ETV Bharat / state

ಮಾಣಿಕ್​ ಷಾ ಪರೇಡ್​​ ಮೈದಾನದಲ್ಲಿ ಸೆಲ್ಫಿಗೆ ಕಡಿವಾಣ: ಸ್ವಾತಂತ್ರ್ಯ ದಿನದಂದು ಬೆಂಗಳೂರಲ್ಲಿ ಖಾಕಿ ಕಣ್ಗಾವಲು - ಸೆಲ್ಫಿಗೆ ಕಡಿವಾಣ

73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಿಲಿಕಾನ್ ಸಿಟಿಯಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸುತ್ತಿದ್ದು, ಈ ಬಾರಿ ಯಾವುದೇ ಅಹಿತಕರ ಘಟನೆಗಳು ನಡೆಯದ ರೀತಿ‌ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ.

ಖಾಕಿ ಕಣ್ಗಾವಲು
author img

By

Published : Aug 13, 2019, 5:34 PM IST

ಬೆಂಗಳೂರು: 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಿಲಿಕಾನ್ ಸಿಟಿಯಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸುತ್ತಿದ್ದು, ಈ ಬಾರಿ ಯಾವುದೇ ಅಹಿತಕರ ಘಟನೆಗಳು ನಡೆಯದ ರೀತಿ‌ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ.

ಪೊಲೀಸ್ ಕಮೀಷನರ್​​ ಭಾಸ್ಕರ್ ರಾವ್ ಯಾವ ರೀತಿ ಭದ್ರತೆ ತೆಗೆದುಕೊಳ್ಳಲಾಗಿದೆ ಅನ್ನುವುದರ ಮಾಹಿತಿ ನೀಡಿ, ಸ್ವಾತಂತ್ರ್ಯ ದಿನಚಾರಣೆಗೆ ಬೇಕಾಗಿರುವ ಎಲ್ಲಾ ರೀತಿಯ ಭದ್ರತೆಯನ್ನು ಪೊಲೀಸ್ ಇಲಾಖೆ ಕೈಗೊಂಡಿದೆ. ಮಾಣಿಕ್ ಷಾ ಪರೇಡ್ ಮೈದಾನದ ಸುತ್ತ 10 ದಿನಗಳಿಂದ‌ ಭದ್ರತೆ ಹಾಗೂ ಸಿದ್ಧತೆಯನ್ನು ವ್ಯವಸ್ಥಿತವಾಗಿ ಮಾಡಲಾಗಿದೆ. ಸ್ವಾತಂತ್ರ್ಯ ದಿನ ಬೆಳಗ್ಗೆ 8.5೦ ರಿಂದ 9.00 ಗಂಟೆಗೆ ಮುಖ್ಯಮಂತ್ರಿಗಳು ಧ್ವಜಾರೋಹಣ ‌ಮಾಡಲಿದ್ದಾರೆ. ನಂತರ 34ಕ್ಕೂ ಹೆಚ್ಚು ತಂಡಗಳು ಪಥಸಂಚಲನದಲ್ಲಿ ಪಾಲ್ಗೊಳ್ಳಲಿವೆ.

ಇನ್ನು ಪೊಲೀಸ್ ಅಧಿಕಾರಿಗಳಿಗೆ ಭದ್ರತೆಯ ಜವಾಬ್ದಾರಿಯನ್ನು ನೀಡಿದ್ದು, ಅದರಲ್ಲಿ ಇಬ್ಬರು ಹೆಚ್ಚುವರಿ ಪೊಲೀಸ್ ಅಧಿಕಾರಿಗಳು, ಸಂಚಾರಿಗೆ ಹೆಚ್ಚುವರಿ ಆಯುಕ್ತ, ಆಡಳಿತ ಆಯೋಜನೆ, ಸಂಪನ್ಮೂಲ ಸಿಸಿಬಿ ಹೆಚ್ಚುವರಿ ಆಯುಕ್ತ, 11 ಡಿಸಿಪಿ, 23 ಸಹಾಯಕ, 78 ಇನ್ಸ್​​ಪೆಕ್ಟರ್​, 175 ಸಬ್ ಇನ್ಸ್​ಪೆಕ್ಟರ್, 1108 ಪೇದೆಗಳು , ಮಹಿಳಾ ಸಿಬ್ಬಂದಿ 77 ಮಂದಿ ಕಾರ್ಯನಿರ್ವಹಿಸಲಿದ್ದಾರೆ. ಹಾಗೆಯೇ ಮಫ್ತಿ ಪೊಲೀಸರು 150 ಮಂದಿ, ಹೋಂ ಗಾರ್ಡ್ಸ್​ಗಳು ಕೂಡಾ ಇದ್ದು, ಒಟ್ಟು 1906 ಜನ ಕಾರ್ಯನಿರ್ವಹಿಸಲಿದ್ದಾರೆ.

