ETV Bharat / state

ಪೊಲೀಸರು ನನ್ನನ್ನು ವಿಚಾರಣೆಗೆ ಕರೆದಿದ್ದರು, ಬಂಧಿಸಿಲ್ಲ: ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬೊಮ್ಮನಹಳ್ಳಿ ಬಾಬು

ತಮ್ಮ ಕುಟುಂಬಕ್ಕೆ ಸಂಬಂಧಿಸಿದಂತೆ ತಪ್ಪು ವರದಿ ಮಾಡಿದ ಕಾರಣ ತಮಗೆ ಮಾನಸಿಕ ಹಿಂಸೆಯಾಗಿದ್ದು, ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯಾಗಿದೆ. ತಮ್ಮ ಮೇಲೆ ಅನಗತ್ಯವಾಗಿ ತೇಜೋವಧೆ ನಡೆಯುತ್ತಿದ್ದು, ಇದು ತಕ್ಷಣವೇ ನಿಲ್ಲಬೇಕು ಎಂದು ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬೊಮ್ಮನಹಳ್ಳಿ ಬಾಬು ಮನವಿ ಮಾಡಿದ್ದಾರೆ.

Attica Gold Company owner
ಬೊಮ್ಮನಹಳ್ಳಿ ಬಾಬು
author img

By

Published : Dec 20, 2022, 7:48 AM IST

ಬೆಂಗಳೂರು: ನನ್ನ ಅಣ್ಣನ ಮಗನ ಕುಟುಂಬಕ್ಕೆ ಸಂಬಂಧಿಸಿದ ಕೌಟುಂಬಿಕ ಹಿಂಸಾಚಾರ ಪ್ರಕರಣದಲ್ಲಿ ಆಂಧ್ರಪ್ರದೇಶದ ಏಲೂರು ಪೊಲೀಸರು ತಮ್ಮನ್ನು ವಿಚಾರಣೆಗೆ ಕರೆದಿದ್ದರು. ಆದರೆ ತಮ್ಮನ್ನು ಪೊಲೀಸರು ಬಂಧಿಸಿಲ್ಲ. ಅಂತಹ ಅಪರಾಧವನ್ನು ತಾವು ಮಾಡಿಲ್ಲ. ತಮ್ಮನ್ನು ಬಂಧಿಸಿರುವುದಾಗಿ ವರದಿ ಮಾಡಿರುವುದು ಸರಿಯಲ್ಲ ಎಂದು ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬೊಮ್ಮನಹಳ್ಳಿ ಬಾಬು ಸ್ಪಷ್ಟಪಡಿಸಿದ್ದಾರೆ.

ಪ್ರೆಸ್​ಕ್ಲಬ್​ನಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಬು, ವಾಸ್ತವವಾಗಿ ಈ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ತಮಗೆ ಎರಡು ಮೂರು ಮದುವೆಯಾಗಿಲ್ಲ. ನನಗಿರುವುದು ಒಬ್ಬಳೇ ಹೆಂಡತಿ, ಮಗ, ಮಗಳು ಇದ್ದಾಳೆ. ಆದರೆ ತಮ್ಮ ಕುಟುಂಬಕ್ಕೆ ಸಂಬಂಧಿಸಿದ ತಪ್ಪು ವರದಿಗಳಿಂದ ಮಾನಸಿಕ ಹಿಂಸೆಯಾಗಿದ್ದು, ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯಾಗಿದೆ. ತಮ್ಮ ಮೇಲೆ ಅನಗತ್ಯವಾಗಿ ತೇಜೋವಧೆ ನಡೆಯುತ್ತಿದ್ದು, ಇದು ತಕ್ಷಣವೇ ನಿಲ್ಲಬೇಕು ಎಂದು ಮನವಿ ಮಾಡಿದರು.

