ಬೆಂಗಳೂರು: ಸರ್ಕಾರಿ ಬಸ್ ಸೇವೆ ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರ ನೀಡಿರುವ ತಿರುಗೇಟಿನ ನಡುವೆಯೂ ಖಾಸಗಿ ಸಾರಿಗೆ ಸಂಘಟನೆಗಳು ಕರೆ ನೀಡಿದ್ದ ಬೆಂಗಳೂರು ಬಂದ್ ಭಾಗಶಃ ಯಶಸ್ಸು ಕಂಡಿದೆ. ಗೊರಗುಂಟೆ ಪಾಳ್ಯ ಜಂಕ್ಷನ್ ಬಳಿ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದೆ. ರ‍್ಯಾಪಿಡೋ ಬೈಕ್, ಟ್ಯಾಕ್ಸಿ, ಓಲಾ, ಉಬರ್ ಕ್ಯಾಬ್ ಕಂಪನಿಗಳ ಫೋಟೋಗಳ ಅಣಕು ಶವಯಾತ್ರೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಕಂಡುಬಂತು.
ಪೊಲೀಸರು ಪ್ರತಿಭಟನೆಗಷ್ಟೇ ಅನುಮತಿ ನೀಡಿದ್ದರು. ಆದರೆ, ಖಾಸಗಿ ವಾಹನ ಮಾಲೀಕರು, ಚಾಲಕರು ಸೇರಿದಂತೆ ಕೆಲವು ಸಂಘಟನೆಗಳು ರ‍್ಯಾಲಿ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
"ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಿದ ನಂತರ ಖಾಸಗಿ ವಾಹನಗಳನ್ನು ನಂಬಿ ಬದುಕುತ್ತಿದ್ದವರ ಆದಾಯ ಕಡಿಮೆಯಾಗಿದೆ. ಖಾಸಗಿ ವಾಹನ ಚಾಲಕರು, ಮಾಲೀಕರ ಬದುಕು ದುಸ್ತರವಾಗಿದೆ. ಸರ್ಕಾರ ಕೂಡಲೇ ಪರಿಹಾರ ನೀಡಬೇಕು" ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
-
#WATCH | Bengaluru: On 'Bengaluru Bandh' called by Private Transport Association against Karnataka government's Shakti Programme, State Transport Minister Ramalinga Reddy says, "The Union is demanding Rs 1,000 crores as compensation...Some issues are in the High Court and Supreme… pic.twitter.com/kpoR6c41le
— ANI (@ANI) September 11, 2023 " class="align-text-top noRightClick twitterSection" data="
">#WATCH | Bengaluru: On 'Bengaluru Bandh' called by Private Transport Association against Karnataka government's Shakti Programme, State Transport Minister Ramalinga Reddy says, "The Union is demanding Rs 1,000 crores as compensation...Some issues are in the High Court and Supreme… pic.twitter.com/kpoR6c41le
— ANI (@ANI) September 11, 2023#WATCH | Bengaluru: On 'Bengaluru Bandh' called by Private Transport Association against Karnataka government's Shakti Programme, State Transport Minister Ramalinga Reddy says, "The Union is demanding Rs 1,000 crores as compensation...Some issues are in the High Court and Supreme… pic.twitter.com/kpoR6c41le
— ANI (@ANI) September 11, 2023
ಹೋಟೆಲ್ ಮಾಲೀಕರ ಸಂಘದ ಬೆಂಬಲ: "ಆಟೋ, ಕ್ಯಾಬ್ ಸೇರಿದಂತೆ ಖಾಸಗಿ ವಾಹನ ಚಾಲಕರು ಸಂಕಷ್ಟದಲ್ಲಿದ್ದಾರೆ. ಚಾಲಕರು ಶ್ರಮವಹಿಸಿ ಮಳೆ, ಬಿಸಿಲನ್ನದೆ ಹಗಲು-ರಾತ್ರಿ ದುಡಿಯುತ್ತಾರೆ. ಅವರ ಎಲ್ಲಾ ಬೇಡಿಕೆಗಳು ಸಮಂಜಸವಾಗಿವೆ. ಸರ್ಕಾರ ಕೂಡಲೇ ಬೇಡಿಕೆಗಳನ್ನು ಈಡೇರಿಸಲು ಕ್ರಮವಹಿಸಬೇಕು. ಇಂದಿನ ಸಾರಿಗೆ ಮುಷ್ಕರಕ್ಕೆ ಹೋಟೆಲ್ ಮಾಲೀಕರ ಸಂಘದಿಂದ ನೈತಿಕ ಬೆಂಬಲ ಇರಲಿದೆ" ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದರು.
ಸರ್ಕಾರದಿಂದ ಹೆಚ್ಚುವರಿ ಬಸ್ ವ್ಯವಸ್ಥೆ: ಖಾಸಗಿ ಸಾರಿಗೆ ಚಾಲಕರು, ಮಾಲೀಕರ ಮುಷ್ಕರಕ್ಕೆ ರಾಜ್ಯ ಸರ್ಕಾರ ಸೆಡ್ಡು ಹೊಡೆದಿದೆ. ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹೆಚ್ಚುವರಿ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್‌ಗಳನ್ನು ರಸ್ತೆಗಿಳಿಸಲಾಗಿದೆ. ಅಲ್ಲದೇ ಮೆಟ್ರೋ ರೈಲು ಸಹ ಹೆಚ್ಚುವರಿ ಓಡಾಟ ನಡೆಸುತ್ತಿದೆ.
