ETV Bharat / state

ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅಧ್ಯಕ್ಷತೆಯಲ್ಲಿ ಶಿವಾಜಿನಗರ ಕ್ಷೇತ್ರದ ಪ್ರಣಾಳಿಕೆ ಬಿಡುಗಡೆ..

ಸಾಮಾನ್ಯ ಜನರ ನೈಜ ಸಮಸ್ಯೆಗಳನ್ನು ಅರಿತು ಅವುಗಳನ್ನು ಪರಿಣತರು ನೀಡುವ ಪರಿಹಾರದ ಮೂಲಕ ಪರಿಹರಿಸಬೇಕು ಎಂದು ನಗರ ಯೋಜನೆಗಳ ತಜ್ಞ ವಿವೇಕ್​ ಮೆನನ್​ ತಿಳಿಸಿದ್ದಾರೆ.

ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅಧ್ಯಕ್ಷತೆಯಲ್ಲಿ ಶಿವಾಜಿನಗರ ಕ್ಷೇತ್ರದ ಪ್ರಣಾಳಿಕೆ ಬಿಡುಗಡೆ

author img

By

Published : May 2, 2023, 4:13 PM IST

ಬೆಂಗಳೂರು : ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಪ್ರಣಾಳಿಕೆಯನ್ನು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅಧ್ಯಕ್ಷತೆಯಲ್ಲಿ ನಗರದ ಪ್ರೆಸ್ ಕ್ಲಬ್ ನಲ್ಲಿ ಇಂದು ಬಿಡುಗಡೆ ಮಾಡಲಾಯಿತು. ಪಕ್ಷದಿಂದ ಸ್ಪರ್ಧಿಸಿರುವ 209 ಕ್ಷೇತ್ರಗಳಲ್ಲಿಯೂ ಸಹ ಇದೇ ರೀತಿ ಕ್ಷೇತ್ರವಾರು ಪ್ರತ್ಯೇಕ ಪ್ರಣಾಳಿಕೆಯನ್ನು ನೀಡುವ ಮೂಲಕ ಮತದಾರರುಗಳಿಗೆ ಉತ್ತಮ ಪರ್ಯಾಯ ಆಯ್ಕೆಯನ್ನು ಈ ಮೂಲಕ ನೀಡಲಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ತಿಳಿಸಿದರು.

ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಆಮ್ ಆದ್ಮಿ ಪಕ್ಷದ ಮುಖಂಡರುಗಳು ಕಾರ್ಯಕರ್ತರುಗಳು ಕಳೆದ ಒಂದು ವರ್ಷದಿಂದ ಜನಾಭಿಪ್ರಾಯವನ್ನು ಸಂಗ್ರಹಿಸುವ ಮೂಲಕ ಈ ಉತ್ತಮ ಕಾರ್ಯಕ್ಕೆ ಕೈ ಹಾಕಿರುವುದು ಕರ್ನಾಟಕ ರಾಜಕೀಯ ಇತಿಹಾಸದ ಮೈಲಿಗಲ್ಲಾಗಿದೆ ಎಂದು ತಿಳಿಸಿದರು. ಆಮ್ ಆದ್ಮಿ ಪಾರ್ಟಿಯ ಪೊರಕೆಯೊಂದಿಗೆ ನಾನು ಶಿವಾಜಿನಗರವನ್ನು ವಿಶ್ವದರ್ಜೆಯ ಸೌಲಭ್ಯಗಳುಳ್ಳ, ನಾಗರಿಕ ಸ್ನೇಹಿಯಾದ ನಗರ ಕೇಂದ್ರವನ್ನಾಗಿ ಮಾಡುತ್ತೇನೆ ಎಂದು ಶಿವಾಜಿನಗರ ಕ್ಷೇತ್ರದ ಎಎಪಿ ಅಭ್ಯರ್ಥಿ ಪ್ರಕಾಶ್ ನೆಡುಂಗಡಿ ಈ ಸಂದರ್ಭದಲ್ಲಿ ಹೇಳಿದರು.

