ETV Bharat / state

ಕೆಮಿಕಲ್ ಗೋದಾಮು ಅಗ್ನಿ ಅವಘಡ ಪ್ರಕರಣ: ದುರ್ಘಟನೆಯ ಕಾರಣ ಬಯಲು

author img

By

Published : Nov 11, 2020, 10:11 PM IST

ಬೆಂಗಳೂರು ಹೊಸಗುಡ್ಡದಹಳ್ಳಿ ಬಳಿಯ ಕೆಮಿಕಲ್​ ಗೋದಾಮಿನಲ್ಲಿ ನಡೆದ ಅಗ್ನಿ ಅವಘಡದ ಬಗ್ಗೆ ತನಿಖಾಧಿಕಾರಿಗಳು ಮಾಹಿತಿ ಕಲೆ ಹಾಕಿದ್ದು, ಘಟನೆಯ ಕಾರಣ ಪತ್ತೆ ಹಚ್ಚಿದ್ದಾರೆ.

Bengaluru Chemical Factory Fire case update
ಬೆಂಗಳೂರು ಕೆಮಿಕಲ್ ಗೋದಾಮು ಅಗ್ನಿ ಅವಘಡ ಪ್ರಕರಣ

ಬೆಂಗಳೂರು : ಹೊಸಗುಡ್ಡದಹಳ್ಳಿ ಅಗ್ನಿ ಅನಾಹುತ ಪ್ರಕರಣದ ಬಗ್ಗೆ ಸಂಪೂರ್ಣ ಸಂಪೂರ್ಣ ಮಾಹಿತಿನ್ನು ಪೊಲೀಸರು ಕಲೆ ಹಾಕಿದ್ದಾರೆ.

ನಿನ್ನೆ ಬೆಳಗ್ಗೆ 10:30 ರ ಸುಮಾರಿಗೆ ಲಿಂಗಾರಾಜಪುರದ ಕ್ರಿಸೆಂಟ್ ಕೆಮಿಕಲ್ ಇಂಡಸ್ಟ್ರೀಸ್​ಗೆ 8 ಬ್ಯಾರಲ್ ಐಎಸ್ಒ ಪ್ರೊಪಿಲ್ ಆಲ್ಕೋಹಾಲ್​ ಕಳುಹಿಸಬೇಕಾಗಿತ್ತು. ಒಂದು ಬ್ಯಾರಲ್​ಗೆ 85 ಕೆ.ಜಿ ತೂಕ ಬರಬೇಕು. ಆದರೆ, ಕಡಿಮೆ ಬಂದಿದ್ದರಿಂದ ಗೊದಾಮು ಕೆಲಸಗಾರ ಬಿಜು ಸಿಂಗ್ ಮಾಲೀಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದ. ಈ ವೇಳೆ ಬೇರೆ ಬ್ಯಾರಲ್​ನಿಂದ ತುಂಬಿಸಲು ಮಾಲೀಕ ಸಜ್ಜನ್ ರಾಜ್ ತಿಳಿಸಿದ್ದರು. ಬ್ಯಾರಲ್ ಬಿಸಿಲಿಗೆ ಕಾಯ್ದಿದ್ದರಿಂದ ಹಾಗೂ ಒಂದಕ್ಕೊಂದು ಉಜ್ಜಿ ಸ್ಪಾಟಿಕ್ ಚಾರ್ಜ್ ಉತ್ಪನ್ನ ಆಗಿ ಬೆಂಕಿ ಹತ್ತಿಕೊಂಡಿದೆ. ತಕ್ಷಣ ಪೊಲೀಸರು ಹಾಗೂ ಅಗ್ನಿ ಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದರು. ಅಷ್ಟರಲ್ಲಿ 5 ಕಟ್ಟಡ 5 ಕಾರು 1 ಟೆಂಪೋ 2 ಬೈಕ್​ಗಳು ಬೆಂಕಿಗೆ ಆಹುತಿಯಾಗಿದ್ದವು. ಪಕ್ಕದ ಕಟ್ಟಡದಲ್ಲಿ ಪ್ಲಾಸ್ಟಿಕ್ ಗೋಡೌನ್ ಇದ್ದ ಕಾರಣ ಬೆಂಕಿ ಹತ್ತಿ 45 ಲಕ್ಷಕ್ಕೂ ಹೆಚ್ಚು ಮೌಲ್ಯದ ಪ್ಲಾಸ್ಟಿಕ್ ವಸ್ತುಗಳು ಸುಟ್ಟು ಹೋಗಿವೆ. ಈ ಸಂಬಂಧ ಪ್ಲಾಸ್ಟಿಕ್ ಗೋಡೌನ್​ನ ಆಯಾಜ್ ಮತ್ತು ಶಂಭುಲಿಂಗ ಎಂಬವರು ದೂರು ನೀಡಿದ್ದಾರೆ. ಇದರ ಅನ್ವಯ 2 ಎಫ್​ಐಆರ್​ ದಾಖಲಿಸಿರುವ ಪೊಲೀಸರು ತನಿಖೆಗೆ ಇಳಿದಿದ್ದಾರೆ.

