ETV Bharat / state

ಪೊಲೀಸ್ ಕಮಿಷನರ್ ಬದಲಾವಣೆ ಸಾಧ್ಯತೆ.. ಪಂತ್‌ ಜಾಗಕ್ಕೆ ದಯಾನಂದ್‌-ಎಂ ಎ ಸಲೀಂ ಇಬ್ಬರಲ್ಲಿ ಯಾರು!?

author img

By

Published : Aug 1, 2021, 7:15 PM IST

ರಾಜ್ಯ ಗುಪ್ತಚರ ವಿಭಾಗದ ಬಿ.ದಯಾನಂದ್, ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪ್ರತಾಪ್ ರೆಡ್ಡಿ, ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪಾಲ್ ಹಾಗೂ ರಾಜ್ಯ ಆಡಳಿತ ವಿಭಾಗದ ಎಡಿಜಿಪಿ ಎಂ ಎ ಸಲೀಂ ನಡುವೆ ಪೈಪೋಟಿ ಇದೆ. ಆದರೆ, ಕನ್ನಡಿಗರಾದ ಡಾ.ಎಂ ಅಬ್ದುಲ್ ಸಲೀಂ ಹಾಗೂ ದಯಾನಂದ್ ಈ ಇಬ್ಬರಲ್ಲಿ ಒಬ್ಬರು ನೇಮಕವಾದರೂ ಅಚ್ಚರಿ ಇಲ್ಲ..

chances-of-police-commissioner-changes
ಪೊಲೀಸ್ ಕಮೀಷನರ್ ಬದಲಾವಣೆ

ಬೆಂಗಳೂರು : ನಗರ ಪೊಲೀಸ್ ಆಯುಕ್ತರಾಗಿ ಕಮಲ್ ಪಂತ್ ಅಧಿಕಾರ ಸ್ವೀಕರಿಸಿ ನಾಳೆಗೆ ಒಂದು ವರ್ಷ ಮುಗಿಯುವ ಹಿನ್ನೆಲೆ ಹೊಸ ಕಮಿಷನರ್ ಬದಲಾವಣೆ ಸಾಧ್ಯತೆಯಿದೆ‌. ನಗರ ಪೊಲೀಸ್ ಇಲಾಖೆಗೆ ಸಾರಥಿಯಾಗಿರುವ ಕಮಲ್ ಪಂತ್ ಜಾಗಕ್ಕೆ ನೂತನ ಕಮಿಷನರ್ ನೇಮಕ ಸಾಧ್ಯತೆ ಹಿನ್ನೆಲೆ ಆಯುಕ್ತರ ರೇಸ್‌ನಲ್ಲಿ ನಾಲ್ವರ ಹೆಸರು ಕೇಳಿ ಬಂದಿವೆ.

ರಾಜ್ಯ ಗುಪ್ತಚರ ವಿಭಾಗದ ಬಿ.ದಯಾನಂದ್, ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪ್ರತಾಪ್ ರೆಡ್ಡಿ, ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪಾಲ್ ಹಾಗೂ ರಾಜ್ಯ ಆಡಳಿತ ವಿಭಾಗದ ಎಡಿಜಿಪಿ ಎಂ ಎ ಸಲೀಂ ನಡುವೆ ಪ್ರಬಲ ಪೈಪೋಟಿಯಿದೆ. ಇವರಲ್ಲಿ ಕನ್ನಡಿಗರಾದ ಡಾ.ಎಂ.ಅಬ್ದುಲ್ ಸಲೀಂ ಹಾಗೂ ದಯಾನಂದ್ ನಡುವೆ ಪೈಪೋಟಿ ಇದೆ ಎನ್ನಲಾಗುತ್ತಿದೆ‌.

1994ರ ಬ್ಯಾಚ್​ನ ಐಪಿಎಸ್ ಅಧಿಕಾರಿಯಾಗಿರುವ ದಯಾನಂದ್‌ ಪ್ರಸ್ತುತ ಎಡಿಜಿಪಿಯಾಗಿ ರಾಜ್ಯ ಗುಪ್ತಚರ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್, ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ.

1993ರ ಬ್ಯಾಚ್ ಐಪಿಎಸ್ ಅಧಿಕಾರಿ ಸಲೀಂ ಈ ಹಿಂದೆ ಅಪರಾಧ ವಿಭಾಗದ ಎಡಿಜಿಪಿ ಹಾಗೂ ಪೂರ್ವ ವಲಯದ ಐಜಿಪಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ‌. ತಮ್ಮದೇ‌ ಆದ ಕಾರ್ಯಶೈಲಿಯಿಂದ ದಕ್ಷ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ‌. ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಇಬ್ಬರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿವೆ.

ನಗರದಲ್ಲಿನ ಎಂಟು ವಿಭಾಗದಲ್ಲಿ ಬರುವ ಬಹುತೇಕ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಒಂದು ವರ್ಷ ತುಂಬದ ಇಬ್ಬರನ್ನು ಬಿಟ್ಟು ಎಲ್ಲರೂ ಬದಲಾವಣೆಯಾಗಲಿದ್ದಾರೆ.

ಕೆಲ ಐಪಿಎಸ್ ಅಧಿಕಾರಿಗಳು ಅದೇ ಸ್ಥಾನದಲ್ಲಿ ಉಳಿಯಲು ಕಸರತ್ತು ನಡೆಸಿದ್ದಾರೆ. ಸಿಎಂ ಬದಲಾವಣೆ ನಗರ ಪೊಲೀಸ್ ‌ಇಲಾಖೆಯಲ್ಲಿ ಸಂಚಲನ ಸೃಷ್ಟಿಸಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.

ಓದಿ: ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಪ್ರಭಾರಿಗಳ ನೇಮಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.