ಬೆಂಗಳೂರು: ಕೊರೊನಾ ಜೊತೆಗೆ ಬ್ಲಾಕ್ ಫಂಗಸ್ ಕಾಟ ಶುರುವಾಗಿದ್ದು, ಇದೀಗ ಬ್ಲಾಕ್ ಫಂಗಸ್ ರೋಗದ ಚಿಕಿತ್ಸೆಗೆ ಸರ್ಕಾರದ ಅಭಯ ನೀಡಿದೆ. ಕೋವಿಡ್ ನಂತರದ ಬ್ಲಾಕ್ ಫಂಗಸ್ ರೋಗಕ್ಕೆ ಚಿಕಿತ್ಸೆ ನೀಡಲು ರಾಜ್ಯದ ಪ್ರಮುಖ 6 ಆಸ್ಪತ್ರೆಗಳು ರೆಡಿಯಾಗಿವೆ. ಬ್ಲಾಕ್ ಫಂಗಸ್ ರೋಗಕ್ಕೆ ಚಿಕಿತ್ಸಾ ವಿಧಾನಕ್ಕಾಗಿ ಸಮಿತಿ ರಚನೆ ಮಾಡಲಾಗಿತ್ತು. ಡಾ.H.S.ಸತೀಶ್ ಅಧ್ಯಕ್ಷತೆಯಲ್ಲಿ ಚಿಕಿತ್ಸೆ ವಿಧಾನ ನಡೆದಿದೆ.
ಎಲ್ಲೆಲ್ಲಿ ಚಿಕಿತ್ಸೆ?
- ಬೆಂಗಳೂರು ಮೆಡಿಕಲ್ ಕಾಲೇಜು ಆಸ್ಪತ್ರೆ (BMCRI)
- ಮೈಸೂರು ಮೆಡಿಕಲ್ ಕಾಲೇಜು
- ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ
- ಗುಲ್ಬರ್ಗಾ ಮೆಡಿಕಲ್ ಕಾಲೇಜು
- ಶಿವಮೊಗ್ಗ ಮೆಡಿಕಲ್ ಕಾಲೇಜು
- ಮಂಗಳೂರಿನ ವೆನ್ಲಾಕ್ ಆಸ್ಪತ್ರೆ
ಇನ್ನು ಬ್ಲಾಕ್ ಫಂಗಸ್ ರೋಗಕ್ಕೆ ಚಿಕಿತ್ಸೆ ನಿರಾಕರಿಸುವಂತಿಲ್ಲ. ಇದನ್ನ ರಾಜ್ಯ ಆರೋಗ್ಯ ಇಲಾಖೆ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ. ಚಿಕಿತ್ಸಾ ಸಾಮರ್ಥ್ಯ ಹೊಂದಿದ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದ್ದು, ಕೆಪಿಎಂಇ ಕಾಯ್ದೆ ಸೆಕ್ಷನ್ 7ಬಿ ಅಡಿಯಲ್ಲಿಯೂ ಪರಿಗಣನೆ ಮಾಡಲಾಗಿದೆ.
ಇದನ್ನೂ ಓದಿ: ಶೇಂಗಾ ಬೀಜ ಗಂಟಲಲ್ಲಿ ಸಿಲುಕಿ ಮಗು ಸಾವು, ದೇವರ ಬಳಿ ಗೋಳಾಡಿದ ಅಜ್ಜಿ
ಇನ್ನು ಕೋವಿಡ್ನಿಂದ ಬಳಲುತ್ತಿದ್ದು ಬ್ಲಾಕ್ ಫಂಗಸ್ ಅಟ್ಯಾಕ್ ಆದವರಿಗೆ ಬೆಂಗಳೂರಿನ ವಿಕ್ಟೋರಿಯಾ, ಮಿಂಟೋ, ನೆಪ್ರೋ ಯೂರಾಲಜಿ, ಟ್ರಾಮಾಕೇರ್ ಹಾಗೂ ಪಿಎಂ ಎಸ್ ಎಸ್ ವೈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಕೋವಿಡ್ನಿಂದ ಗುಣಮುಖರಾದ ಮೇಲೆ ಬ್ಲಾಕ್ ಫಂಗಸ್ ಅಟ್ಯಾಕ್ ಆದರೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.