ETV Bharat / state

ಸಂಪುಟ ಪುನಾರಚನೆ ಕಸರತ್ತು: 'ಕೈ'ನಿಂದ ಮತ್ತೆ ಬ್ರೇಕ್​ಫಾಸ್ಟ್​​ ಪಾಲಿಟಿಕ್ಸ್​​​! - ಸಿದ್ದರಾಮಯ್ಯ

ಸಂಪುಟ ಪುನಾರಚನೆ ಕಸರತ್ತು ನಡೆದಿರುವ ಹಿನ್ನೆಲೆ ಈ ಉಪಹಾರ ಕೂಟ ಆಯೋಜಿಸಲಾಗಿದೆ. ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಬಿಜೆಪಿ ಆಪರೇಷನ್​ನಿಂದ ಎದುರಾಗಿರುವ ಆತಂಕ ನಿವಾರಣೆಗೆ ಮುಂದಾಗಿರುವ ನಾಯಕರು, ಈ ಉಪಹಾರ ಕೂಟದ ನೆಪದಲ್ಲಿ ಪರಿಹಾರ ಹುಡುಕಲು ಮುಂದಾಗಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್​ನಿಂದ ಮತ್ತೆ ಬ್ರೇಕ್ ಫಾಸ್ಟ್ ಪಾಲಿಟಿಕ್ಸ್
author img

By

Published : May 30, 2019, 1:54 AM IST

Updated : May 30, 2019, 2:15 AM IST

ಬೆಂಗಳೂರು: ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಇಂದು ತಮ್ಮ ಸರ್ಕಾರಿ ನಿವಾಸದಲ್ಲಿ ಸಚಿವರಿಗೆ ಉಪಹಾರ ಕೂಟ ಆಯೋಜನೆ ಮಾಡಿದ್ದಾರೆ.

ಸಂಪುಟ ಪುನಾರಚನೆ ಕಸರತ್ತು ನಡೆದಿರುವ ಹಿನ್ನೆಲೆ ಈ ಉಪಹಾರ ಕೂಟ ಆಯೋಜಿಸಲಾಗಿದೆ. ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಬಿಜೆಪಿ ಆಪರೇಷನ್​ನಿಂದ ಎದುರಾಗಿರುವ ಆತಂಕ ನಿವಾರಣೆಗೆ ಮುಂದಾಗಿರುವ ನಾಯಕರು, ಈ ಉಪಹಾರ ಕೂಟದ ನೆಪದಲ್ಲಿ ಪರಿಹಾರ ಹುಡುಕಲು ಮುಂದಾಗಿದ್ದಾರೆ ಎನ್ನಲಾಗಿದೆ.

ಸಚಿವರ ಕೈ ಬಿಡುವ ಪ್ರಸ್ತಾಪ

ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ಐದು ವರ್ಷ ಪೂರ್ಣಾವಧಿ ಸಚಿವರಾಗಿದ್ದ ಹಾಗೂ ಕಳೆದ ಒಂದು ವರ್ಷದಿಂದ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿರುವ ಆರ್.ವಿ.ದೇಶಪಾಂಡೆ, ಕೃಷ್ಣ ಬೈರೇಗೌಡ, ಯು.ಟಿ.ಖಾದರ್, ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್ ಅವರ ಮನವೊಲಿಸಿ ಸಚಿವ ಸ್ಥಾನದಿಂದ ಕೈ ಬಿಟ್ಟು ಈ ಜಾಗಕ್ಕೆ ಅತೃಪ್ತ ಶಾಸಕರಿಗೆ ಅವಕಾಶ ನೀಡುವ ಮೂಲಕ ಆಪರೇಷನ್ ಕಮಲವನ್ನು ತಡೆಯುವ ಯತ್ನ ನಡೆಸಲು ಕೈ ನಾಯಕರು ಮುಂದಾಗಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ಈ ವಿಚಾರ ಪ್ರಸ್ತಾಪವಾಗಿದ್ದು, ಉಪಹಾರ ಕೂಟದಲ್ಲಿಯೂ ಈ ವಿಷಯ ಪ್ರಸ್ತಾಪವಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಡಿಸಿಎಂ ಪರಮೇಶ್ವರ್​ ಮನೆಯಲ್ಲಿ ಸಚಿವರಿಗೆ ಇಂದು ಉಪಹಾರ ಕೂಟ

