ಬೆಂಗಳೂರು: ಕೊರೊನಾ ರೂಪಾಂತರ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಇದೀಗ ರಾಜ್ಯ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಯಾವುದೇ ದೇಶದಿಂದ ಬಂದರೂ ಕೋವಿಡ್ ನೆಗೆಟಿವ್ ರಿಪೋರ್ಟ್ ತರುವುದು ಕಡ್ಡಾಯ ಮಾಡಲಾಗಿದೆ.
ವಿದೇಶಿ ಪ್ರಯಾಣದ ಕುರಿತು ಆರೋಗ್ಯ ಇಲಾಖೆ ಆದೇಶ ಹೊರಡಿಸಿದ್ದು, 72 ಗಂಟೆಯೊಳಗೆ ಟೆಸ್ಟ್ ಮಾಡಿಸಿ ಕೋವಿಡ್ ನೆಗೆಟಿವ್ ರಿಪೋರ್ಟ್ ತರುವುದು ಕಡ್ಡಾಯ ಮಾಡಲಾಗಿದೆ. ಇಂದಿನಿಂದಲೇ ಏರ್ಪೋರ್ಟ್ ಬಂದರುಗಳಲ್ಲಿ ಆದೇಶ ಜಾರಿಗೆ ಬರಲಿದೆ.
ಓದಿ: ಪುರುಷ ಪ್ರಧಾನ ವ್ಯವಸ್ಥೆಗೆ ಸಶಕ್ತ ಮಹಿಳೆ ನಡೆಸಿಕೊಳ್ಳುವ ರೀತಿಯೇ ಗೊತ್ತಿಲ್ಲ: ಹೈಕೋರ್ಟ್
ಒಂದು ವೇಳೆ ರಿಪೋರ್ಟ್ ತರದೇ ಹೋದರೆ ರಾಜ್ಯದ ಏರ್ ಪೋರ್ಟ್, ಬಂದರುಗಳಲ್ಲೇ ಸ್ವ್ಯಾಬ್ ತೆಗೆದು ಟೆಸ್ಟ್ ಮಾಡಲಾಗುತ್ತೆ. ರಿಪೋರ್ಟ್ ಬರುವ ತನಕ ಕಡ್ಡಾಯವಾಗಿ ಹೋಮ್ ಐಸೋಲೇಷನ್ ನಲ್ಲೇ ಇರಬೇಕು. ರಿಪೋರ್ಟ್ ಗೆ ತಗಲುವ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕಾಗುತ್ತದೆ.