ETV Bharat / state

ರಾಜ್ಯದ ಜನರ ಕ್ಷಮೆ ಕೋರಿದ್ರು ಸಚಿವ ಶ್ರೀರಾಮುಲು: ಕಾರಣ?

ಸುಮಾರು 39 ಸಾವಿರ ಕೋಟಿ ಮೊತ್ತದ ಪರಿಹಾರ ಧನಕ್ಕೆ ಬೇಡಿಕೆ ಸಲ್ಲಿಸಿದ್ದೇವೆ. ಈ ಮೊತ್ತದ ಅಂದಾಜು ಹಾಗೂ ಪರಿಶೀಲನೆಯನ್ನು ಕೇಂದ್ರ ಸರ್ಕಾರ ನಡೆಸಿದ್ದು, ಆದಷ್ಟು ಬೇಗ ಪರಿಹಾರದ ಮೊತ್ತ ಬಿಡುಗಡೆಯಾಗಲಿದೆ ಎಂಬ ವಿಶ್ವಾಸವಿದೆ. ನಿರೀಕ್ಷೆಗೂ ಮೀರಿದ ವಿಳಂಬವಾಗಿರುವುದಕ್ಕೆ ನಾವು ಜನರ ಕ್ಷಮೆ ಕೋರುತ್ತೇವೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

author img

By

Published : Oct 3, 2019, 1:11 PM IST

Updated : Oct 3, 2019, 1:33 PM IST

ಆರೋಗ್ಯ ಸಚಿವ ಶ್ರೀರಾಮುಲು

ಬೆಂಗಳೂರು: ರಾಜ್ಯದ ನೆರೆ ಸಮಸ್ಯೆಗೆ ಕೇಂದ್ರದಿಂದ ಪರಿಹಾರ ಬರುವುದು ವಿಳಂಬವಾಗಿರುವುದಕ್ಕೆ ನಾವು ರಾಜ್ಯದ ಜನರ ಕ್ಷಮೆ ಕೋರುತ್ತೇವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಸವೆನ್ ಮಿನಿಸ್ಟರ್ಸ್ ಕ್ವಾಟ್ರಸ್​ನ ತಮ್ಮ ಅಧಿಕೃತ ವಸತಿಗೃಹದಲ್ಲಿಂದು ಬೆಳಗ್ಗೆ ಪೂಜೆ ಸಲ್ಲಿಸಿ ಗೃಹ ಪ್ರವೇಶ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೇಂದ್ರ ಸರ್ಕಾರದಿಂದ ನೆರೆ ಪರಿಹಾರದ ಹಣ ಬರುವುದು ತಡವಾಗಿದೆ. ಅದನ್ನು ನಾವು ಒಪ್ಪಲೇಬೇಕು. ಇದುವರೆಗೂ ಎಲ್ಲ ವಿಧದ ಪರಿಹಾರ ಧನವೂ ತುರ್ತಾಗಿ ಬರುತ್ತಿತ್ತು. ಈ ಬಾರಿ ಪರಿಹಾರ ಧನ ಬರುವಲ್ಲಿ ವಿಳಂಬವಾಗಿರುವುದಕ್ಕೆ ಮೊತ್ತ ದೊಡ್ಡದಾಗಿರುವುದು ಕೂಡ ಕಾರಣ ಎಂದು ಅಭಿಪ್ರಾಯಪಟ್ಟರು.

ಆರೋಗ್ಯ ಸಚಿವ ಶ್ರೀರಾಮುಲು

ಸರಿ ಸುಮಾರು 39 ಸಾವಿರ ಕೋಟಿ ಮೊತ್ತದ ಪರಿಹಾರ ಧನಕ್ಕೆ ಬೇಡಿಕೆ ಸಲ್ಲಿಸಿದ್ದೇವೆ. ಈ ಮೊತ್ತದ ಅಂದಾಜು ಹಾಗೂ ಪರಿಶೀಲನೆಯನ್ನು ಕೇಂದ್ರ ಸರ್ಕಾರ ನಡೆಸಿದ್ದು, ಆದಷ್ಟು ಬೇಗ ಪರಿಹಾರದ ಮೊತ್ತ ಬಿಡುಗಡೆಯಾಗಲಿದೆ ಎಂಬ ವಿಶ್ವಾಸವಿದೆ. ನಿರೀಕ್ಷೆಗೂ ಮೀರಿದ ವಿಳಂಬವಾಗಿರುವುದಕ್ಕೆ ನಾವು ಜನರ ಕ್ಷಮೆ ಕೋರುತ್ತೇವೆ ಎಂದರು.