ಮಾಣಿಕ್ ಷಾ ಮೈದಾನದಲ್ಲಿ ಸೆಲ್ಫಿಗೆ ಕಡಿವಾಣ ಹಾಕುವಂತೆ ಕಮೀಷನರ್ ಭಾಸ್ಕರ್ ರಾವ್ ಮನವಿ ಮಾಡಿದ್ದಾರೆ. ಸೆಲ್ಫಿ ಕ್ರೇಜ್ ಜಾಸ್ತಿ ಆಗಿದೆ. ಇದರಿಂದ ಶಿಸ್ತು ಹಾಳಾಗುತ್ತದೆ. ಕಾರ್ಯಕ್ರಮ ನೋಡಲು ಬಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಹೀಗಾಗಿ ಗ್ರೌಂಡ್​ನಲ್ಲಿ ಸಾರ್ವಜನಿಕರು ಶಿಸ್ತು ಪಾಲಿಸುವಂತೆ ಮನವಿ ಮಾಡಿದ್ದಾರೆ.

Intro:ಸೆಲ್ಫಿಗೆ ಕಡಿವಾಣ ಹಾಕುವಂತೆ ಮನವಿ ಮಾಡಿದ ಕಮಿಷನರ್
ಸ್ವಾತಂತ್ರ್ಯ ದಿನದಂದು ಸಿಲಿಕಾನ್ ಸಿಟಿ ಫುಲ್ ಖಾಕಿ ಕಣ್ಗಾವಲು

73ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಸಿಲಿಕಾನ್ ಸಿಟಿಯಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸುತ್ತಿದ್ದು ಈ ಬಾರಿ ಯಾವುದೇ ಅಹಿತಕರ ಘಟನೆಗಳು ನಡೆಯದ ರೀತಿ‌ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ

ಇನ್ನು ಪೊಲೀಸ್ ಕಮಿಷಿನರ್ ಭಾಸ್ಕರ್ ರಾವ್ ಯಾವ ರೀತಿ ಭದ್ರತೆ ತೆಗೆದುಕೊಳ್ಳಲಾಗಿದೆ ಅನ್ನೋದ್ರ ಮಾಹಿತಿ ನೀಡಿ ಸ್ವಾತಂತ್ರ್ಯ ದಿನಚಾರಣೆಗೆ ಬೇಕಾಗಿರುವ ಎಲ್ಲಾ ರೀತಿಯ ಭದ್ರತೆಯನ್ನು ಪೊಲೀಸ್ ಇಲಾಖೆ ಕೈಗೊಂಡಿದೆ. ಇನ್ನು ಮಾಣಿಕ್ ಷಾ ಪೆರೇಡ್ ಮೈದಾನ ಸುತ್ತ 10 ದಿನಗಳಿಂದ‌ ಭದ್ರತೆ ಹಾಗೂ ಸಿದ್ದತೆಯನ್ನು ವ್ಯವಸ್ಥಿತವಾಗಿ ಮಾಡಲಾಗಿದೆ.

ಸ್ವಾತಂತ್ರ ದಿನ ಬೆಳಗ್ಗೆ 8.5೦ರಿಂದ 9.00 ಗಂಟೆಗೆ ಮುಖ್ಯಮಂತ್ರಿಗಳು ಧ್ವಜಾರೋಹಣ ‌ಮಾಡಿ ನಂತ್ರ
34ಕ್ಕೂ ಹೆಚ್ಚು ತಂಡಗಳು ಪಥ ಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಗೆ ಈಗಾಗ್ಲೇ ಬೆಂಗಳೂರಿನ ಎಲ್ಲಾ ಭಾಗಗಳಲ್ಲೂ ಭದ್ರತೆ ದೃಷ್ಟಿಯಿಂದ ಕ್ರಮ ಕೈಗೊಳಲಾಗಿದ್ದು ಅದರಲ್ಲು ಮೆಜೆಸ್ಟಿಕ್ ಬಸ್ಸು ನಿಲ್ದಾಣ, ರೈಲ್ವೆ ನಿಲ್ದಾಣ, ಸೂಕ್ಷ ಪ್ರದೆಶ, ಸಿಲಿಕಾನ್ ಸಿಟಿಯ ಲಾಡ್ಜ್, ಮೆಟ್ರೋ ಸ್ಟೆಷನ್ ಮೇಲೆ ನಿಗಾ ಇಟ್ಟು ಅನುಮಾನಸ್ಪದ ವ್ಯಕ್ತಿಗಳನ್ನ ವಶಕ್ಕೆ ಪಡೆಯಾಲಾಗುತ್ತೆ.

