ETV Bharat / state

ಶನಿವಾರವೂ ಲಾಕ್​ಡೌನ್ ಕುರಿತು ಸಿಎಂ ನಿರ್ಧಾರ ಮಾಡ್ತಾರೆ: ಸಚಿವ ಸೋಮಣ್ಣ

author img

By

Published : Jul 7, 2020, 5:10 PM IST

ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಒಟ್ಟುಗೂಡಿಸಿಕೊಂಡು ಕೊರೊನಾ ನಿಯಂತ್ರಿಸುತ್ತೇವೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

Minister Somanna
ಸಚಿವ ಸೋಮಣ್ಣ

ಬೆಂಗಳೂರು: ಶನಿವಾರವೂ ಲಾಕ್​ಡೌನ್ ಮಾಡುವ ಬಗ್ಗೆ ನನಗೆ ಗೊತ್ತಿಲ್ಲ. ಭಾನುವಾರ ಲಾಕ್​ಡೌನ್ ಇದೆ. ಶನಿವಾರ ಲಾಕ್​ಡೌನ್ ಮಾಡುವ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧರಿಸುತ್ತಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಕೊರೊನಾ ಸೋಂಕು‌ ಹೆಚ್ಚಳ ಹಿನ್ನೆಲೆಯಲ್ಲಿ ಬಿಬಿಎಂಪಿ‌ ಪಶ್ಚಿಮ ವಲಯ ಕಚೇರಿಯಲ್ಲಿ ಇಂದು ಗೋವಿಂದರಾಜನಗರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲೂ ಕೊರೊನಾ ಸೆಂಟರ್ ಸ್ಥಾಪಿಸುವ ಬಗ್ಗೆ ಚರ್ಚಿಸಲಾಗಿದೆ ಎಂದರು.

ಗೋವಿಂದರಾಜನಗರದಲ್ಲಿ ಸೋಂಕು‌ ಹೆಚ್ಚುತ್ತಿದೆ. ಮುಖ್ಯಮಂತ್ರಿಗಳು ಇಂದು ಸಭೆ ಕರೆದಿದ್ದಾರೆ. ನಾವು ಒಂದೊಂದೇ ಕ್ಷೇತ್ರವನ್ನು ಗಮನಕ್ಕೆ ತೆಗೆದುಕೊಳ್ಳುತ್ತೇವೆ. ಗೋವಿಂದರಾಜನಗರ ಕ್ಷೇತ್ರದಲ್ಲಿ ಕಮಾಂಡ್ ಸೆಂಟರ್ ತೆರೆಯುತ್ತಿದ್ದೇವೆ. 9 ವಾರ್ಡ್​ಗಳಲ್ಲಿ ಪ್ರೈಮರಿ ಸೆಂಟರ್ ಪ್ರಾರಂಭಿಸಲಾಗುವುದು. ಈ‌ ಸೆಂಟರ್​ಗಳಲ್ಲಿ ವೈದ್ಯರು, ನರ್ಸ್ ಇರುತ್ತಾರೆ. ಇಡೀ‌ ಕ್ಷೇತ್ರದಲ್ಲಿ ರ‍್ಯಾಂಡಮ್‌ ಚೆಕ್ ಮಾಡುವುದಕ್ಕೆ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.

ಸ್ವ್ಯಾಬ್ ಟೆಸ್ಟ್ ಇಂದಿನಿಂದಲೇ ಮಾಡುತ್ತೇವೆ. ಕ್ಷೇತ್ರದಲ್ಲಿ ಆರು ಆ್ಯಂಬುಲೆನ್ಸ್ ನೀಡುತ್ತಿದ್ದೇವೆ. ಕ್ಷೇತ್ರದಲ್ಲಿ ಯಾರೇ ಕರೆ ಮಾಡಿದರೂ ಟೆಸ್ಟ್ ಮಾಡುತ್ತೇವೆ. ಕೊರೊನಾ ಸೋಂಕಿನಿಂದ ಮೃತರಾದರೂ ಶವ ಸಂಸ್ಕಾರ ಮಾಡುತ್ತೇವೆ. ಎಲ್ಲದಕ್ಕೂ ಇಂದಿನಿಂದಲೇ ಸಿದ್ಧತೆ ಮಾಡುತ್ತಿದ್ದೇವೆ. ಮೆಡಿಕಲ್ ಪರಿಕರಗಳನ್ನೂ ನಾವೇ ಒದಗಿಸ್ತೇವೆ. ಖರೀದಿಗೆ ನಮ್ಮ ಅಧಿಕಾರಿಗಳಿಗೆ ಅಧಿಕಾರ ಕೊಟ್ಟಿದ್ದೇವೆ. ಗೋವಿಂದರಾಜನಗರದಲ್ಲಿ ಮೊದಲಿಗೆ ಇದನ್ನು ಮಾಡ್ತಿದ್ದೇವೆ. ನಂತರ ನಗರದ 27 ಕ್ಷೇತ್ರಗಳಲ್ಲೂ ಇದನ್ನು ವಿಸ್ತರಿಸುತ್ತೇವೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.