ETV Bharat / state

ಮೊಳೆ ಮುಕ್ತ ಮರ ಅಭಿಯಾನಕ್ಕೆ ಮುಂದಾದ ಬೆಂಗಳೂರಿನ ವಿಜ್ಞಾನಿ - bangalore latest news

ಬೆಂಗಳೂರು ಮೂಲದ ವಿಜ್ಞಾನಿ ಮತ್ತು ಅವರ ಸ್ನೇಹಿತರು ನಗರದ ಮರಗಳನ್ನು ಮೊಳೆ ಮುಕ್ತ ನಗರವನ್ನಾಗಿಸಲು ಮುಂದಾಗಿದ್ದಾರೆ. ವಿಟ್ಟಲ್ ಮಲ್ಯ ರಸ್ತೆಯ 10 ಮರಗಳಿಂದ 40 ಮೊಳೆಗಳನ್ನು ಮತ್ತು ಸುಮಾರು 500 ಪಿನ್​​ಗಳನ್ನು ತೆಗೆಯಲಾಗಿದೆ. ನವೆಂಬರ್ 29 ರವರೆಗೆ ಕಾರ್ಯಾಚರಣೆಯನ್ನು ಮುಂದುವರೆಸಿರುವ ವಿಜ್ಞಾನಿ ವಿನೋದ್ ಕಾರ್ತವ್ಯ ಮತ್ತು ಅವರ ಸ್ನೇಹಿತರು ಸಂಪಂಗಿ ರಾಮನಗರ ವಾರ್ಡ್‌ನಲ್ಲಿ 40 ಮರಗಳಿಂದ ಮೊಳೆಗಳನ್ನು ತೆಗೆದಿದ್ದಾರೆಂದು 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.

Bengaluru based scientist started the nail-free tree campaign
ಮೊಳೆ ಮುಕ್ತ ಮರ ಅಭಿಯಾನಕ್ಕೆ ಮುಂದಾದ ಬೆಂಗಳೂರು ಮೂಲದ ವಿಜ್ಞಾನಿ
author img

By

Published : Dec 3, 2020, 7:55 AM IST

Updated : Dec 3, 2020, 8:17 AM IST

ಬೆಂಗಳೂರು: ಬೆಂಗಳೂರು ಮೂಲದ ವಿಜ್ಞಾನಿ ಮತ್ತು ಅವರ ಸ್ನೇಹಿತರು ನಗರದ ಮರಗಳನ್ನು ಮೊಳೆ ಮುಕ್ತ ನಗರವನ್ನಾಗಿಸಲು ಮುಂದಾಗಿದ್ದಾರೆ. ವಿಜ್ಞಾನಿವೋರ್ವರಿಗೆ ಆದ ವೈಯಕ್ತಿಕ ಅನುಭವವೇ ಈ ಒಂದು ವಿಭಿನ್ನ ಅಭಿಯಾನ ನಡೆಸಲು ಕಾರಣವಾಗಿದೆ.

ನಗರದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಯಲ್ಲಿ ಸಹಾಯಕ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿರುವ ವಿನೋದ್ ಕಾರ್ತವ್ಯ ಅವರಿಗೆ ನ. 15 ರಂದು ತಮ್ಮ ದ್ವಿಚಕ್ರ ವಾಹನದಲ್ಲಿ ಸಂಪಂಗಿ ರಾಮನಗರದಲ್ಲಿರುವ ತಮ್ಮ ಮನೆಯ ಬಳಿ ಹೋಗುತ್ತಿರುವ ವೇಳೆ ಸ್ನೇಹಿತರಿಂದ ದೂರವಾಣಿ ಕರೆ ಬಂತು. ಕರೆ ಸ್ವೀಕರಿಸುವ ಸಲುವಾಗಿ ಅವರು ತಮ್ಮ ಬೈಕನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಮರದ ನೆರಳಿನಲ್ಲಿ ಕರೆ ಸ್ವೀಕರಿಸಿ ಮಾತನಾಡಲಾರಂಭಿಸಿದರು. ಅವರು ಮರದ ಕಡೆಗೆ ವಾಲಿದಾಗ ಮರಕ್ಕೆ ಅಂಟಿಕೊಂಡಿದ್ದ ಮೊಳೆ ಅವರ ತಲೆಯ ಹಿಂಭಾಗಕ್ಕೆ ಚುಚ್ಚಿ ಗಾಯಗೊಳಿಸಿತ್ತು. ಅಂದಿನಿಂದ ವಿನೋದ್ ಅವರು ನಗರದ ಮರಗಳಿಂದ ಮೊಳೆಗಳು ಮತ್ತು ಜಾಹೀರಾತು ಫಲಕಗಳ ಪಿನ್‌ಗಳನ್ನು ತೆಗೆದುಹಾಕಲು ನಿರ್ಧರಿಸಿದರು.

