ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳಷ್ಟೇ ಬಾಕಿ. ಬೆಳಕಿನ ಹಬ್ಬಕ್ಕೂ ಮುನ್ನವೇ ಹತ್ತು ವರ್ಷದ ಬಾಲಕ ಪಟಾಕಿ ಸಿಡಿದು ಗಾಯಗೊಂಡಿದ್ದಾನೆ.
ಪಾದರಾಯನಪುರದಲ್ಲಿ ಘಟನೆ ಸಂಭವಿಸಿದೆ. ಬಾಲಕನೋರ್ವ ರಸ್ತೆಯಲ್ಲಿ ನಿಂತಿದ್ದ. ಈ ವೇಳೆ ಬೇರೆಯವರು ಸಿಡಿಸಿದ ಪಟಾಕಿ ತಗುಲಿದೆ. ಪರಿಣಾಮ, ಎರಡು ಕಣ್ಣುಗಳಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಾಳುವನ್ನು ಮಿಂಟೋ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಪುನೀತ್‌ರಂತೆ ನನ್ನ ಕಣ್ಣುಗಳನ್ನು ದಾನ ಮಾಡಿ ಎಂದು ಸಾವಿಗೆ ಶರಣಾದ ಅಭಿಮಾನಿ