ETV Bharat / state

ಕಾಂಗ್ರೆಸ್ ನಾಯಕರ ಸಣ್ಣ ಗೊಂದಲ : ಬಿಜೆಪಿ ಬಾಯಿಗೆ ಆಹಾರ - ರೇಣುಕಾಚಾರ್ಯ ಶೇರ್​ ಕಾಂಗ್ರೆಸ್​ ವಿಡಿಯೋ

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯತಿಥಿ ಹಾಗೂ ಉಕ್ಕಿನ ಮನುಷ್ಯ ವಲ್ಲಭ್ ಭಾಯ್ ಪಟೇಲ್ ಜನ್ಮದಿನ ಒಂದೇ ದಿನ ಬರುತ್ತದೆ. ಆದರೆ, ಆಚರಣೆಯಲ್ಲಿ ಕಾಂಗ್ರೆಸ್​ ಎಡವಟ್ಟು ಮಾಡಿಕೊಂಡಿದೆ. ಈ ಕುರಿತಾದ ವಿಡಿಯೋವನ್ನು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಟ್ವಿಟರ್​ನಲ್ಲಿ ಶೇರ್​ ಮಾಡಿ ವ್ಯಂಗ್ಯವಾಡಿದ್ದಾರೆ..

congress
ಕಾಂಗ್ರೆಸ್​
author img

By

Published : Nov 24, 2021, 2:11 PM IST

ಬೆಂಗಳೂರು : ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯತಿಥಿ ಹಾಗೂ ಉಕ್ಕಿನ ಮನುಷ್ಯ ವಲ್ಲಭ್ ಭಾಯ್ ಪಟೇಲ್ ಜನ್ಮದಿನವನ್ನು ಕಾಂಗ್ರೆಸ್​ ಒಟ್ಟಿಗೆ ಆಚರಣೆ ಮಾಡುತ್ತಿತ್ತು. ಆದರೆ, ಈ ಬಾರಿ ಎಡವಟ್ಟು ಮಾಡಿಕೊಂಡಿದೆ. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಪಟೇಲರನ್ನು ಕಾಂಗ್ರೆಸ್ ಮರೆತಿದೆ ಎಂಬ ಆರೋಪಗಳು ಕೇಳಿ ಬಂದ ಬೆನ್ನಲ್ಲೆ ಎಲ್ಲಿಯೂ ಪಟೇಲರಿಗೆ ಅಪಮಾನ ಆಗದಂತೆ ನೋಡಿಕೊಂಡು ಬರುತ್ತಿತ್ತು. ಆದರೆ, ಕಳೆದ ಅ.31ರಂದು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಇಂದಿರಾ ಗಾಂಧಿ ಪುಣ್ಯತಿಥಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮ ವೇದಿಕೆ ಮೇಲೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಈ ವಿಚಾರ ನೆನಪಾಗಿ ಇಂದು ಪಟೇಲರ ಜನ್ಮದಿನ. ಅವರಿಗೂ ಗೌರವ ಸಲ್ಲಿಸುವುದು ಉತ್ತಮ. ಇಲ್ಲವಾದರೆ ಬಿಜೆಪಿಯವರು ಇದನ್ನೇ ಆಡಿಕೊಳ್ಳುತ್ತಾರೆ. ಅವರಿಗೆ ಅನುಕೂಲ ಮಾಡಿ ಕೊಡುವುದು ಬೇಡ ಎಂದು ವಿವರಿಸಿದ್ದರು.

  • ಬಿಜೆಪಿಗೆ ಹೆದರಿ ಪಟೇಲರಿಗೆ ಗೌರವ ತೋರಿದ ಕಾಂಗ್ರೆಸ್! ನವರ ಕರ್ಮಕಥೆ. pic.twitter.com/TgytqmplOy

    — M P Renukacharya (@MPRBJP) November 23, 2021 " class="align-text-top noRightClick twitterSection" data=" ">

ಇದಾದ ಬಳಿಕ ಪಟೇಲರ ಭಾವಚಿತ್ರವನ್ನೂ ಇರಿಸಿ ಗೌರವ ಸೂಚಿಸುವ ಕಾರ್ಯ ನಡೆಸಲಾಯಿತು. ಸಮಾರಂಭದ ಆರಂಭಕ್ಕೆ ಮುನ್ನ ನಡೆದ ಈ ಬೆಳವಣಿಗೆ ಅಂದು ಹೆಚ್ಚಿನವರ ಗಮನಕ್ಕೆ ಬರಲಿಲ್ಲ.

ಆದರೆ, ಕೆಲ ದಿನಗಳ ಬಳಿಕ ಇಬ್ಬರೂ ಕಾಂಗ್ರೆಸ್ ನಾಯಕರು ಮಾತನಾಡಿಕೊಂಡಿದ್ದ ವಿಡಿಯೋವನ್ನು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಶೇರ್​ ಮಾಡಿ ಬಿಜೆಪಿಗೆ ಹೆದರಿ ಪಟೇಲರಿಗೆ ಗೌರವ ತೋರಿದ ಕಾಂಗ್ರೆಸ್​​​ನವರ ಕರ್ಮಕಥೆ ಎಂದು ಬಣ್ಣಿಸಿದ್ದರು.

ಇದರ ಬೆನ್ನಲ್ಲೇ ಬಿಜೆಪಿ ನಾಯಕರು ಹೇಳಿಕೆ ನೀಡಲು ಆರಂಭಿಸಿದರು. ಇದಕ್ಕೆ ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ನೀಡಿ ನಾವೇನು ಪಟೇಲರಿಗೆ ಅವಮಾನ ಮಾಡಿಲ್ಲ. ಯಾವುದೇ ಅಚಾತುರ್ಯ ಆಗಿಲ್ಲ. ಸಣ್ಣ ಗೊಂದಲ ಏರ್ಪಟ್ಟಿತ್ತು. ಅದನ್ನು ಚರ್ಚಿಸಿದ ಬಳಿಕ ಇಬ್ಬರ ಭಾವಚಿತ್ರವನ್ನು ಇರಿಸಿಯೇ ಕಾರ್ಯಕ್ರಮ ನಡೆಸಿದ್ದೇವೆ ಎಂದು ಸಮಜಾಯಿಷಿ ನೀಡಿದ್ದಾರೆ.

ಪ್ರಧಾನಿ ಇಂದಿರಾ ಗಾಂಧಿ ಪುಣ್ಯತಿಥಿ ಹಾಗೂ ಉಕ್ಕಿನ ಮನುಷ್ಯ ಹಾಗೂ ಮಾಜಿ ಉಪಪ್ರಧಾನಿ ವಲ್ಲಭ್ ಭಾಯ್ ಪಟೇಲ್ ಜನ್ಮದಿನ ಒಂದಾಗಿ ನಡೆಸಬೇಕಾ ಎಂಬ ಗೊಂದಲ ಮತ್ತೊಮ್ಮೆ ಬಿಜೆಪಿಯವರ ಬಾಯಿಗೆ ಕಾಂಗ್ರೆಸ್ ಆಹಾರವಾಗುವಂತೆ ಮಾಡಿದ್ದು ಸುಳ್ಳಲ್ಲ.

ಇದನ್ನೂ ಓದಿ: ACB Raid... ಬೆಳ್ಳಂಬೆಳಗ್ಗೆ ಎಸಿಬಿ ಬಿಗ್ ಶಾಕ್: ರಾಜ್ಯದೆಲ್ಲೆಡೆ ಏಕಕಾಲಕ್ಕೆ 60 ಕಡೆ ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.