ಶಾಸಕರಿಗೆ ಸಿದ್ದರಾಮಯ್ಯ ಕಿವಿಮಾತು

ಶಾಸಕರ ಅಹವಾಲು ಸ್ವೀಕರಿಸಲು ಜಿಲ್ಲಾವಾರು ಸಿಎಂ ಮೀಟಿಂಗ್ ಮಾಡಲು ಹೇಳಿರುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಯಾರೂ ಬಿಜೆಪಿಗೆ ಹೋಗಬಾರದು. ಅವರು ಎಲ್ಲರನ್ನೂ ಆಹ್ವಾನಿಸುತ್ತಾರೆ. ಯಾರೂ ಅವರ ಆಮಿಷಕ್ಕೆ ಬಲಿಯಾಗಬೇಡಿ ಎಂದು ಮೈತ್ರಿ ನಾಯಕರಿಗೆ ಹೇಳಲಾಗಿದೆ. ಈ ಬಗ್ಗೆ ಮಾತನಾಡಿರುವ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಈ ಸಭೆ ನಮ್ಮ ನೋವನ್ನು ತೋಡಿಕೊಳ್ಳುವ ವೇದಿಕೆಯಲ್ಲ. ಮುಂದಿನ ಬೆಳವಣಿಗೆಗಳ ಬಗ್ಗೆ ಸೂಕ್ತ ಅವಕಾಶ ಕಲ್ಪಿಸಿ ನಾಯಕರಿಂದ ಅಹವಾಲು ಸ್ವೀಕರಿಸಲಾಗುವುದು ಎಂದು ಹೇಳಿದರು.
ಒಟ್ಟಾರೆ ರಾಜ್ಯದಲ್ಲಿ ಸಂಪುಟ ಪುನಾರಚನೆ ಕಸರತ್ತು ಜೋರಾಗಿಯೇ ನಡೆದಿದೆ. ಸಮಸ್ಯೆ ಇರುವ ಶಾಸಕರನ್ನು ಮತ್ತೊಮ್ಮೆ ಕರೆಯುವುದಾಗಿ ಸಿದ್ದರಾಮಯ್ಯ ಹೇಳಿದ್ದು, ಯಾವ ಶಾಸಕರೂ ಮಾಧ್ಯಮಗಳ ಮುಂದೆ ಹೋಗದಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

