ದೊಡ್ಡಬಳ್ಳಾಪುರ (ಬೆಂ.ಗ್ರಾ): ಶಾಸಕರ ರೆಸಾರ್ಟ್ ರಾಜಕೀಯ ಆಯ್ತು, ಈಗ ಗ್ರಾಮ ಪಂಚಾಯತ್ ಸದಸ್ಯರೂ ಸಹ ಅಧಿಕಾರಕ್ಕಾಗಿ ರೆಸಾರ್ಟ್ ರಾಜಕೀಯ ನಡೆಸಲು ಆರಂಭಿಸಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕಾಗಿ ಹೈ ಲಾಬಿ ಆರಂಭವಾಗಿದೆ.
ಇದೀಗ ಕೊನಘಟ್ಟ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷಗಿರಿಗಾಗಿ ಗ್ರಾಮ ಪಂಚಾಯತ್ ಸದಸ್ಯರು ರೆಸಾರ್ಟ್ಗೆ ತೆರಳಿರುವುದು ಒಂದೆಡೆಯಾದರೆ, ರೆಸಾರ್ಟ್ನಲ್ಲಿ ಮಸ್ತ್ ಆಗಿ ನಾಗಿಣಿ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.
ಗ್ರಾಮಗಳ ಅಭಿವೃದ್ಧಿಯ ದೃಷ್ಟಿಯಿಂದ ಆಯ್ಕೆಗೊಂಡ ಸದಸ್ಯರು ರೆಸಾರ್ಟ್ನಲ್ಲಿ ಹೈಕ್ಲಾಸ್ ಮಸ್ತಿಯಲ್ಲಿ ತೊಡಗಿದ್ದು, ಸಾರ್ವಜನಿಕರ ಕಣ್ಣು ಕೆಂಪಾಗಿಸಿದೆ. ದೊಡ್ಡಬಳ್ಳಾಪುರ ಶಾಸಕ ಟಿ. ವೆಂಕಟರಮಣಯ್ಯ ಆಪ್ತ ಮತ್ತು ಕೆಪಿಸಿಸಿ ಸದಸ್ಯ ಲಕ್ಷ್ಮಿಪತಿ ಗ್ರಾಮ ಪಂಚಾಯತ್ ಸದಸ್ಯರನ್ನು ತಮಿಳುನಾಡು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ. ರೆಸಾರ್ಟ್ನಲ್ಲಿ ತಂಗಿದ್ದ ವೇಳೆ ಕೊನಘಟ್ಟ ಗ್ರಾಮದ ಹಾಲಿ ಸದಸ್ಯ ಸೋಮಶೇಖರ್ ಹಾಗೂ ಲಿಂಗನಹಳ್ಳಿ ಸದಸ್ಯ ಸಿದ್ದಲಿಂಗಯ್ಯ ನಾಗಿಣಿ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ, ರೆಸಾರ್ಟ್ನಲ್ಲಿ ಮೋಜು ಮಸ್ತಿ ಮಾಡುತ್ತಿರುವ ಸದಸ್ಯರ ನಡೆಗೆ ಗ್ರಾಮದಲ್ಲಿ ವಿರೋಧ ವ್ಯಕ್ತವಾಗಿದೆ.
ಇದನ್ನೂ ಓದಿ: ಬೆಂಗಳೂರು-ಹೈದರಾಬಾದ್ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಪ್ರಸ್ತಾವನೆ: ಸಚಿವ ಶೆಟ್ಟರ್