ನಮಗೆ ಬಡವರು ಹಾಗೂ ನೆರೆ ಸಂತ್ರಸ್ತರು ಮುಖ್ಯ. ಇಲ್ಲಿ ಯಾವುದೇ ರಾಜಕಾರಣ ಮಾಡುವುದು ಸರಿಯಲ್ಲ. ನಮ್ಮೆಲ್ಲರ ಒಂದೇ ಗುರಿ ಕೇಂದ್ರದಿಂದ ಪರಿಹಾರ ತಂದು ಅವರ ಸಮಸ್ಯೆ ನಿವಾರಿಸುವುದು ಎಂದು ಸಚಿವರು ಹೇಳಿದರು.

ಆಶಾ ಕಾರ್ಯಕರ್ತರಿಗೆ ಅಭಿನಂದನೆ

ರಾಜ್ಯದಲ್ಲಿ ಆಶಾ ಕಾರ್ಯಕರ್ತರು ಶ್ಲಾಘನೀಯ ಕೆಲಸವನ್ನು ಮಾಡುತ್ತಿದ್ದಾರೆ. ವೈದ್ಯರು ಮಾಡಬೇಕಾಗಿರುವ ಕಾರ್ಯವನ್ನು ಅವರು ನಿರ್ವಹಿಸುತ್ತಿದ್ದಾರೆ. ರಾಜ್ಯದ ಎಲ್ಲಾ ಕಾರ್ಯಕರ್ತರಿಗೆ ನಾನು ಸರ್ಕಾರದ ಪರವಾಗಿ ಹಾಗೂ ಇಲಾಖೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಇಂದು ಸಚಿವ ಸಂಪುಟ ಸಭೆಯಲ್ಲಿ ಹಲವು ವಿಚಾರಗಳು ಚರ್ಚೆಗೆ ಬರಲಿವೆ. ಅವುಗಳಲ್ಲಿ ಆಶಾ ಕಾರ್ಯಕರ್ತರ ವೇತನ ಹೆಚ್ಚಳ ಕೂಡ ಒಂದು. ಈ ಸಂಬಂಧ ಚರ್ಚಿಸಿ ಅವರಿಗೆ ಸಂಪೂರ್ಣ ಸಹಕಾರ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಸಚಿವ ಶ್ರೀರಾಮುಲು ಭರವಸೆ ನೀಡಿದರು.

Intro:newsBody:ಕೇಂದ್ರದಿಂದ ಪರಿಹಾರ ವಿಳಂಬವಾಗಿದ್ದಕ್ಕೆ ರಾಜ್ಯದ ಜನತೆಯ ಕ್ಷಮೆ ಕೇಳುತ್ತೇವೆ: ಶ್ರೀರಾಮುಲು