ತನಿಖೆ ವೇಳೆ ಗೋಡೌನ್ ಜಾಗಕ್ಕೆ 1998 ರಲ್ಲಿ ಸಜ್ಜನ್ ರಾವ್ ಹೆಸರಿನಲ್ಲಿ ಜಿಎಸ್ಟಿ ಪರವನಾಗಿ ಪಡೆಯಲಾಗಿದೆ. ಸಜ್ಜನ್ 1974 ರಿಂದ ಕೆಮಿಕಲ್ ವ್ಯವಹಾರ ನಡೆಸುತ್ತಿದ್ದಾರೆ. 1978 ರಲ್ಲಿ ರೇಖಾ ಕೆಮಿಕಲ್ಸ್ ಎಂಬ ಸ್ವಂತ ಕಂಪನಿ ಮಾಡಿದ್ದಾರೆ. ಕಂಪೆನಿಗೆ ಮುಂಬೈ, ಕೊಚ್ಚಿ ಹಾಗೂ ಚೆನ್ನೈನಿಂದ ಕೆಮಿಕಲ್​ ತರಿಸುತ್ತಿದ್ದರು. ಅವುಗಳನ್ನು ಫಾರ್ಮಾ ಇಂಡಸ್ಟ್ರಿ ಹಾಗೂ ಇತರ ಕಾರ್ಖಾನೆಗಳಿಗೆ ಕಳುಹಿಸುತ್ತಿದ್ದರು. ನಿನ್ನೆ ಕೂಡ 150 ಪ್ರೊಪಿಲ್ ಆಲ್ಕೋಹಾಲ್​ ತಿನ್ನರ್ ಆಗಿ ಬಳಸಲು ಲೋಡ್ ಮಾಡಲಾಗುತ್ತಿತ್ತು. ಬೆಂಕಿ ಅವಘಡದಿಂದ 64 ಸಾವಿರ ಲೀಟರ್​ನ 320 ಬ್ಯಾರಲ್ ಸುಟ್ಟು ಹೋಗಿವೆ.

ರೇಖಾ ಕೆಮಿಕಲ್ಸ್ ಕಾರ್ಪೋರೇಶನ್ (ಕಮಲಾ ಸಜ್ಜನ್ ಮಾಲೀಕತ್ವ) ರೇಖಾ ಕೆಮಿಕಲ್ ಇಂಡಸ್ಟ್ರೀಸ್ (ಸಜ್ಜನ್ ರಾಜ್ ಮಾಲೀಕತ್ವ) ಎರಡೂ ಕಂಪನಿಗಳು ಬೊಮ್ಮಸಂದ್ರದ ವಿಳಾಸದಲ್ಲಿವೆ. ಆದರೆ ಪ್ಯಾಕಿಂಗ್ ಮಾಡಲು ಜಾಗದ ಅಭಾವ ಹಿನ್ನೆಲೆ, ಈ ಗೋಡೌನ್​ ಬಳಸಿಕೊಳ್ಳಲಾಗಿತ್ತು. ಇದಕ್ಕೆ ಬಿಬಿಎಂಪಿ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ಇರಲಿಲ್ಲ. ಸದ್ಯ, ಫ್ಯಾಕ್ಟರಿ ಮಾಲೀಕರಾದ ಸಜ್ಜನ್ ರಾವ್, ಕಮಲ, ಅನಿಲ್‌ಕುಮಾರ್​ನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.