ETV Bharat / state

ಉದ್ಯಮಿ ಮೇಲೆ ಹಲ್ಲೆ: ಮಹಿಳೆ ಸೇರಿ ಇಬ್ಬರು ಆರೋಪಿಗಳ ವಿರುದ್ಧ ದೂರು, ತನಿಖೆ - ಮೇ 1ರಂದು ಉದ್ಯಮಿ ಅಡ್ಡಗಟ್ಟಿ ಹಲ್ಲೆ

ಬೆಂಗಳೂರಿನಲ್ಲಿ ಉದ್ಯಮಿ ಮೇಲೆ ಮಹಿಳೆ ಹಾಗೂ ಇಬ್ಬರು ಸಂಬಂಧಿಕರು ಸೇರಿ ಹಲ್ಲೆ ಗೈದಿರುವ ಘಟನೆ ಕುರಿತಾಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲ್ಲೆಗೆ ಯತ್ನಿಸಿದ ಆರೋಪಿಗಳ ವಿರುದ್ಧ ಉದ್ಯಮಿ ಕೊಡಿಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Assaulted businessman
ಹಲ್ಲೆಗೆ ಒಳಗಾದ ಉದ್ಯಮಿ
author img

By

Published : May 17, 2023, 10:30 PM IST

Updated : May 18, 2023, 6:34 AM IST

ಉದ್ಯಮಿ ಮೇಲೆ ಹಲ್ಲೆ

ಬೆಂಗಳೂರು: ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಕಾರು ವ್ಯವಹಾರ ಮಾಡುವ ಉದ್ಯಮಿ ಮೇಲೆ ಮಹಿಳೆ ಹಾಗೂ ಇಬ್ಬರು ಸಂಬಂಧಿಕರು ಸೇರಿ ಹಲ್ಲೆ ನಡೆಸಿರುವ ಘಟನೆ ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿ ಇತ್ತೀಚೆಗೆ ನಡೆದಿದೆ. ಹಲ್ಲೆ ನಡೆಸಿದ ರೋನಿತ್, ದುರ್ಗಾ ಮತ್ತು ಆಕೆಯ ಸಹೋದರ ಹಾಗೂ ಇತರ ಆರೋಪಿಗಳ ವಿರುದ್ಧ ಶಂಕರ ನಗರದ ನಿವಾಸಿ ಉದ್ಯಮಿ ಅಖಿಲ್ ಅಲಿಯಾಸ್ ಹೇಮಾದ್ರಿ ಯಾದವ್ ಎಂಬುವವರು ಕೊಡಿಗೇಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ಸಂಬಂಧ ವಿಚಾರಣೆ ನಡೆಸುತ್ತಿದ್ದಾರೆ.

ಏನಿದು ಪ್ರಕರಣ? : ಅಖಿಲ್ ಕಳೆದ ಆರು ವರ್ಷಗಳಿಂದ ಕಾರು ವ್ಯವಹಾರ ನಡೆಸುತ್ತಿದ್ದನು. 2019ರಲ್ಲಿ ವ್ಯವಹಾರ ಸಂಬಂಧ ರೋನಿತ್ ಅಲಿಯಾಸ್ ಅಮೋದಿತ್ ಸಾಮ್ಸನ್ ಎನ್ನುವ ವ್ಯವಹಾರದಲ್ಲಿ ಮೋಸ ಮಾಡಿದ್ದ ಎನ್ನಲಾಗಿದೆ. ಈ ಸಂಬಂಧ ಯಲಹಂಕ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಅಷ್ಟೇ ಅಲ್ಲ ಈ ಪ್ರಕರಣದಲ್ಲಿ ರೋನಿತ್‌ನನ್ನು ಪೊಲೀಸರು ಬಂಧಿಸಿದ್ದರು. ಆದರೆ ರೋನಿತ್​ ಜಾಮೀನು ಪಡೆದು ಬಿಡುಗಡೆ ಆಗಿದ್ದ. ಜೈಲಿನಿಂದ ಬಿಡುಗಡೆಗೊಂಡ ಬಳಿಕ ರೋನಿತ್ ಪದೇ ಪದೆ ಕರೆ ಮಾಡಿ ಅಖಿಲ್​ಗೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.