ಹಾಗೆ ‌ಮಾಣಿಕ್ ಷಾ ಮೈದಾನಕ್ಕೆ ಬರುವವರಿಗೆ ನಾಲ್ಕು ಬಣ್ಣದ ಪಾಸ್ ಗಳ ವ್ಯವಸ್ಥೆ ಮಾಡಲಾಗಿದ್ದು ಹಳದಿ, ಬಿಳಿ, ಪಿಂಕ್, ಹಸಿರು ಬಣ್ಣದ ಪಾಸ್ ಗಳನ್ನು ನೀಡಲಾಗುತ್ತದೆ. ಇನ್ನು ಪೊಲೀಸ್ ಅಧಿಕಾರಿಗಳಿಗೆ ಭದ್ರತೆಯ ಜವಾಬ್ದಾರಿಯನ್ನ ನೀಡಿದ್ದು ಅದ್ರಲ್ಲಿ
ಇಬ್ಬರು ಹೆಚ್ಚುವರಿ ಪೊಲೀಸ್ ಅಧಿಕಾರಿಗಳು , ಸಂಚಾರಿಗೆ ಹೆಚ್ಚುವರಿ ಆಯುಕ್ತ, ಆಡಳಿತ ಆಯೋಜನೆ, ಸಂಪನ್ಮೂಲ ಸಿಸಿಬಿ ಹೆಚ್ವುವರಿ ಆಯುಕ್ತ ೧೧ ಡಿಸಿಪಿ, ೨೩ ಸಹಾಯಕ,78ಇನ್ಸ್ಪೆಕ್ಟರ್, ೧೭೫ ಸಬ್ ಇನ್ಸ್ ಸ್ಪೆಕ್ಟರ್, ೧೧೦೮ ಕಾನ್ಸ್ಟೇಬಲ್ ,ಮಹಿಳಾ ಸಿಬ್ಬಂದಿ 77 ಮಂದಿ ಕಾರ್ಯ ನಿರ್ವಹಿಸಲಿದ್ದಾರೆ. ಹಾಗೆ ಮಪ್ತಿ ಪೊಲೀಸರು 150ಮಂದಿ, ಹೋಂ ಗಾರ್ಡ್ ಗಳು ಇದ್ದು ಒಟ್ಟು೧೯೦೬ ಜನ ಕಾರ್ಯನಿರ್ವಹಿಸಲಿದ್ದಾರೆ.

ಇ‌ನ್ನು ಮಾಣಿಕ್ ಷಾ ಮೈದಾನದಲ್ಲಿ ಸೆಲ್ಫಿಗೆ ಕಡಿವಾಣ ಹಾಕುವಂತೆ ಕಮಿಷನರ್ ಭಾಸ್ಕರ್ ರಾವ್ ಮನವಿ ಮಾಡಿದ್ದಾರೆ
ಸೆಲ್ಫಿ ಕ್ರೇಜ್ ಜಾಸ್ತಿ ಆಗಿದೆ ಇದರಿಂದ ವಾತವರಣದಲ್ಲಿ ಶಿಸ್ತು ಹಾಳಾಗುತ್ತದೆ. ಕಾರ್ಯಕ್ರಮ ನೋಡಲು ಬಂದ ಸಾರ್ವಜನಿಕರಿಗೆ ತೊಂದರೆ ಯಾಗುತ್ತದೆ ಹೀಗಾಗಿಗ್ರೌಂಡ್ ನಲ್ಲಿ ಸಾರ್ವಜನಿಕರು ಶಿಸ್ತು ಪಾಲಿಸುವಂತೆ ಮನವಿ ಮಾಡಿದ್ದಾರೆ
Body:KN_BNG_04_SEQURITY_7204498Conclusion:KN_BNG_04_SEQURITY_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.