ನಾನು ನನ್ನ ಅಣ್ಣನ ಮಗನಿಗೆ ಎಂಬಿಬಿಎಸ್ ಓದಿಸಿ, 9 ತಿಂಗಳ ಹಿಂದೆ ಆಂಧ್ರಪ್ರದೇಶದ ಮೇಯರ್ ಒಬ್ಬರ ಮಗಳ ಜೊತೆ ಮದುವೆ ಮಾಡಿಸಿದೆ. ನಂತರ ಆ ಯುವತಿ ಮನೆಯ ಕುಟುಂಬದವರು ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ಪಿತೂರಿ ಮಾಡಲು ಶುರುಮಾಡಿದರು. ನಾನು ಸಾಕಿದ ಅಣ್ಣನ ಮಗ ನನ್ನ ವಿರುದ್ಧ ತಿರುಗಿಬಿದ್ದ. ಆಗ ನಾನು ಫ್ರೇಜರ್ ಟೌನ್ ಬಳಿ ಇರುವ ಮನೆ ಮತ್ತು ಕಾರು ನೀಡಿ ಆತನನ್ನು ಮನೆಯಿಂದ ಹೊರಹಾಕಿದೆ ಎಂದರು.

ಕೌಟುಂಬಿಕ ಕಲಹ ಪ್ರಕರಣ: ಮದುವೆಯಾದ ಬಳಿಕ ಕೌಟುಂಬಿಕ ಕಲಹದ ಕಾರಣ ಮೇಯರ್ ಕುಟುಂಬದವರು ನನ್ನ ಮೇಲೆ, ನನ್ನ ಹೆಂಡತಿ ಮತ್ತು ಮಗನ ವಿರುದ್ಧ ಕೌಟುಂಬಿಕ ಹಿಂಸಾಚಾರದ ದೂರು ನೀಡಿದ್ದಾರೆ. ಪೊಲೀಸರು ಎಪ್​​ಐಆರ್ ದಾಖಲಿಸಿದ್ದಾರೆ. ಈ ಪ್ರಕರಣದ ವಿಚಾರಣೆಗಾಗಿ ನಮ್ಮನ್ನು ಏಲೂರು ಪೊಲೀಸರು ಕರೆದುಕೊಂಡು ಹೋಗಿದ್ದರು. ಮೂಲಭೂತವಾಗಿ ಕೌಟುಂಬಿಕ ಹಿಂಸಾಚಾರ ಪ್ರಕರಣದಲ್ಲಿ 41 ದಿನಗಳ ನೋಟಿಸ್ ನೀಡಬೇಕು. ಈ ಅವಧಿಯಲ್ಲಿ ಯಾವುದಾದರೂ ಒಂದು ದಿನ ಪೊಲೀಸರಿಗೆ ಲಿಖಿತ ಹೇಳಿಕೆ ನೀಡಬೇಕು. ಈ ಪ್ರಕರಣದಲ್ಲಿ ಹೆಸರಿಸಲಾದ ಯಾರನ್ನೂ ಬಂಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಕೂಡ ಸ್ಪಷ್ಟವಾಗಿ ಹೇಳಿದೆ ಎಂದು ತಿಳಿಸಿದರು.

ಬಲವಂತದ ವಿಚಾರಣೆ: ಇಷ್ಟಾದರೂ ಮೇಯರ್ ಅವರ ಒತ್ತಡಕ್ಕೆ ಕಟ್ಟುಬಿದ್ದು ಅಲ್ಲಿನ ಪೊಲೀಸರು ತಮ್ಮನ್ನು ವಿಚಾರಣೆಗೆ ಬರಲೇಬೇಕು ಎಂದು ಹೇಳಿ ಬಲವಂತವಾಗಿ ಕರೆದುಕೊಂಡು ಹೋದರು. ವಿಚಾರಣೆ ಸಂದರ್ಭದಲ್ಲಿ ಪೊಲೀಸರ ವರ್ತನೆಗೆ ಬಗ್ಗೆ ಪ್ರಶ್ನೆ ಮಾಡಿದ್ದೇನೆ. ಈ ಪ್ರಕರಣದಲ್ಲಿ ನನ್ನ ಕುಟುಂಬದ ಮೂವರು ಸದಸ್ಯರ ಹೇಳಿಕೆಗಳನ್ನು ಪ್ರತ್ಯೇಕವಾಗಿ ದಾಖಲಿಸಿದ್ದೇವೆ. ಆದರೆ ಕೌಟುಂಬಿಕ ಹಿಂಸಾಚಾರ ಪ್ರಕರಣದಲ್ಲಿ ಎದುರಾಳಿಗಳು ಹೆಸರಿಸಿರುವ ನನ್ನ ಅಣ್ಣನ ಮಗ ಈಗ ಎಲ್ಲಿದ್ದಾನೆ ಎಂಬುದು ತಮಗೆ ತಿಳಿದಿಲ್ಲ ಎಂದು ಹೇಳಿದರು.

