ETV Bharat / state

ಸಿನಿಮೀಯ ಶೈಲಿಯಲ್ಲಿ ತಲ್ವಾರ್ ಹಿಡಿದು ಹಫ್ತಾ ವಸೂಲಿ : ವಿಡಿಯೋ ನೋಡಿ - ತಲ್ವಾರ್​ ಹಿಡಿದು ಹಲ್ಲೆಗೆ ಯತ್ನಿಸಿದ ವ್ಯಕ್ತಿ

ವಿಡಿಯೋದಲ್ಲಿರುವ ಗೂಂಡಾ, ಹಣ ಕೊಡದಿದ್ದರೆ ಕೊಲ್ಲುವುದಾಗಿ ಹತಾರಿ ಹಿಡಿದು ಬೀಸಲು ಯತ್ನಿಸಿದ್ದಾನೆ. ಕೆ.ಜಿ.ಹಳ್ಳಿ 7ನೇ ಕ್ರಾಸ್‌ನಲ್ಲಿ‌ ಈ ಘಟನೆ ನಡೆದಿದೆ ಎನ್ನಲಾದ ವಿಡಿಯೋ ವೈರಲ್​ ಆಗಿದೆ..

ಸಿನಿಮೀಯ ಶೈಲಿಯಲ್ಲಿ ತಲ್ವಾರ್ ಹಿಡಿದು ಹಫ್ತಾ ವಸೂಲಿ ಮಾಡಿದ ಗೂಂಡಾ

author img

By

Published : Feb 21, 2022, 2:52 PM IST

ಬೆಂಗಳೂರು : ಸಿನಿಮೀಯ ಶೈಲಿಯಲ್ಲಿ ನುಗ್ಗಿ ಮಾರಕಾಸ್ತ್ರ ತೋರಿಸಿ ಹಾಡಹಗಲೇ ಸುಲಿಗೆಗೆ ಯತ್ನಿಸಿರುವ ಘಟನೆ ಕಾಡುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದ್ದು, ಸದ್ಯ ಈ ವಿಡಿಯೊ ವೈರಲ್ ಆಗಿದೆ‌.

ಸಿನಿಮೀಯ ಶೈಲಿಯಲ್ಲಿ ತಲ್ವಾರ್ ಹಿಡಿದು ಹಫ್ತಾ ವಸೂಲಿ

ಕೆ.ಜಿ.ಹಳ್ಳಿಯ ಮಾರ್ಕೆಟ್​​ನ ಅಂಗಡಿಯೊಂದಕ್ಕೆ‌ ನುಗ್ಗಿ ಇದೇ ತಿಂಗಳು 18ರಂದು ಸುಲಿಗೆಕೋರ ತಲ್ವಾರ್ ಹಿಡಿದು ಬೆದರಿಸಿ‌ ಸುಲಿಗೆಗೆ ಯತ್ನಿಸಿದ್ದಾನೆ. ಈ ಸಂಬಂಧ ನಗರ ಪೊಲೀಸ್ ಆಯುಕ್ತರ ಟ್ವಿಟರ್ ಖಾತೆಗೆ ಈ ಪೋಸ್ಟ್ ಅನ್ನು ಸಾರ್ವಜನಿಕರೋರ್ವರು ಟ್ಯಾಗ್ ಮಾಡಿದ್ದಾರೆ.

ಟ್ಯಾಗ್ ಮಾಡಲಾದ ಫೋಸ್ಟ್​
ಟ್ಯಾಗ್ ಮಾಡಲಾದ ಫೋಸ್ಟ್​

ಇದನ್ನೂ ಓದಿ: ಲಾಲುಗೆ ಮತ್ತೆ ಭಾರಿ ಹಿನ್ನಡೆ: ಬಹುಕೋಟಿ ಮೇವು ಹಗರಣದ 5ನೇ ಪ್ರಕರಣದಲ್ಲಿ 5 ವರ್ಷ ಜೈಲು ಶಿಕ್ಷೆ

ವಿಡಿಯೋದಲ್ಲಿರುವ ಗೂಂಡಾ, ಹಣ ಕೊಡದಿದ್ದರೆ ಕೊಲ್ಲುವುದಾಗಿ ಹತಾರಿ ಹಿಡಿದು ಬೀಸಲು ಯತ್ನಿಸಿದ್ದಾನೆ. ಕೆ.ಜಿ.ಹಳ್ಳಿ 7ನೇ ಕ್ರಾಸ್‌ನಲ್ಲಿ‌ ಈ ಘಟನೆ ನಡೆದಿದೆ ಎನ್ನಲಾದ ವಿಡಿಯೋ ವೈರಲ್​ ಆಗಿದೆ.

ಅಂಗಡಿಯವನಿಗೆ ಬೆದರಿಸಿ ಮತ್ತೊಬ್ಬನನ್ನ ಅಟ್ಟಿಸಿಕೊಂಡು ಹೋಗುತ್ತಿರುವ ವಿಡಿಯೋ ಇದಾಗಿದ್ದು, ಈ ಬಗ್ಗೆ ತನಿಖೆ ನಡೆಸಲು ಟ್ವಿಟರ್‌ನಲ್ಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.