರಣೆ ಮಾಡಲಾಗಿದೆ. ಶೀಘ್ರದಲ್ಲಿ ಹಂತಕರನ್ನು ಬಂಧಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಓದಿ: ತುಮಕೂರು ಜಿಲ್ಲೆಯ ಗಡಿಭಾಗದ ಜನರಿಗೆ ದರೋಡೆಕೋರರ ಭಯ..

Last Updated : Aug 20, 2021, 10:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.