ETV Bharat / state

ಲಾಕ್​ಡೌನ್ ನಿಯಮ ಮುರಿದು ಸರ್ಕಾರಿ ಕಚೇರಿಯಲ್ಲಿ ಅದ್ಧೂರಿ ಹೋಮ ಹವನ ಆರೋಪ - ಹೊಸಕೋಟೆ

ಬೆಂಗಳೂರು ಗ್ರಾಮಾಂತ ಜಿಲ್ಲೆಯ ಆನೇಕಲ್‌ ತಾಲೂಕಿನ ಅತ್ತಿಬೆಲೆ ಆರ್‌ಟಿಒ ಕಚೇರಿಯಲ್ಲಿ ಕೊರೊನಾ ಪ್ರೇರಿತ ಲಾಕ್​ಡೌನ್​ನ ನಿರ್ಬಂಧಗಳನ್ನು ಗಾಳಿಗೆ ತೂರಿ ಹೋಮ ಹವನ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

homa in Govt office
ಕೊರೊನಾ ನಿರ್ಬಂಧ ಗಾಳಿಗೆ ತೂರಿ ಸರ್ಕಾರಿ ಕಚೇರಿಯಲ್ಲಿ ಅದ್ಧೂರಿ ಹೋಮ ಹವನ
author img

By

Published : May 17, 2020, 11:29 PM IST

Updated : May 17, 2020, 11:39 PM IST

ಆನೇಕಲ್‌: ಲಾಕ್​ಡೌನ್ ನಿಯಮಗಳನ್ನು ಮುರಿದು ಬೆಂಗಳೂರು ಹೊರವಲಯದ ಅತ್ತಿಬೆಲೆ ಬಳಿಯ ಆರ್‌ಟಿಒ ಕಚೇರಿಯಲ್ಲಿ ಇನ್​ಸ್ಪೆಕ್ಟರ್‌ ಶ್ರೀನಿವಾಸಪ್ಪ ಅವರ ನೇತೃತ್ವದಲ್ಲಿ ಅದ್ಧೂರಿಯಾಗಿ ಹೋಮ ಹವನ ನೆರವೇರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಕಾನೂನಿ ಅನ್ವಯ, ಸರ್ಕಾರಿ ಕಚೇರಿಗಳಲ್ಲಿ ಹೋಮ ಹವನ ಮಾಡುವಂತಿಲ್ಲ. ಪ್ರಸ್ತುತ, ಲಾಕ್​ಡೌನ್​ ಜಾರಿಯಲ್ಲಿ ಇರುವುದರಿಂದ ಮದುವೆ ಸೇರಿದಂತೆ ಜನ ಸೇರುವ ಯಾವುದೇ ಧಾರ್ಮಿಕ ಕಾರ್ಯಕ್ರಮ ಕೈಗೊಳ್ಳಬೇಕಾದರೂ ಸ್ಥಳೀಯ ಪ್ರಾಧಿಕಾರದ ಅನುಮತಿ ಪಡೆಯಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳವುದರ ಜೊತೆಗೆ ಮಾಸ್ಕ್‌ ಧರಿಸುವುದು ಕಡ್ಡಾಯವಾಗಿದೆ.

ಆದರೆ, ಸರ್ಕಾರದ ಲಾಕ್​ಡೌನ್​​ ನಿರ್ಬಂಧಗಳನ್ನು ಗಾಳಿಗೆ ತೂರಿ ಆರ್​ಟಿಒ ಕಚೇರಿಯಲ್ಲಿ ಹೋಮ ಹವನ ನಡೆಸಲಾಗಿದೆ ಎಂಬ ಆರೋಪವಿದೆ. ಜನ ಸಾಮಾನ್ಯರು ನಿಯಮ ಉಲ್ಲಂಘಿಸಿದರೇ ಪ್ರಕರಣ ದಾಖಲಿಸಿಕೊಂಡು ಶಿಕ್ಷೆ ನೀಡಲಾಗುತ್ತದೆ. ಅಧಿಕಾರಿಗಳೇ ಕಾನೂನು ಉಲ್ಲಂಘಿಸಿದರೆ ಯಾವ ಶಿಕ್ಷೆ ನೀಡಬೇಕು ಎಂಬುದು ಸಾರ್ವಜನಿಕರ ಪ್ರಶ್ನೆ.

Last Updated : May 17, 2020, 11:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.