ದೊಡ್ಡಬಳ್ಳಾಪುರ : ಮೋರಿಯಲ್ಲಿ ಅಪರಿಚಿತ ಪುರುಷನ ಶವ ಪತ್ತೆಯಾಗಿದ್ದು, ಈತ ಅತಿಯಾಗಿ ಮದ್ಯ ಸೇವಿಸಿದ್ದ ಎನ್ನಲಾಗಿದೆ.
ನಗರದ ಡಿಕ್ರಾಸ್ ಬಳಿಯ ಪ್ರಿಯಾಂಕಾ ಹೋಟೆಲ್ ಪಕ್ಕದ ಮೋರಿಯ ಬಳಿ ಈ ಘಟನೆ ನಡೆದಿದ್ದು, ಸುಮಾರು 30 ವರ್ಷದವನಾಗಿದ್ದಾನೆ. ಈತನ ಗುರುತು ಪತ್ತೆಯಾಗಿಲ್ಲ.
ಅತಿಯಾದ ಮದ್ಯ ಸೇವನೆಯಿಂದ ಕುಡಿದು ಇಲ್ಲಿ ಬಿದ್ದು ಮೃತಪಟ್ಟಿರುವ ಸಂಶಯವಿದೆ. ಜೊತೆಗೆ ದುಷ್ಕರ್ಮಿಗಳು ಬೇರೆಡೆ ಕೊಲೆ ಮಾಡಿ ಶವವನ್ನು ಮೋರಿಯಲ್ಲಿ ಬಿಸಾಕಿರುವ ಸಂಶಯವೂ ಒಂದೆಡೆ ವ್ಯಕ್ತವಾಗಿದೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.