ವಿಜ್ಞಾನಿ ವಿನೋದ್ ಕಾರ್ತವ್ಯ

ಈ ಹಿನ್ನೆಲೆ, ಪ್ರತಿ ಭಾನುವಾರ (ನವೆಂಬರ್ 15 ರಿಂದ ಪ್ರಾರಂಭಿಸಿ) ನಾನು ಒಬ್ಬಂಟಿಯಾಗಿ ಅಥವಾ ನನ್ನ ಸ್ನೇಹಿತರೊಂದಿಗೆ ಮರಗಳ ಮೇಲಿನ ಮೊಳೆಗಳು, ಜಾಹೀರಾತು ಫಲಕಗಳ ಪಿನ್​​​​ಗಳು ಮತ್ತು ಮರಗಳಲ್ಲಿ ಅಂಟಿಸಿದ ಅಕ್ರಮ ಜಾಹೀರಾತುಗಳಿಂದ ಮುಕ್ತಗೊಳಿಸುತ್ತಿದ್ದೇನೆ ಎಂದು ವಿನೋದ್ ಕಾರ್ತವ್ಯ 'ಈಟಿವಿ ಭಾರತ'ಕ್ಕೆ ತಿಳಿಸಿದರು.

Bengaluru based scientist started the nail-free tree campaign
ಮರಗಳಿಂದ ಮೊಳೆಗಳನ್ನು ತೆಗೆಯುವ ಕಾರ್ಯ

ಮೊದಲ ದಿನ ನಾವು ವಿಟ್ಟಲ್ ಮಲ್ಯ ರಸ್ತೆಯ 10 ಮರಗಳಿಂದ 40 ಮೊಳೆಗಳನ್ನು ಮತ್ತು ಸುಮಾರು 500 ಪಿನ್​​ಗಳನ್ನು ತೆಗೆದಿದ್ದೆವು. ನವೆಂಬರ್ 29 ರವರೆಗೆ ಕಾರ್ಯಾಚರಣೆಯನ್ನು ಮುಂದುವರೆಸಿರುವ ನಾನು ಮತ್ತು ನನ್ನ ಸ್ನೇಹಿತರು ಸಂಪಂಗಿ ರಾಮನಗರ ವಾರ್ಡ್‌ನಲ್ಲಿ 40 ಮರಗಳಿಂದ ಮೊಳೆಗಳನ್ನು ತೆಗೆದಿದ್ದೇವೆಂದು ತಿಳಿಸಿದರು.

ಬಿಲ್ಬೋರ್ಡ್ ಜಾಹೀರಾತು ಈಗ ಬಿಬಿಎಂಪಿಯಿಂದ ಕಾನೂನು ಬಾಹಿರವಾಗಿರುವುದರಿಂದ, ಕಾಲ್ ಸೆಂಟರ್‌ಗಳ, ಪಿಜಿ, ವಸತಿ ಗೃಹಗಳ, ಬ್ಯಾಂಕಿಂಗ್ ಉದ್ಯೋಗ, ಜ್ಯೋತಿಷಿಗಳ ಜಾಹೀರಾತುದಾರರು ತಮ್ಮ ಅನುಕೂಲಕ್ಕಾಗಿ ಮರಗಳ ಮೇಲೆ ಜಾಹೀರಾತು ಹಾಕುವ ತಪ್ಪು ಮಾರ್ಗವನ್ನು ಆರಿಸಿಕೊಂಡಿದ್ದಾರೆ. ದುಃಖಕರವೆಂದರೆ ಮರಗಳ ಮೇಲೆ ಇವುಗಳ ಪ್ರಭಾವವು ದೀರ್ಘಕಾಲೀನವಾಗಿರುತ್ತದೆ. ಮರಕ್ಕೆ ಮೊಳೆಗಳನ್ನು ಹೊಡೆದಾಗ ಅದರ ಜೀವನವು ಶೇ 60 - 70 ಪ್ರತಿಶತ ಇಳಿಯಲಿದೆ ಎಂದು ಮಾಹಿತಿ ನೀಡಿದರು.

ಈ ಸುದ್ದಿಯನ್ನೂ ಓದಿ: ವರ್ತೂರು​ ಪ್ರಕಾಶ್​ ಅಪಹರಣ ಪ್ರಕರಣ: ಕೋಲಾರ ಪೊಲೀಸರಿಂದ ತನಿಖೆ ಚುರುಕು​

ಮರಗಳ ಸಂರಕ್ಷಣಾ ಕಾಯ್ದೆ ಮತ್ತು ಬೆಂಗಳೂರು ಮುನ್ಸಿಪಲ್ ಕಾಯ್ದೆಯ ಪ್ರಕಾರ ಮರಗಳ ಮೇಲೆ ಜಾಹೀರಾತು ಫಲಕವನ್ನು ಅಂಟಿಸುವುದು ಕಾನೂನುಬಾಹಿರವಾದರೂ, ಈ ನಿಯಮವನ್ನು ಜಾರಿಗೊಳಿಸುವುದು ಅಷ್ಟೇನೂ ಸುಲಭವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

Last Updated : Dec 3, 2020, 8:17 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.