ಆಟೋ, ಕ್ಯಾಬ್, ಶಾಲಾ ಬಸ್, ಖಾಸಗಿ ಬಸ್, ಮ್ಯಾಕ್ಸಿ ಕ್ಯಾಬ್, ಕಾರ್ಪೊರೇಟ್ ಕಂಪನಿಗಳ ಕ್ಯಾಬ್, ಏರ್ಪೋರ್ಟ್ ಕ್ಯಾಬ್ಗಳ ಓಡಾಟ ಬಂದ್ ಎನ್ನಲಾಗಿತ್ತು. ಆದರೆ ನಗರದ ಅನೇಕ ಕಡೆಗಳಲ್ಲಿ ಖಾಸಗಿ ವಾಹನಗಳ ಓಡಾಟ ಕಂಡುಬಂದಿದೆ. ಹಲವೆಡೆ ಆಟೋ, ಕ್ಯಾಬ್ ಸೇರಿದಂತೆ ಖಾಸಗಿ ಸಾರಿಗೆ ವಾಹನಗಳು ಸಂಚರಿಸುತ್ತಿವೆ.
ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ಮೆಜೆಸ್ಟಿಕ್ನಿಂದ ಏರ್ಪೋರ್ಟ್, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ನಗರದ ಎಲ್ಲಾ ಭಾಗಗಳಿಗೂ ಹೆಚ್ಚುವರಿ ಸರ್ಕಾರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಬಂದ್ ಬಿಸಿ ತಟ್ಟದಂತೆ ಎಚ್ಚರಿಕೆ ವಹಿಸಲಾಗಿದೆ.
-
#WATCH | Karnataka | Private transport unions in Bengaluru hold a strike in Bengaluru demanding the withdrawal of the Congress government's Shakti Yojana (Scheme).
— ANI (@ANI) September 11, 2023 " class="align-text-top noRightClick twitterSection" data="
The scheme aims to offer free bus rides within the state to women and transgender people. pic.twitter.com/EM6ZoJdVXs
">#WATCH | Karnataka | Private transport unions in Bengaluru hold a strike in Bengaluru demanding the withdrawal of the Congress government's Shakti Yojana (Scheme).
— ANI (@ANI) September 11, 2023
The scheme aims to offer free bus rides within the state to women and transgender people. pic.twitter.com/EM6ZoJdVXs#WATCH | Karnataka | Private transport unions in Bengaluru hold a strike in Bengaluru demanding the withdrawal of the Congress government's Shakti Yojana (Scheme).
— ANI (@ANI) September 11, 2023
The scheme aims to offer free bus rides within the state to women and transgender people. pic.twitter.com/EM6ZoJdVXs
ಕೆಲವು ಶಾಲೆಗಳಿಗೆ ರಜೆ: ಖಾಸಗಿ ಸಾರಿಗೆ ಬಂದ್ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ ಕುರಿತು ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಮಕ್ಕಳನ್ನು ಕರೆದುಕೊಂಡು ಫೋಷಕರು ಶಾಲೆಗಳಿಗೆ ಬಂದಿದ್ದರು. ಆದ್ರೆ ಇಂದು ಶಾಲೆಗಳಿಗೆ ರಜೆ ಘೋಷಿಸಿರುವ ಕುರಿತು ಶಾಲಾ ಮಂಡಳಿಯ ಬೋರ್ಡ್ ನೋಡಿ ಮನೆಗೆ ವಾಪಸ್ ತೆರಳುತ್ತಿರುವುದು ಕಂಡುಬಂತು.
"ಮಕ್ಕಳಿಗೆ ಮುಂದೆ ಪರೀಕ್ಷೆಗಳಿವೆ. ಇಂತಹ ಸಮಯದಲ್ಲಿ ಓದು ತುಂಬಾ ಮುಖ್ಯ. ಆನ್ಲೈನ್ ಕ್ಲಾಸ್ ವ್ಯವಸ್ಥೆ ಬಗ್ಗೆಯೂ ಕೂಡ ಶಾಲೆಯವರು ಏನೂ ಹೇಳಿಲ್ಲ. ನಮ್ಮ ವಾಹನದಲ್ಲಿ ಮಕ್ಕಳನ್ನು ಶಾಲೆಗೆ ಕರೆತಂದಿದ್ದೇವೆ. ಆದ್ರೆ ಈ ರೀತಿಯ ಬಂದ್ ಘೋಷಣೆ ಮಕ್ಕಳ ಓದಿನ ಮೇಲೆ ಪರಿಣಾಮ ಬೀರಲಿದೆ" ಎಂದು ಪೋಷಕರು ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ: ಖಾಸಗಿ ವಾಹನ ಚಾಲಕರ ಮಾಲೀಕರ ಮುಷ್ಕರ: ಖಾಸಗಿ ಶಾಲಾ ಮಕ್ಕಳಿಗೆ ರಜೆ ಗೊಂದಲ.. ಒಕ್ಕೂಟದಿಂದ ಹೊರಬೀಳದ ಸ್ಪಷ್ಟ ನಿರ್ಧಾರ