ಶಿವಾಜಿನಗರವು ಭೌಗೋಳಿಕ ಮತ್ತು ಐತಿಹಾಸಿಕವಾಗಿ ಬೆಂಗಳೂರಿನ ಕೇಂದ್ರವಾಗಿದೆ. ವಿಧಾನಸೌಧ, ಹೈಕೋರ್ಟ್, ಸಚಿವಾಲಯಗಳು ಮತ್ತು ಇತರ ಸರ್ಕಾರಿ ಕಟ್ಟಡಗಳು ಶಿವಾಜಿನಗರದಲ್ಲಿವೆ. ಇದು ಬೆಂಗಳೂರಿನ ವ್ಯಾಪಾರ ವಲಯದ ಕೇಂದ್ರಬಿಂದುವಾಗಿದೆ. ಕೆಲವು ಹಳೆಯ ಧಾರ್ಮಿಕ ಸ್ಥಳಗಳು, ಅಂಗಡಿಮುಂಗಟ್ಟುಗಳು, ಉದ್ಯಾನವನಗಳು ಮತ್ತು ಪ್ರವಾಸಿ ತಾಣಗಳನ್ನು ಹೊಂದಿದೆ. ಇಲ್ಲಿನ ನಿವಾಸಿಗಳು ನಮ್ಮ ರಾಜ್ಯ ಮತ್ತು ದೇಶದ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತಾರೆ. ಆದರೂ ಕೂಡ ಇಲ್ಲಿಯವರೆಗೆ ಶಿವಾಜಿನಗರದ ಶೇ. 90ಕ್ಕಿಂತ ಹೆಚ್ಚು ನಿವಾಸಿಗಳು ಸರ್ಕಾರಿ ಸೇವೆಗಳಿಗೆ ಸಂಬಂಧಿಸಿ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ ಎಂದರು.

ಇದು ರಾಜ್ಯ ರಾಜಧಾನಿಯ ಕೇಂದ್ರ ಸ್ಥಳವೆಂದು ಎಂದು ಹೇಳಲು ನಾಚಿಕೆ ಪಡುವಂತಹ ವಾತಾವರಣ ನಿರ್ಮಾಣವಾಗಿದೆ. ಈ ಚುನಾವಣೆಯಲ್ಲಿ ನಾನು ಜಯಗಳಿಸಿದರೆ, ಪ್ರಾಮಾಣಿಕ ಮತ್ತು ಉತ್ತಮ ಆಡಳಿತದ ಮೂಲಕ ಬದಲಾವಣೆ ತರುತ್ತೇನೆ. ಪ್ರಾಮಾಣಿಕ ಮತ್ತು ಪಾರದರ್ಶಕ ಆಡಳಿತದಿಂದ ಆರಂಭಿಸಿ ಸಾಮಾನ್ಯ ಜನರ ನೋವು-ನಲಿವುಗಳನ್ನು ತಿಳಿಸುವ 23 ಅಂಶಗಳ ಯೋಜನೆಗಳನ್ನು ಜಾರಿಗೆ ತರುವ ಗುರಿ ನನ್ನದಾಗಿದೆ. ಈ ಪ್ರಣಾಳಿಕೆಯನ್ನು ಕ್ಷೇತ್ರದಾದ್ಯಂತ ಜನರ ಅಭಿಪ್ರಾಯಗಳನ್ನು ಕೇಳಿ, ಕೆಲವು ಉತ್ತಮ ನಗರ ಯೋಜನೆ ತಜ್ಞರ ಜ್ಞಾನ ಮತ್ತು ಅನುಭವವನ್ನು ಬಳಸಿಕೊಂಡು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ: ಎಎಪಿಯ ಬೆಂಗಳೂರು ಅಲ್ಪಸಂಖ್ಯಾತರ ಅಧ್ಯಕ್ಷ ಫರೀದುದ್ದೀನ್ ಷರೀಫ್ ಮಾತನಾಡಿ, ಶಿವಾಜಿನಗರದ ಜನಸಾಮಾನ್ಯರಿಗೆ ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ಕಲ್ಪಿಸಲು ಬಳಕೆಯಾಗಬೇಕಿದ್ದ ಹಣವು ವ್ಯವಸ್ಥಿತವಾಗಿ ಲೂಟಿಯಾಗಿದೆ. ಇಲ್ಲಿನ ವಿಐಪಿ ಪ್ರದೇಶಗಳ ಅಭಿವೃದ್ಧಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ಉದಾಹರಣೆಗೆ ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಶಿವಾಜಿನಗರಕ್ಕೆ ಭಾರಿ ಹಣ ಮಂಜೂರು ಮಾಡಲಾಗಿದೆ. ಆದರೆ ರಾಜಕಾರಣಿಗಳ ಕಮಿಷನ್‌ ದಾಹದಿಂದಾಗಿ ಮೇಕಪ್‌ನಂತೆ ಮೇಲ್ನೋಟಕ್ಕೆ ಮಾತ್ರ ಕಾಮಗಾರಿಗಳು ನಡೆದಿವೆ. ಹಾಗಾಗಿ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಪ್ರಕಾಶ್ ನೆಡುಂಗಡಿಯವರು ಶಾಸಕರಾದಾಗ ಈ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ಹೇಳಿದರು.