Intro:newsBody:ಮತ್ತೆ ಕಾಂಗ್ರೆಸ್ ನಿಂದ ಬ್ರೇಕ್ ಫಾಸ್ಟ್ ಪಾಲಿಟಿಕ್ಸ್

ಬೆಂಗಳೂರು: ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ನಾಳೆ ತಮ್ಮ ಸರ್ಕಾರಿ ನಿವಾಸದಲ್ಲಿ ಸಚಿವರಿಗೆ ಉಪಹಾರ ಕೂಟ ಆಯೋಜನೆ ಮಾಡಿದ್ದಾರೆ.
ಸಂಪುಟ ಪುನಾಃರಚನೆ ಕಸರತ್ತು ನಡೆದಿರುವ ಹಿನ್ನೆಲೆ ಈ ಉಪಹಾರ ಕೂಟ ಆಯೋಜಿಸಲಾಗಿದೆ. ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಬಿಜೆಪಿ ಆಪರೇಷನ್ ಕಮಲದಿಂದ ಎದುರಾಗಿರುವ ಆತಂಕ ನಿವಾರಣೆಗೆ ಮುಂದಾಗಿರುವ ನಾಯಕರು ಈ ಉಪಹಾರ ಕೂಟದ ಮೂಲಕ ಪರಿಹಾರ ಹುಡುಕುತ್ತಿದ್ದಾರೆ.
ಸಚಿವರ ಕೈಬಿಡುವ ಪ್ರಸ್ತಾಪ
ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ಐದು ವರ್ಷ ಪೂರ್ಣಾವಧಿ ಸಚಿವರಾಗಿದ್ದ ಹಾಗೂ ಕಳೆದ ಒಂದು ವರ್ಷದಿಂದ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿರುವ ಆರ್ ವಿ ದೇಶಪಾಂಡೆ, ಕೃಷ್ಣ ಬೈರೇಗೌಡ, ಯು ಟಿ ಖಾದರ್, ಎಂ.ಬಿ. ಪಾಟೀಲ್, ಕೆ.ಜೆ. ಜಾರ್ಜ್ ಅವರ ಮನವೊಲಿಸಿ ಸಚಿವ ಸ್ಥಾನದಿಂದ ಕೈ ಬಿಟ್ಟು ಈ ಜಾಗಕ್ಕೆ ಅತೃಪ್ತ ಶಾಸಕರಿಗೆ ಅವಕಾಶ ನೀಡುವ ಮೂಲಕ ಆಪರೇಷನ್ ಕಮಲವನ್ನು ತಡೆಯುವ ಯತ್ನ ನಡೆಸಲು ಕೈ ನಾಯಕರು ಮುಂದಾಗಿದ್ದಾರೆ. ಇಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಯೂ ಈ ವಿಚಾರ ಪ್ರಸ್ತಾಪವಾಗಿದ್ದು, ನಾಳೆ ಉಪಹಾರಕೂಟದಲ್ಲಿಯೂ ಅದು ಮುಂದುವರೆಯಲಿದೆ.
ನಾಳೆ ಬೆಳಿಗ್ಗೆ 9.30ಕ್ಕೆ ಸಚಿವರೊಂದಿಗೆ ಸಭೆ
ಸಂಜೆ ಪಕ್ಷದ ಹಿರಿಯ ಮುಖಂಡರೊಂದಿಗೆ ಸಭೆ ಕೂಡ ಕರೆಯಲಾಗಿದೆ.
ಶಾಸಕರ ಅಹವಾಲು ಸ್ವೀಕರಿಸಲು ಜಿಲ್ಲಾವಾರು ಸಿಎಂ ಮೀಟಿಂಗ್ ಮಾಡಲು ಹೇಳಿರುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಯಾರೂ ಬಿಜೆಪಿ ಗೆ ಹೋಗಬಾರದು. ಅವರು ಎಲ್ಲರನ್ನೂ ಆಹ್ವಾನಿಸುತ್ತಾರೆ ಯಾರೂ ಅವರ ಆಮಿಷಕ್ಕೆ ಬಲಿಯಾಗಬೇಡಿ. ಮಾತನಾಡಲು ಅವಕಾಶ ನೀಡುವಂತೆ ಶಾಸಕರ ಆಗ್ರಹ. ಆವಕಾಶ ನೀಡದ ಸಿದ್ದರಾಮಯ್ಯ ನಮ್ಮ ನೋವನ್ನು ತೋಡಿಕೊಳ್ಳಲು ಸಭೆ ವೇದಿಕೆಯಲ್ಲ ಇದಕ್ಕೆ ಮುಂದಿನ ಸೂಕ್ತ ಅವಕಾಶ ಕಲ್ಪಿಸಿ ಅಹವಾಲು ಸ್ವೀಕರಿಸಲಾಗುವುದು ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ನೇರವಾಗಿ ಶಾಸಕರಿಗೆ ತಿಳಿಸಿದ್ದಾರೆ.
ಒಟ್ಟಾರೆ ರಾಜ್ಯದಲ್ಲಿ ಸಂಪುಟ ಪುನರ್ ರಚನೆ ಕಸರತ್ತು ಇವ್ರ ತರನಾಗಿ ನಡೆದಿದ್ದು, ನಾಳೆ ಸಂಜೆ ಸಮಸ್ಯೆ ಇರುವ ಶಾಸಕರನ್ನು ಮತ್ತೊಮ್ಮೆ ಕರೆಯುತ್ತೇನೆ ಎಂದು ಹೇಳಿರುವ ಸಿದ್ದರಾಮಯ್ಯ ಇಂದಿನ ಸಭೆಯಲ್ಲಿ ಯಾರೂ ಮಾಧ್ಯಮಗಳಿಗೆ ಹೋಗದಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.Conclusion:news
Last Updated : May 30, 2019, 2:15 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.