ETV Bharat / state

ನೆರೆಯಿಂದ 38 ಸಾವಿರ ಕೋಟಿ ರೂ. ನಷ್ಟ ಅಂದಾಜು; ಪರಿಹಾರಕ್ಕಾಗಿ ಕೇಂದ್ರಕ್ಕೆ ಮೊರೆ - ನೆರೆ ಪರಿಹಾರ

ವಿಧಾನಸೌಧದಲ್ಲಿ ಇಂದು ನೆರೆ ಪರಿಹಾರ ಕುರಿತು ಕಂದಾಯ ಅಧಿಕಾರಿಗಳ ಜೊತೆ ಕಂದಾಯ ಸಚಿವ ಆರ್​​. ಅಶೋಕ್​​ ಸಭೆ ನಡೆಸಿದ್ರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಉಂಟಾದ ಪ್ರವಾಹದಿಂದ ಸಾಕಷ್ಟು ನಷ್ಟ ಆಗಿದೆ. ಎಸ್​​​​​​ಡಿಆರ್​​​​ಎಫ್ ಮಾರ್ಗಸೂಚಿಯನುಸಾರ 3,818.89 ಕೋಟಿ ರೂ. ಪರಿಹಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ರು.

ಕಂದಾಯ ಸಚಿವ ಆರ್​​. ಅಶೋಕ್​​
author img

By

Published : Sep 11, 2019, 9:21 PM IST

Updated : Sep 11, 2019, 11:25 PM IST

ಬೆಂಗಳೂರು: ರಾಜ್ಯದಲ್ಲಿ ಉಂಟಾದ ಪ್ರವಾಹದಿಂದ ಸಾಕಷ್ಟು ನಷ್ಟ ಆಗಿದೆ. ಸಮೀಕ್ಷೆಯನುಸಾರ ಅಂದಾಜು 38 ಸಾವಿರ ಕೋಟಿ ರೂ.ನಷ್ಟು ನಷ್ಟವಾಗಿರುವ ಬಗ್ಗೆ ಕೇಂದ್ರಕ್ಕೆ ವರದಿ ಕೊಟ್ಟಿದ್ದೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಮಾಹಿತಿ ನೀಡಿದ್ದಾರೆ.

ವಿಧಾನಸೌಧದಲ್ಲಿ ಇಂದು ನೆರೆ ಪರಿಹಾರ ಕುರಿತು ಕಂದಾಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಎಸ್​​​​​​ಡಿಆರ್​​​​ಎಫ್ ಮಾರ್ಗಸೂಚಿಯನುಸಾರ 38 ಸಾವಿರ ಕೋಟಿ ರೂ. ಪರಿಹಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಪ್ರವಾಹದಿಂದ ಒಟ್ಟು 2,47,628 ಮನೆಗಳಿಗೆ ಹಾನಿಯಾಗಿದೆ. ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಒಟ್ಟು 8.88 ಲಕ್ಷ ಹೆಕ್ಟೇರ್ ನಷ್ಟು ಹಾನಿಯಾಗಿದೆ. ಒಟ್ಟು 21,818 ಕಿ.ಮೀ ರಸ್ತೆ ಹಾನಿಯಾಗಿದ್ದು, (ರಾಜ್ಯ ಹೆದ್ದಾರಿ 4119, ಗ್ರಾಮೀಣ ರಸ್ತೆ 14,921 ಮತ್ತು ನಗರ ರಸ್ತೆ 2778 ಕಿ.ಮೀ), 2,193 ಸೇತುವೆಗಳು ಹಾನಿಯಾಗಿವೆ.10,988 ಸರ್ಕಾರಿ ಕಟ್ಟಡಗಳು (ಅಂಗನವಾಡಿ, ಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಇತರೆ) ಹಾನಿಯಾಗಿವೆ. 1,550 ಸಣ್ಣ ನೀರಾವರಿ ಹಾಗೂ ಜಿಲ್ಲಾ ಪಂಚಾಯಿತಿ ಟ್ಯಾಂಕುಗಳು ಹಾನಿಯಾಗಿವೆ. 26 ಕಾಳಜಿ ಕೇಂದ್ರಗಳಲ್ಲಿ 5632 ಜನರಿದ್ದಾರೆ ಎಂದು ವಿವರಿಸಿದರು. 2,258 ಲಕ್ಷ ಕುಟುಂಬಗಳಿಗೆ 10 ಸಾವಿರ ರೂ. ನೀಡಲಾಗಿದೆ. ಇನ್ನು1929 ಕುಟುಂಬಗಳು ಮಾತ್ರ ಬಾಕಿ ಇದೆ. ಎಲ್ಲಾ ಜಿಲ್ಲೆಗಳ ಪಿಡಿ ಖಾತೆಯಲ್ಲಿ 380.44 ಕೋಟಿ ರೂ. ಇದೆ. ಒಟ್ಟು 414 ಕೋಟಿ ರೂ. ಒಟ್ಟು ಬಿಡುಗಡೆಯಾಗಿದೆ ಎಂದು ಹೇಳಿದರು.