ಮೇ 1ರಂದು ಉದ್ಯಮಿ ಅಡ್ಡಗಟ್ಟಿ ಹಲ್ಲೆ: ಮೇ 1ರಂದು ರಾತ್ರಿ ಕೆಲಸ ಮುಗಿಸಿಕೊಂಡು ಕಾರು ಚಾಲಕ ನಾಗೇಶ್ ಜತೆ ಉದ್ಯಮಿ ಅಖಿಲ್​ ​ಎಲ್ ಅಂಡ್​ ಟಿ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ಫ್ಲ್ಯಾಟ್‌ಗೆ ಹೋಗುತ್ತಿದ್ದ ವೇಳೆ, ಆಗ ಆತನ ಕಾರನ್ನು ಹಿಂಬಾಲಿಸಿದ ಆರೋಪಿಗಳು, ಅಪಾರ್ಟ್‌ಮೆಂಟ್ ಗೇಟ್ ಮುಂಭಾಗ ಅಡ್ಡಗಟ್ಟಿದ್ದರು. ಬಳಿಕ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಮುಖ, ಎದೆ ಮೇಲೆ ಹಲ್ಲೆ ನಡೆಸಿದ್ದಾರೆ. ತಮ್ಮ ಕಾರು ಚಾಲಕ ನಾಗೇಶ್ ಮೇಲೆಯೂ ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಅಖಿಲ್​ ತಾವು ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಹಲ್ಲೆ ನಡೆಸಿರುವುದನ್ನು ಅಲ್ಲಿನ ನಿವಾಸಿಯೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಕೂಡಾ ಆಗಿದೆ.

ಆರೋಪಿಗಳಿಗೆ ನೋಟಿಸ್: ಈ ಪ್ರಕರಣದ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೊಡಿಗೇಹಳ್ಳಿ ಪೊಲೀಸರು ಆರೋಪಿಗಳಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಉದ್ಯಮಿ ಅಖಿಲ್​​​​​​​ ಹಾಗೂ ಹಲ್ಲೆ ನಡೆಸಿದ ಮಹಿಳೆ ಹಾಗೂ ಆಕೆಯ ಸಹಚರರ ನಡುವೆ ಈ ಮೊದಲು ಹಣಕಾಸು ವ್ಯವಹಾರ ಇತ್ತು ಎನ್ನಲಾಗಿದೆ. ಇದೇ ಹಳೆಯ ಹಣಕಾಸಿನ ವ್ಯವಹಾರದ ಭಾಗವಾಗಿಯೇ ಉದ್ಯಮಿ ಅಖಿಲ್​ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳ ಮೂಲದಿಂದ ತಿಳಿದು ಬಂದಿದೆ.

ಈ ಬಗ್ಗೆ ಪೊಲೀಸರು ಕೂಲಂಕಷ ತನಿಖೆ ನಡೆಸುತ್ತಿದ್ದು, ತನಿಖೆ ಬಳಿಕವೇ ಈ ಬಗ್ಗೆ ಸಂಪೂರ್ಣ ಮಾಹಿತಿ ಹೊರ ಬೀಳುವ ಸಾಧ್ಯತೆ ಇದೆ.

ಇದನ್ನೂಓದಿ:ರಜೆ ಅರ್ಜಿ ಸಲ್ಲಿಸಿ ಶಾಲೆಯಿಂದ ಬರುತ್ತಿದ್ದ ವಿದ್ಯಾರ್ಥಿ ಮೇಲೆ ಹರಿದ ಟಿಪ್ಪರ್.. ಬಾಲಕ ಸ್ಥಳದಲ್ಲೇ ಸಾವು

Last Updated : May 18, 2023, 6:34 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.