ETV Bharat / state

ಕೆಂಪೇಗೌಡ ಏರ್​ಪೋರ್ಟ್​ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ: ವಿದೇಶಿ ಮಹಿಳೆಯಿಂದ ಕಂತೆ‌ ಕಂತೆ ದೇಶಿ ಹಣ ವಶ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಿ ಮಹಿಳೆ ಬಳಿ ಇದ್ದ ಕಂತೆ ಕಂತೆ ದೇಶಿಯ ಹಣ ಸೀಜ್ ಆಗಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
author img

By ETV Bharat Karnataka Team

Published : Sep 27, 2023, 4:26 PM IST

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ) : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಪ್ ಭದ್ರತಾ ಪಡೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ವಿದೇಶಿ ಮಹಿಳೆ ಬಳಿ ಇದ್ದ ಕಂತೆ ಕಂತೆ ದೇಶಿಯ ಹಣವನ್ನು ವಶಪಡಿಸಿಕೊಂಡಿದ್ದಾರೆ. ಅಂದಹಾಗೆ ಬೆಂಗಳೂರಿನಿಂದ ಮುಂಬೈಗೆ ತೆರಳಲು ಏರ್​ಪೋರ್ಟ್​ಗೆ ವಿದೇಶಿ ಮಹಿಳೆ ಬಂದಿದ್ದರು. ಮಹಿಳೆಯ ಮೇಲೆ ಅನುಮಾನಗೊಂಡ ಭದ್ರತಾಪಡೆ ಸಿಬ್ಬಂದಿ ಬ್ಯಾಗನ್ನು ತಪಾಸಣೆಗೆ ಒಳಪಡಿಸಿದ್ದಾರೆ.

ಈ ವೇಳೆ ವಿದೇಶಿ ಮಹಿಳೆಯ ಬಳಿ ದೇಶಿಯ 15 ಲಕ್ಷ ನಗದು ಗರಿ ಗರಿ ಕಂತೆ ನೋಟುಗಳು ಪತ್ತೆಯಾಗಿವೆ. ಇದನ್ನು ಕಂಡ ಭದ್ರತಾ ಸಿಬ್ಬಂದಿ ಶಾಕ್ ಹಾಗಿದ್ದಾರೆ. ಬಳಿಕ ಹಣದ ಸಮೇತ ಮಹಿಳೆಯನ್ನು ವಶಕ್ಕೆ ಪಡೆದ ಏರ್​ಪೋರ್ಟ್ ಭದ್ರತಾ ಸಿಬ್ಬಂದಿ ಆದಾಯ ಇಲಾಖೆ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಈ ಸಂಬಂಧ ಆದಾಯ ತೆರಿಗೆ ಇಲಾಖೆ‌ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಮರ್ಮಾಂಗದಲ್ಲಿ ಡ್ರಗ್ಸ್ ಕ್ಯಾಪ್ಸುಲ್ ಪತ್ತೆ; ವಿದೇಶಿ ಮಹಿಳೆ ಬಂಧನ : ಸೆ.13 ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಮರ್ಮಾಂಗದಲ್ಲಿ ಅಡಗಿಸಿಟ್ಟುಕೊಂಡು ಸಾಗಿಸುತ್ತಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದರು. ಆರೋಪಿ ವಿದೇಶಿ ಮಹಿಳೆ ಕೀನ್ಯಾ ದೇಶದವರಾಗಿದ್ದು, ವಶಕ್ಕೆ ಪಡೆದಿದ್ದರು.

ಇದನ್ನೂ : ನಕಲಿ ಪಾಸ್​ಪೋರ್ಟ್ ಮೂಲಕ‌ ವಿದೇಶಕ್ಕೆ ತೆರಳುತ್ತಿದ್ದವನ ಬಂಧನ.. ಕೆಂಪೇಗೌಡ ಏರ್ಪೋರ್ಟ್​ನ ಇಮಿಗ್ರೇಷನ್ ಅಧಿಕಾರಿಗಳಿಂದ ವಶ

ವಿದೇಶದಿಂದ ಕೆಂಪೇಗೌಡ ಏರ್​ಪೋರ್ಟ್​ಗೆ ಬಂದ ಮಹಿಳೆಯನ್ನು ತೀವ್ರವಾಗಿ ತಪಾಸಣೆ ಮಾಡಿದಾಗ ಮರ್ಮಾಂಗದಲ್ಲಿ ಡ್ರಗ್ಸ್ ಕ್ಯಾಪ್ಸುಲ್ ಪತ್ತೆಯಾಗಿತ್ತು. ಈಕೆಯಿಂದ 1 ಕೆಜಿ 144 ಗ್ರಾಂ ತೂಕದ ಕೊಕೇನ್ ಜಪ್ತಿ ಮಾಡಲಾಗಿತ್ತು. ಆರೋಪಿ ಅಥಿಸ್ ಅಬಬಾದಿಂದ ಬೆಂಗಳೂರಿಗೆ ಎಥಿಫಿಯನ್ ಏರ್​ಲೈನ್ಸ್​ ಮೂಲಕ ಬಂದಿದ್ದಳು. ಖಚಿತ ಮಾಹಿತಿ ಮೇರೆಗೆ ತಡೆದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಈ ಕುರಿತು ಎನ್​ಸಿಬಿ ಅಧಿಕಾರಿಗಳು ತನಿಖೆಗೆ ತೀವ್ರಗೊಳಿಸಿದ್ದರು.

ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕನೊಂದಿಗೆ 267 ಗ್ರಾಂ ಚಿನ್ನ ವಶ : ಮತ್ತೊಂದು ಘಟನೆ ಕಳೆದ ತಿಂಗಳು ಆಗಸ್ಟ್​ 18 ರಂದು ದುಬೈನಿಂದ ಎಮಿರೇಟ್ಸ್ ವಿಮಾನ ಸಂಖ್ಯೆ 568ರಲ್ಲಿ ಪ್ರಯಾಣಿಕನೊಬ್ಬ ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವ ಮಾಹಿತಿ ಬಂದಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಲಗೇಜ್ ಬ್ಯಾಗ್​​ಗೆ ಚಿನ್ನದ ನಟ್ ಬೋಲ್ಟ್ ಅಳವಡಿಸಿ ಅಧಿಕಾರಿಗಳ ಕಣ್ತಪ್ಪಿಸಿ ಚಿನ್ನ ಸಾಗಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದನು. ಬಳಿಕ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಆತನೊಂದಿಗೆ 267 ಗ್ರಾಂ ಚಿನ್ನ ವಶಕ್ಕೆ ಪಡೆದು, ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಇದನ್ನೂ ಓದಿ : ಲ್ಯಾಪ್‌ಟಾಪ್​ನಲ್ಲಿ ಕ್ರೆಡಿಟ್ ಕಾರ್ಡ್​ನಂತೆ ಚಿನ್ನ ಬಚ್ಚಿಟ್ಟು ಸಾಗಣೆ ಯತ್ನ: ಸಿಕ್ಕಿಬಿದ್ದ ಪ್ರಯಾಣಿಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.