ನೆರೆ ಪರಿಹಾರ ಕುರಿತು ಕಂದಾಯ ಅಧಿಕಾರಿಗಳ ಜೊತೆ ಆರ್​​​. ಅಶೋಕ್​​ ಸಭೆ

ಹಾನಿಗೊಳಗಾದ ಮನೆಗಳಿಗೆ 25,000 ರೂ. ತಕ್ಷಣ ಬಿಡುಗಡೆಗೆ ಸೂಚನೆ ನೀಡಲಾಗಿದೆ. ಹಂತ ಹಂತವಾಗಿ 5 ಲಕ್ಷ ರೂ. ನೀಡಲಾಗುವುದು. ಮೂರು ಹಂತಗಳಲ್ಲಿ ಮನೆ ನಷ್ಟವಾದವರನ್ನು ಗುರುತಿಸಲಾಗಿದೆ. ಅಕ್ರಮ ತಡೆಯಲು ಆರ್​​​​ಟಿಜಿಎಸ್ ಮೂಲಕ ನೇರವಾಗಿ ಸಂತ್ರಸ್ತರ ಅಕೌಂಟ್ ಗೆ ಹಣ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಆನ್ ಲೈನ್ ವ್ಯವಸ್ಥೆ:

ಸಬ್ ರಿಜಿಸ್ಟ್ರಾರ್​​ನಲ್ಲಿ ಕಚೇರಿ ಕೆಲಸಗಳು ಆನ್‌ಲೈನ್ ಮೂಲಕ ನಡೆಯುತ್ತವೆ. ಇಸಿ ಆನ್‌ಲೈನ್​ನಲ್ಲಿ ಪಡೆಯಲು ಹೊಸ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಹತ್ತು ಸಾವಿರ ಜನರಿಗೆ ಸಿಹಿ ಸುದ್ದಿ:

ಬೆಂಗಳೂರಿನಲ್ಲಿ 94 ಸಿಸಿ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ಹಲವು ದಶಕಗಳಿಂದಲೂ ವಾಸವಿದ್ದಾರೆ. ಹಾಗಾಗಿ, ಅವರಿಗೆ ಮನೆ ಹಕ್ಕುಪತ್ರವಿಲ್ಲ. ಹಾಗಾಗಿ, ನವೆಂಬರ್ ಒಳಗೆ 10 ಸಾವಿರ ಜನರಿಗೆ ಕೇವಲ 50 ರೂಪಾಯಿ ಪಡೆದು ರಿಜಿಸ್ಟ್ರೇಷನ್ ಪತ್ರ ನೀಡಲು ತೀರ್ಮಾನಿಸಲಾಗಿದೆ. ಬೆಂಗಳೂರಿನಲ್ಲಿ 52,813 ಅರ್ಜಿಗಳು ಬಂದಿವೆ. ಅದರಲ್ಲಿ 15,296 ಅರ್ಜಿ ಬಾಕಿ ಇವೆ. ಕೆಲವು ಕಡೆ ಬೋಗಸ್ ಸರ್ಟಿಫಿಕೇಟ್ ಮಾಡಲಾಗುತ್ತಿದೆ. ಅದರಲ್ಲಿ ಡಿಜಿಟಲೈಸ್ ವ್ಯವಸ್ಥೆ ಮಾಡಲಾಗುತ್ತಿದೆ. ಹಕ್ಕುಪತ್ರಕ್ಕೆ ಡಿಜಿಟಲ್ ಕಾರ್ಡ್ ಅಳವಡಿಸಲು ಚಿಂತನೆ ನಡೆಸಲಾಗಿದೆ. ಬಡವರಿಗೆ ಸ್ವಂತ ಮನೆಯಾಗಬೇಕು. ಹಾಗಾಗಿ, ನವೆಂಬರ್​ನಲ್ಲಿ ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನ ಅಥವಾ ಅರಮನೆ ಮೈದಾನದಲ್ಲಿ ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಮಾಡಿ ಬಡವರಿಗೆ ರಿಜಿಸ್ಟ್ರೇಷನ್ ಪತ್ರ ವಿತರಿಸಲಾಗುವುದು ಎಂದು ತಿಳಿಸಿದರು.

Intro:KN_BNG_03_minister_Ashok__pc1_video_9024736

Body:KN_BNG_03_minister_Ashok__pc1_video_9024736

Conclusion:KN_BNG_03_minister_Ashok__pc1_video_9024736
Last Updated : Sep 11, 2019, 11:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.