ಎರಡನೇ ಹೆಂಡತಿ ವಾಸ್ತವಕ್ಕೆ ದೂರವಾದ ಸಂಗತಿ: ತಮ್ಮ ವಿರುದ್ಧ ಇಲ್ಲ ಸಲ್ಲದ ವರದಿಗಳನ್ನು ಮಾಡಲಾಗಿದೆ. ನನಗೆ ಎರಡನೇ ಹೆಂಡತಿ ಇದ್ದು, ಆಕೆ ದೂರು ನೀಡಿರುವುದಾಗಿ ವರದಿ ಪ್ರಸಾರವಾಗಿದೆ. ಬಂಗಾರ ಕಳವು ಪ್ರಕರಣದಲ್ಲಿ ಪೊಲೀಸರು ತಮ್ಮನ್ನು ಬಂಧಿಸಿದ್ದಾಗಿ ಬಂದಿರುವ ವರದಿಗಳು ಸಹ ಸುಳ್ಳು. ಇವೆಲ್ಲವೂ ವಾಸ್ತವಕ್ಕೆ ದೂರವಾದ ಸಂಗತಿಗಳು ಎಂದು ಅಟ್ಟಿಕಾ ಗೋಲ್ಡ್ ಮಾಲೀಕ ಬೊಮ್ಮನಹಳ್ಳಿ ಬಾಬು ಹೇಳಿದರು.

ಹೈಕೋರ್ಟ್​ನಿಂದ 31 ಪ್ರಕರಣಗಳು ರದ್ದು: ಇದಕ್ಕೂ ಮುನ್ನ ನನ್ನ ಮೇಲೆ ಬೆಂಗಳೂರು ಪೊಲೀಸರು 3 ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದರು. ತುಮಕೂರು ಮತ್ತು ಧಾರವಾಡದಲ್ಲೂ ಪ್ರಕರಣ ದಾಖಲಾಗಿತ್ತು. ಸಮಗ್ರವಾಗಿ ವಿಚಾರಣೆ ನಡೆಸಿದ ಹೈಕೋರ್ಟ್ 31 ಪ್ರಕರಣಗಳನ್ನು ರದ್ದು ಮಾಡಿದೆ. ಅಟ್ಟಿಕಾ ಬಾಬು ಮೇಲೆ ಪೊಲೀಸರು ಅನಗತ್ಯವಾಗಿ ಪ್ರಕರಣಗಳನ್ನು ದಾಖಲಿಸುವಂತಿಲ್ಲ ಎಂದು ಎರಡು ವರ್ಷಗಳ ಹಿಂದೆ ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಅಂದಿನಿಂದ ಪೊಲೀಸರು ತಮ್ಮ ತಂಟೆಗೆ ಬರುತ್ತಿಲ್ಲ ಎಂದರು.

ಇದನ್ನೂ ಓದಿ: ಬೆಂಗಳೂರಲ್ಲಿ ನೈಜೀರಿಯಾ ಪ್ರಜೆ ಸಾವು, ಆತ್ಮಹತ್ಯೆ ಶಂಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.