ETV Bharat / state

'ನೀವು ದನ ಕೊಲ್ಲುವವರು, ನಾವು ದನ ಕಾಯುವವರು': ಕಾಂಗ್ರೆಸ್​​ಗೆ ಬೊಮ್ಮಾಯಿ ತಿರುಗೇಟು - ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರ

ವಿಧಾನಸೌಧದಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ನಾವು ಗೋವು ರಕ್ಷಕರಾಗಿ ಕೆಲಸ ಮಾಡುತ್ತಿದ್ದೇವೆ. ಅವರು (ಕಾಂಗ್ರೆಸ್​ನವರು) ದನ ಕೊಲ್ಲುವವರು, ನಾವು ದನ ಕಾಯುವವರು. ಸಂವಿಧಾನದ ಆಸೆಯದಂತೆ ನಾವು ಮಸೂದೆ ಪಾಸ್ ಮಾಡಿದ್ದೇವೆ ಎಂದರು.

Bommai
Bommai
author img

By

Published : Feb 9, 2021, 4:25 AM IST

ಬೆಂಗಳೂರು: ಕಾಂಗ್ರೆಸ್ ಪಕ್ಷದವರಿಗೆ ಗೋಹತ್ಯೆ ನಿಷೇಧದ ಮಸೂದೆ ಬಗ್ಗೆ ಚರ್ಚೆ ಮಾಡಲು ಆಸಕ್ತಿ ಇಲ್ಲ. ಸದನದಲ್ಲಿ ಚರ್ಚೆ ಮಾಡದೆ ರಾಜಕೀಯ ಮಾಡಿದ್ದಾರೆ ಎಂದು ಗೃಹ ಸಚಿವ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾವು ಗೋವು ರಕ್ಷಕರಾಗಿ ಕೆಲಸ ಮಾಡುತ್ತಿದ್ದೇವೆ. ಅವರು (ಕಾಂಗ್ರೆಸ್​ನವರು) ದನ ಕೊಲ್ಲುವವರು, ನಾವು ದನ ಕಾಯುವವರು. ಸಂವಿಧಾನದ ಆಸೆಯದಂತೆ ನಾವು ಮಸೂದೆ ಪಾಸ್ ಮಾಡಿದ್ದೇವೆ ಎಂದರು.

ಅಂಜೆಡಾ ಪ್ರಕಾರ ಈ ಕಾಯ್ದೆ ಇವತ್ತು ಅಂಗೀಕಾರ ಆಗಿದೆ. ಕಲಾಪದಲ್ಲಿ ಮೂರು ಗಂಟೆ ಚರ್ಚೆ ನಡೆದಿದೆ. ಪ್ರಜಾಪ್ರಭುತ್ವದಲ್ಲಿ ಚರ್ಚೆ ಬಹಳ ಅಗತ್ಯ. ಅವರು ಪದೇ ಪದೇ ಇದನ್ನ ವಿರೋಧ ಮಾಡುತ್ತಲೇ ಬಂದಿದ್ದರು. ಅವರದ್ದು ಮಸೂದೆ ಪಾಸ್ ಆಗಬಾರದೆಂಬ ಉದ್ದೇಶ ಇತ್ತು. ಈ ಹಿಂದೆ ಪೀಠಕ್ಕೆ ಹೋಗಿ ಎದರಿಸುವಂತೆ ಇವತ್ತು ಮಾಡಿದ್ದಾರೆ. ಉಪ ಸಭಾಪತಿಗಳು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.

ಮಾಧ್ಯಮಗಳ ಜತೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ

ಗೋವು ರಕ್ಷಣೆಯ ಬಗ್ಗೆ ಬಜೆಟ್​ನಲ್ಲಿ ಮೀಸಲಿಡುತ್ತೇವೆ. ಹೊಸ ಕಾರ್ಯಕ್ರಮಗಳ ಮೂಲಕ ರಕ್ಷಣೆ ಮಾಡುತ್ತವೆ. ಪಶು ಸಂಪತ್ತು ಕಾಪಾಡುವ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಮತ್ತು ಜೆಡಿಎಸ್ ರೈತರ ವಿರೋಧವಾಗಿ ರಾಜಕಾರಣ ಮಾಡಲು ಪ್ರಯತ್ನ ಮಾಡಿದ್ದಾರೆ. ಅವರ ಪಕ್ಷದವರು ಸಾಕಷ್ಟು ಮಾತನಾಡಿದ್ದಾರೆ. ಆದರೆ, ಉಪಯುಕ್ತವಾದ ಸಲಹೆ ನೀಡಿಲ್ಲ ಎಂದು ಹೇಳಿದರು.

ಬಸವಣ್ಣವರ ತತ್ವದ ಮೇಲೆ ನಾವು ಈ ಕಾಯ್ದೆ ತಂದಿದ್ದೇವೆ. ಬಸವಣ್ಣನವರ ದಯೆ, ಸಕಲ ಜೀವ ರಾಶಿಗಳ ಜೀವ ರಕ್ಷಣೆಗಾಗಿ ತಂದಿದ್ದೇವೆ ಎಂದರು.

ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ದೇವೇಗೌಡರನ್ನು ಹೊಗಳಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಚರಣ್ ಸಿಂಗ್ ಹಾಗೂ ದೇವೇಗೌಡರನ್ನು ಹೊಗಳಿದ್ದಾರೆ. ರೈತರ ಪರವಾದ ಕೆಲಸ ಹಾಗೂ ಒಳ್ಳೆಯದು ಮಾಡಿದರೆ ಹೊಗಳಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.