ಆನೇಕಲ್: ಇಲ್ಲಿನ ಖಾಸಗಿ ರೆಸಾರ್ಟ್ವೊಂದರ ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿಗಳು ನಡೆಸಿದ ರೇವ್ ಪಾರ್ಟಿ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿ ಕೃಷ್ಣ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಆನೇಕಲ್ ಪೊಲೀಸ್ ಠಾಣೆ ಆವರಣದಲ್ಲಿ ತೆಗೆದುಕೊಂಡ ಕ್ರಮಗಳ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶನಿವಾರ ತಡರಾತ್ರಿ ನಮ್ಮ ಸಿಬ್ಬಂದಿ ಪಾರ್ಟಿ ನಡೆಯುತ್ತಿದ್ದ ಸ್ಥಳದ ಮೇಲೆ ದಾಳಿ ಮಾಡಿದ್ರು. ಅಲ್ಲಿ ಸುಮಾರು 30 ರಿಂದ 40 ಜನ ಭಾಗಿಯಾಗಿದ್ದರು. ಅವರಲ್ಲಿ ಆಂಧ್ರದವೊಬ್ಬರಾದರೆ, ಕೇರಳದವರೊಬ್ಬ ವಿದ್ಯಾರ್ಥಿ ಸಿಕ್ಕಿಬಿದ್ದಿದ್ದಾರೆ. ಈಗಾಗಲೇ 37 ಜನ, 14 ಬೈಕ್ ಹಾಗೂ 9 ಕಾರನ್ನು ವಶಕ್ಕೆ ಪಡೆದಿದ್ದೇವೆ ಎಂದರು.
ಪಾರ್ಟಿಯಲ್ಲಿ ಭಾಗಿಯಾಗಿದ್ದವರ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ. ರಕ್ತ ಹಾಗೂ ಮೂತ್ರದ ವರದಿ ಬಂದ ಬಳಿಕ ಮಾದಕ ವಸ್ತು ಬಳಕೆ ಕುರಿತು ಖಚಿತವಾಗಲಿದೆ. 37 ಜನರನ್ನು ಬಂಧಿಸಿ ಮಾಡಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದೇವೆ. ಅವರಲ್ಲಿ ಐದು ಮಂದಿ ಹುಡುಗಿಯರಿದ್ದರು ಎಂದು ತಿಳಿಸಿದರು.
ರೆಸಾರ್ಟ್ ಮಾಲೀಕನ ಮೇಲೂ ಪ್ರಕರಣ ದಾಖಲು ಮಾಡಿದ್ದೇವೆ. ಕೋವಿಡ್ ಇದ್ದರೂ ಪಾರ್ಟಿ ಆಯೋಜನೆ ಮಾಡಿದ್ದು ತಪ್ಪು. ಈ ಕುರಿತು ಪ್ರಕರಣ ದಾಖಲಿಸಲಾಗಿದೆ. ಅಬಕಾರಿ ಪ್ರಕರಣವೂ ದಾಖಲಾಗಿದೆ. ಪುಂಡ ಪೋಕರಿಗಳ ಮೇಲೆ ಕಣ್ಣಿಟ್ಟಿದ್ದೇವೆ. ಹಸಿರು ವ್ಯಾಲಿ ರೆಸಾರ್ಟ್ ಭೂಮಿ ಅಕ್ರಮ ಕುರಿತು ಕಂದಾಯ - ಅರಣ್ಯ ಇಲಾಖೆಯಿಂದ ಮಾಹಿತಿ ಕೇಳಿದ್ದೇವೆ ಎಂದು ಎಸ್ಪಿ ವಿವರಿಸಿದರು.
ರೆಸಾರ್ಟ್ ಅಕ್ರಮ ಇದೆಯೋ ಅಥವಾ ಸಕ್ರಮ ಇದೆಯೇ ಎನ್ನುವ ಮಾಹಿತಿ ಬೇಕಿದೆ. ಈ ಕುರಿತು ಈಗಾಗಲೇ ಆನೇಕಲ್ ತಹಶೀಲ್ದಾರರಿಗೆ ಪತ್ರ ಬರೆಯಲಾಗಿದೆ.
ಆ್ಯಪ್ವೊಂದರ ಮೂಲಕ ಪಾರ್ಟಿ ಆಯೋಜನೆ ಮಾಡಿದ್ರು. ಮಾದಕವಸ್ತು ಬಳಸುವವರ ಮೇಲೆ ನಿಗಾ ಇಟ್ಟಿದ್ದೇವೆ. 20 ದಿನದಿಂದ ಡ್ರಗ್ಸ್ ಮೇಲೆ ದಾಳಿ ಮಾಡಲಾಗುತ್ತಿದೆ. ಗಾಂಜಾ ಕೇಸ್ನಲ್ಲಿ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡುತ್ತೇವೆ ಎಂದು ಎಸ್ಪಿ ವಂಶಿಕೃಷ್ಣ ಮಾಹಿತಿ ನೀಡಿದರು.
ಓದಿ: ನಾನು ಐದಾರು ಜನರ ತಲೆ ತೆಗಿಬೇಕಿದೆ ಪರ್ಮೀಷನ್ ಕೊಡ್ಸಿ - ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಕ್ರೋಶ