ಆಮ್‌ ಆದ್ಮಿ ಪಾರ್ಟಿಯ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಹಾಗೂ ನಗರಾಭಿವೃದ್ಧಿ ತಜ್ಞರಾದ ಅಶ್ವಿನ್‌ ಮಹೇಶ್‌ ಮಾತನಾಡಿ, ಶಿವಾಜಿನಗರದಲ್ಲಿ ಪರಿವರ್ತನೆ ತರಲು ಪ್ರಕಾಶ್ ನೆಡುಂಗಡಿಯವರ ಪ್ರಣಾಳಿಕೆಯು ಜಾರಿಗೆ ಬರಬೇಕಿದೆ. ಇದು ಆಮ್ ಆದ್ಮಿ ಪಕ್ಷ ಮತ್ತು ಅರವಿಂದ್ ಕೇಜ್ರಿವಾಲ್ ರಾಜಕೀಯ ವಿಧಾನವನ್ನು ಪ್ರತಿಬಿಂಬಿಸುತ್ತಿದೆ. ವೋಟ್‌ ಬ್ಯಾಂಕ್, ಕೋಮುವಾದ ಹಾಗೂ ಹಣಬಲದ ರಾಜಕೀಯವನ್ನು ಬೆಂಬಲಿಸುವ ಬದಲು, ಈ ಪ್ರಣಾಳಿಕೆಯು ಎಲ್ಲ ಸಾಮಾನ್ಯ ಜನರ ನೈಜ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತದೆ. ದೆಹಲಿಯಲ್ಲಿ ಕೂಡ ಎಎಪಿಯು ಇದನ್ನೇ ಮಾಡಿದೆ ಎಂದು ಹೇಳಿದರು.

ಶಿವಾಜಿನಗರದ ಸಮಗ್ರ ಅಭಿವೃದ್ಧಿಗೆ ಬೇಕಾದ ಎಲ್ಲ ಅಂಶಗಳಿವೆ: ನಗರ ಯೋಜನೆಗಳ ತಜ್ಞ ವಿವೇಕ್‌ ಮೆನನ್‌ ಮಾತನಾಡಿ, ಸಾಮಾನ್ಯ ಜನರ ನೈಜ ಸಮಸ್ಯೆಗಳನ್ನು ಅರಿತು ಅವುಗಳನ್ನು ಪರಿಣಿತರು ನೀಡುವ ಪರಿಹಾರಗಳ ಮೂಲಕ ಪರಿಹರಿಸಬೇಕು. ಶಿವಾಜಿನಗರದಲ್ಲಿ ಈ ಕೆಲಸವನ್ನು ಪ್ರಕಾಶ್ ನೆಡುಂಗಡಿ ಮಾತ್ರ ಮಾಡಬಲ್ಲರು. ಇವರ ಪ್ರಣಾಳಿಕೆಯಲ್ಲಿ ಶಿವಾಜಿನಗರದ ಸಮಗ್ರ ಅಭಿವೃದ್ಧಿಗೆ ಬೇಕಾದ ಎಲ್ಲ ಅಂಶಗಳಿವೆ ಎಂದು ಹೇಳಿದರು.

ಪ್ರಕಾಶ್ ನೆಡುಂಗಡಿಯವರು ಕೋಲ್ಕತ್ತಾದಲ್ಲಿ ಐಐಎಂನಿಂದ ಎಂಬಿಎ ಪದವಿ ಪಡೆದಿದ್ದಾರೆ. ಆದಿತ್ಯ ಬಿರ್ಲಾ ಗ್ರೂಪ್ ಮತ್ತು ಹಿಂದೂಸ್ತಾನ್ ಯೂನಿಲಿವರ್‌ನಂತಹ ಕಂಪನಿಗಳಲ್ಲಿ ನೌಕರಿ ಮಾಡಿದ ಅನುಭವ ಹೊಂದಿದ್ದಾರೆ. ಜೊತೆಗೆ ಇವರು ಮಧುರಾ ಗಾರ್ಮೆಂಟ್ಸ್‌ನ ಮಾಜಿ ಅಧ್ಯಕ್ಷರು. ಕಳೆದ ಎರಡು ವರ್ಷಗಳಿಂದ ಕ್ಷೇತ್ರದಲ್ಲಿ ಕೋವಿಡ್ ಸಂತ್ರಸ್ತರಿಗೆ ನಾನಾ ರೀತಿಯ ಸಹಾಯ ಮಾಡಿದ್ದಾರೆ. ಎರಡು ವಾರ್ಡ್ ಸಮಿತಿಗಳ ಸದಸ್ಯರಾಗಿದ್ದರು ಮತ್ತು ಕ್ಷೇತ್ರದ ಸಾವಿರಾರು ಜನರ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡಿದ್ದಾರೆ ಎಂದರು.

ಇದನ್ನೂ ಓದಿ : 15 ದಿನಗಳ ನಂತರ ನಿಮ್ಮ ಸರ್ಕಾರ ಇರಲ್ಲ, ನಿಮಗೆ ಕೊಡಬೇಕಾದ ಶಿಕ್ಷೆಯನ್ನು ಕಾಂಗ್ರೆಸ್ ಪಕ್ಷ ಕೊಡುತ್ತದೆ: ಡಿಕೆ ಶಿವಕುಮಾರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.