ETV Bharat / state

ಗಾರ್ಮೆಂಟ್ಸ್​​ ಕೆಲಸ ಬಿಟ್ಟು ಕೃಷಿಯಲ್ಲಿ ಸೈ ಎನಿಸಿಕೊಂಡ ರೈತ : ಸೌತೆಕಾಯಿಯಿಂದ 15 ಲಕ್ಷ ಆದಾಯ

ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು, ಎರಡು ವರ್ಷಗಳ ಹಿಂದೆ ಕೆಲಸ ತ್ಯಜಿಸಿ ಸೌತೆಕಾಯಿ ಕೃಷಿಯಲ್ಲಿ ತೊಡಗಿ ಯಶಸ್ಸು ಕಂಡಿದ್ದಾರೆ.

author img

By

Published : Sep 27, 2022, 3:44 PM IST

a man-become-successful-in-agriculture
ಗಾರ್ಮೆಂಟ್ಸ್​​ ಕೆಲಸ ಬಿಟ್ಟು ಕೃಷಿಯಲ್ಲಿ ಸೈ ಎನಿಸಿಕೊಂಡ ರೈತ : ಸೌತೆಕಾಯಿಯಿಂದ 15 ಲಕ್ಷ ಆದಾಯ ನಿರೀಕ್ಷೆ

ದೊಡ್ಡಬಳ್ಳಾಪುರ : ಗಾರ್ಮೆಂಟ್ಸ್ ಕೆಲಸ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಅಲ್ಲಿನ ವೇತನ ತಾರತಮ್ಯದಿಂದ ಬೇಸತ್ತು ಕೃಷಿ ಪ್ರಾರಂಭಿಸಿದ್ದು, ಸದ್ಯ ಸೌತೆಕಾಯಿ ಕೃಷಿಯಲ್ಲಿ ತೊಡಗಿಸಿಕೊಂಡು ಯಶಸ್ಸು ಕಂಡಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಗುಂಡಮಗೆರೆ ಗ್ರಾಮದ ಸಾಮಾನ್ಯ ರೈತ ನವೀನ್ ಕುಮಾರ್, ಒಂದು ಎಕರೆಯಲ್ಲಿ ಬೆಳೆದಿರುವ ಸೌತೆಕಾಯಿ ಬೆಳೆ ಅವರ ಜೀವನ ಶೈಲಿಯನ್ನು ಬದಲಾಯಿಸಿದೆ. ಪ್ರತಿ ಕೊಯ್ಲಿನಲ್ಲಿ ಸರಾಸರಿ 2 ಟನ್ ಸೌತೆಕಾಯಿ ಇಳುವರಿ ತೆಗೆಯುತ್ತಿದ್ದಾರೆ. ಪ್ರತಿಕೂಲ ವಾತಾವರಣದಲ್ಲೂ ಉತ್ತಮ ಇಳುವರಿ ಬಂದಿರುವುದು, ಜೊತೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆತಿರುವುದರಿಂದ ಇಂದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಕೃಷಿಯಲ್ಲಿ ಬಂದ ಲಾಭದಲ್ಲಿ ಡ್ಯೂಪ್ಲೆಕ್ಸ್ ಮನೆ ಕಟ್ಟಿದ್ದಲ್ಲದೆ, ಕಾರು ಮತ್ತು ತರಕಾರಿ ಸಾಗಾಟಕ್ಕೆ ವಾಹನವನ್ನು ಖರೀದಿ ಮಾಡಿದ್ದಾರೆ.

ಗಾರ್ಮೆಂಟ್ಸ್​ ಕೆಲಸ ಬಿಟ್ಟು ಸೌತೆ ಕೃಷಿ : ನವೀನ್ ಕುಮಾರ್ ಮೊದಲಿಗೆ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದರು. ಆದರೆ ಅಲ್ಲಿನ ವೇತನ ತಾರತಮ್ಯಕ್ಕೆ ಬೇಸತ್ತು ಅಪ್ಪ ಮಾಡುತ್ತಿದ್ದ ಬೇಸಾಯ ಪ್ರಾರಂಭಿಸಿದರು. ತರಕಾರಿ ಬೆಳೆಗಳಾದ ಟೊಮೆಟೊ, ಬದನೆಕಾಯಿ, ಎಲೆಕೋಸು, ಸೌತೆಕಾಯಿ ಬೆಳೆಯುತ್ತಿದ್ದರು.

ಸ್ನೇಹಿತರ ಸಲಹೆಯಂತೆ ಒಂದು ಎಕರೆಯಲ್ಲಿ ಸೌತೆ ಕೃಷಿ : ಎರಡು ವರ್ಷದ ಹಿಂದೆ ಸ್ನೇಹಿತರ ಸಲಹೆಯಂತೆ ಟಾಟಾ ಕಂಪನಿಯ 007 ತಳಿಯ ಸೌತೆಕಾಯಿ ಬೆಳೆಯಲು ಪ್ರಾರಂಭಿಸಿದರು. 007 ತಳಿಯ ವಿಶೇಷತೆಯೆಂದರೆ ನಾಟಿ ಮಾಡಿದ 45 ನೇ ದಿನಕ್ಕೆ ಕೊಯ್ಲು ಪ್ರಾರಂಭವಾಗುತ್ತದೆ. ಪ್ರತಿ ಎಲೆಗೂ ಒಂದು ಕಾಯಿ ಮತ್ತು ಮೊಗರು ಬಿಡುವುದರಿಂದ ಸರಾಸರಿ ಒಂದು ಕೊಯ್ಲುಗೆ ಎರಡು ಟನ್ ಇಳುವರಿ ಬರುತ್ತದೆ. ಸುಮಾರು 20ಕ್ಕೂ ಹೆಚ್ಚು ಕೊಯ್ಲು ಮಾಡಬಹುದಾಗಿದೆ. ಮಳೆಗಾಲದಂಥ ಪ್ರತಿಕೂಲ ವಾತಾವರಣದಲ್ಲೂ ಭರ್ಜರಿ ಫಸಲು ಕೊಡುವುದು ಈ ತಳಿಯ ವಿಶೇಷತೆ ಎಂದು ಹೇಳುತ್ತಾರೆ.

ಉತ್ತಮ ಲಾಭ ತಂದ ಸೌತೆ ಕೃಷಿ : ಸದ್ಯ ಮಾರುಕಟ್ಟೆಯಲ್ಲಿ ಕೆಜಿ ಸೌತೆಕಾಯಿಗೆ 28 ರೂಪಾಯಿ ಬೆಲೆ ಇದೆ. 10 ರೂಪಾಯಿ ಸಿಕ್ಕರೆ ಸಾಕು ಸೌತೆಕಾಯಿ ಬೆಳೆ ಲಾಭದಾಯಕವಾಗಿದೆ. ಈಗಿರುವ ಬೆಲೆಯಿಂದ 15 ಲಕ್ಷ ಲಾಭಗಳಿಸುವ ನಿರೀಕ್ಷೆಯಲ್ಲಿ ರೈತ ನವೀನ್ ಕುಮಾರ್ ಇದ್ದಾರೆ.

ಇದನ್ನೂ ಓದಿ : ಯುವ ದಸರಾದಲ್ಲಿ ಅಪ್ಪು ನಮನ.. ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ರಾಜರತ್ನನ ಪತ್ನಿ ಅಶ್ವಿನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.