ETV Bharat / state

ಅನೈತಿಕ ಸಂಬಂಧಕ್ಕಾಗಿ ಪ್ರೀತಿಸಿ ಕೈಹಿಡಿದ ಗಂಡನನ್ನೇ ಕೊಂದ ಪತ್ನಿ, ಪ್ರಿಯಕರ ಬಂಧನ - ಆನೇಕಲ್ ಹತ್ಯೆ ಸುದ್ದಿ

ಕೊಲೆಯಾದವ ಮಾದೇಶ್ ಎಂದು ಗುರುತಿಸಲಾಗಿದ್ದು, ಮೂಲತಃ ಆತ ತಮಿಳುನಾಡಿನ ನಿವಾಸಿ ಆಗಿದ್ದನು. ಎರಡು‌ ವರ್ಷಗಳ ಹಿಂದೆ ಮಾದೇಶ್ ಮತ್ತು ಪ್ರೇಮಾ ಎಂಬುವವರು ಪ್ರೀತಿಸಿ ಮದುವೆ ಆಗಿದ್ದರು. ಮಾದೇಶ್​ ಎಂಬುವವ ತಾಲೂಕಿನ ಜಿಗಣಿ ಬಳಿಯ ಹಾರಗದ್ದೆಯಲ್ಲಿ ಟೈಲರಿಂಗ್ ಅಂಗಡಿ ಇಟ್ಟುಕೊಂಡಿದ್ದ. ಇವರಿಗೆ ಇಬ್ಬರು ಮಕ್ಕಳು ಸಹ ಇದ್ದರು.

Anekal
ಆನೇಕಲ್
author img

By

Published : Oct 24, 2020, 4:58 AM IST

ಆನೇಕಲ್: ಪ್ರೀತಿಸಿ ಮದುವೆ ಆಗಿದ್ದ ಗಂಡನನ್ನು ಮತ್ತೊಬ್ಬನೊಂದಿಗಿನ ಅಕ್ರಮ ಸಂಬಂಧಕ್ಕಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾದವ ಮಾದೇಶ್ ಎಂದು ಗುರುತಿಸಲಾಗಿದ್ದು, ಮೂಲತಃ ಆತ ತಮಿಳುನಾಡಿನ ನಿವಾಸಿ ಆಗಿದ್ದನು. ಎರಡು‌ ವರ್ಷಗಳ ಹಿಂದೆ ಮಾದೇಶ್ ಮತ್ತು ಪ್ರೇಮಾ ಎಂಬುವವರು ಪ್ರೀತಿಸಿ ಮದುವೆ ಆಗಿದ್ದರು. ಮಾದೇಶ್​ ಎಂಬುವವ ತಾಲೂಕಿನ ಜಿಗಣಿ ಬಳಿಯ ಹಾರಗದ್ದೆಯಲ್ಲಿ ಟೈಲರಿಂಗ್ ಅಂಗಡಿ ಇಟ್ಟುಕೊಂಡಿದ್ದ. ಇವರಿಗೆ ಇಬ್ಬರು ಮಕ್ಕಳು ಸಹ ಇದ್ದರು.

ಬಂಧಿತ ಆರೋಪಿಗಳು

ಲಾಕ್​​ಡೌನ್ ವೇಳೆ ಕೆಲಸ‌ ಇಲ್ಲದ ಕಾರಣ ತನ್ನ ಹುಟ್ಟರು ತಮಿಳುನಾಡಿನ ಡೆಂಕಣಿಕೋಟೆಗೆ ತೆರಳಿದ್ದ. ಅಲ್ಲಿ ಪ್ರೇಮಾಳಿಗೆ ಕರಿಯಾ ಎಂಬುವವನ ಪರಿಚಯವಾಗಿದೆ. ಇಬ್ಬರ ನಡುವೆ ಸಂಬಂಧ ಬೆಳೆದಿದ್ದು, ಇದಕ್ಕೆ ಅಡ್ಡಿಯಾಗಿದ್ದ ಆಕೆಯ ಗಂಡನನ್ನೇ ಹತ್ಯೆ ಮಾಡಿಸಿದ್ದಾಳೆ ಎಂದು ಆರೋಪಿಸಲಾಗಿದೆ.

ಅ.17ರ ಶನಿವಾರ ರಾತ್ರಿ ತನ್ನ ಪ್ರಿಯತಮನ ಜೊತೆ ಸೇರಿ ತನ್ನ ಗಂಡನನ್ನೇ ಕೊಲೆ ಮಾಡಿಸಿದ್ದಾಗಿ ಪೊಲೀಸರ ವಿಚಾರಣೆಯಲ್ಲಿ ಪ್ರೇಮಾ ಬಾಯಿಬಿಟ್ಟಿದ್ದಾಳೆ. ಕರಿಯನ ಜೊತೆ ಬದುಕಬೇಕು ಎಂದು ನಿರ್ಧರಿಸಿ ಮಾದೇಶ್‌ನ ಕೊಲೆ ಮಾಡಿಸಿದ್ದಾಳೆ. ಸ್ನೇಹಿತ ಮಲ್ಲೇಶ್​ನ ಸಹಾಯದಿಂದ ಮಾದೇಶ್​ನ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಲಾಗಿದೆ ಎಂದು ಜಿಗಣಿ ಇನ್ಸ್​ಪೆಕ್ಟರ್ ಕೆ. ವಿಶ್ವನಾಥ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.