ಬೆಂಗಳೂರು: ರಾಜ್ಯದ ನೆರೆ ಸಮಸ್ಯೆಗೆ ಕೇಂದ್ರದಿಂದ ಪರಿಹಾರ ಬರುವುದು ವಿಳಂಬವಾಗಿರುವುದಕ್ಕೆ ನಾವು ರಾಜ್ಯದ ಜನತೆಯ ಕ್ಷಮೆ ಕೇಳುತ್ತೇವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಸಪ್ತ ಸಚಿವರ ನಿವಾಸ (ಸೆವೆನ್ ಮಿನಿಸ್ಟರ್ಸ್ ಕ್ವಾಟ್ರಸ್)ನ ತಮ್ಮ ಅಧಿಕೃತ ವಸತಿಗೃಹದಲ್ಲಿ ಇಂದು ಬೆಳಗ್ಗೆ ಪೂಜೆ ಸಲ್ಲಿಸಿ ಗ್ರಹ ಪ್ರವೇಶ ಮಾಡಿದ ನಂತರ ಸುದ್ದಿಗಾರರ ಜತೆ ಮಾತನಾಡಿ, ಕೇಂದ್ರ ಸರ್ಕಾರದ ಹಣ ಬರುವುದು ತಡವಾಗಿದೆ ಅದನ್ನು ಒಪ್ಪಲೇ ಬೇಕು. ಇದುವರೆಗೂ ಎಲ್ಲ ವಿಧದ ಪರಿಹಾರ ಧನವೂ ತುರ್ತಾಗಿ ಬರುತ್ತಿತ್ತು. ಈ ಸಾರಿ ಪರಿಹಾರ ಧನ ಬರುವಲ್ಲಿ ವಿಳಂಬವಾಗಿರುವುದಕ್ಕೆ ಮೊತ್ತ ದೊಡ್ಡದಾಗಿರುವುದು ಕೂಡ ಕಾರಣವಾಗಿದೆ. ಸರಿಸುಮಾರು 39 ಸಾವಿರ ಕೋಟಿ ಮೊತ್ತದ ಪರಿಹಾರ ಧನಕ್ಕೆ ಬೇಡಿಕೆ ಸಲ್ಲಿಸಿದ್ದೇವೆ. ಈ ಮೊತ್ತದ ಅಂದಾಜು ಹಾಗೂ ಪರಿಶೀಲನೆಯನ್ನು ಕೇಂದ್ರ ಸರ್ಕಾರ ನಡೆಸಿದ್ದು ಆದಷ್ಟು ಬೇಗ ಪರಿಹಾರದ ಮೊತ್ತ ಬಿಡುಗಡೆಯಾಗಲಿದೆ ಎಂಬ ವಿಶ್ವಾಸವಿದೆ. ಪ್ರತಿಸಾರಿ ಯಿಂದ ಈಸಾರಿ ನಿರೀಕ್ಷೆಗೂ ಮೀರಿದ ವಿಳಂಬವಾಗಿರುವುದಕ್ಕೆ ನಾವು ಜನರ ಕ್ಷಮೆ ಕೋರುತ್ತೇವೆ ಎಂದರು.
ಬಡವರು ಮುಖ್ಯ
ನಮಗೆ ಬಡವರು ಹಾಗೂ ನೆರೆ ಸಂತ್ರಸ್ತರು ಅತ್ಯಂತ ಮುಖ್ಯ. ಇವರು ತೊಂದರೆಯಲ್ಲಿದ್ದಾರೆ ಇಲ್ಲಿ ಯಾವುದೇ ರಾಜಕಾರಣಮಾಡುವುದು ಸರಿಯಲ್ಲ. ನಮ್ಮೆಲ್ಲರ ಒಂದೇ ಗುರಿ ಕೇಂದ್ರದಿಂದ ಪರಿಹಾರ ಬಂದು ಅವರ ಸಮಸ್ಯೆ ನಿವಾರಿಸುವುದೇ ಆಗಿದೆ ಎಂದರು.
ಆಶಾ ಕಾರ್ಯಕರ್ತರಿಗೆ ಅಭಿನಂದನೆ
ರಾಜ್ಯದಲ್ಲಿ ಆಶಾ ಕಾರ್ಯಕರ್ತರು ಶ್ಲಾಘನೀಯ ಕೆಲಸವನ್ನು ಮಾಡುತ್ತಿದ್ದಾರೆ. ವೈದ್ಯರು ಮಾಡಬೇಕಾಗಿರುವ ಕಾರ್ಯವನ್ನು ಅವರು ನಿರ್ವಹಿಸುತ್ತಿದ್ದಾರೆ. ರಾಜ್ಯದ ಎಲ್ಲಾ ಕಾರ್ಯಕರ್ತರಿಗೆ ನಾನು ಸರ್ಕಾರದ ಪರವಾಗಿ ಹಾಗೂ ಇಲಾಖೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಇಂದು ಸಚಿವ ಸಂಪುಟ ಸಭೆಯಲ್ಲಿ ಹಲವು ವಿಚಾರಗಳು ಚರ್ಚೆಗೆ ಬರಲಿವೆ. ಅವುಗಳಲ್ಲಿ ಆಶಾ ಕಾರ್ಯಕರ್ತರ ವೇತನ ಹೆಚ್ಚಳ ಕೂಡ ಒಂದಾಗಿದೆ. ಈ ಸಂಬಂಧ ಇಂದು ಚರ್ಚಿಸುತ್ತೇವೆ. ಅವರಿಗೆ ಸಂಪೂರ್ಣವಾದ ಸಹಕಾರ ನೀಡಲು ಸರ್ಕಾರ ಬದ್ಧವಾಗಿದೆ. ಅವರ ಬೇಡಿಕೆಯನ್ನು ಈಡೇರಿಸಲು ನಾವು ಬದ್ಧವಾಗಿದ್ದೇವೆ ಎಂದರು.Conclusion:news
Last Updated : Oct 3, 2019, 1:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.