ETV Bharat / state

ಕೆಲ್ಸ ಮಾಡಿದ್ದು ನಾವು, ಆದ್ರೆ ವೋಟು ಮಾತ್ರ ಅವರಿಗಾ: ಸಿದ್ದರಾಮಯ್ಯ ಪ್ರಶ್ನೆ - bjp

ಹಣ ಬಿಡುಗಡೆ ಮಾಡಿ ಕ್ಷೇತ್ರದ ಅಭಿವೃದ್ಧಿ ಮಾಡೋರು ನಾವು. ಆದ್ರೆ, ಮೊನ್ನೆ ನಡೆದ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ನಮ್ಮನ್ನು ಆರಿಸಿ ತರದೇ ಬಿಜೆಪಿಯನ್ನು ಗೆಲ್ಲಿಸಿಕೊಂಡು ಬಂದಿದ್ದೀರಿ. ಈಗ ಮೋದಿ ಗೆದ್ದಾಯಿತು. ಅಭಿವೃದ್ಧಿ ಬಗ್ಗೆ ಅವರನ್ನ ಕೇಳ್ತಿರಾ? ಇಲ್ಲಾ ನಮ್ಮನ್ನು ಕೇಳ್ತಿರಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರದ ಜನರ ಮುಂದೆ ಪ್ರಶ್ನೆಗಳ ಸುರಿಮಳೆ ಸುರಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
author img

By

Published : Jun 27, 2019, 5:20 PM IST

ಬಾಗಲಕೋಟೆ: ಬಾದಾಮಿ ಮತಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿನಿಂದ ಎರಡು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದಾರೆ. ಹುಬ್ಬಳ್ಳಿ ಮೂಲಕ ತಾಲೂಕಿನ ಆಲೂರ ಎಸ್​ಕೆ ಗ್ರಾಮಕ್ಕೆ ಆಗಮಿಸಿದ ಮಾಜಿ ಸಿಎಂ, ಗ್ರಾಮ ಪಂಚಾಯತ್​ನ ಕಟ್ಟಡಕ್ಕೆ ಅಡಿಗಲ್ಲು ಹಾಕಿದರು.

ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಬಾದಾಮಿ ಮತಕ್ಷೇತದ ಅಭಿವೃದ್ಧಿಗೆ ನೂರಾರು ಕೋಟಿ ರೂ. ಹಣ ಬಿಡುಗಡೆ ಮಾಡಿಸಲಾಗಿದೆ. ಆದರೆ, ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ವೋಟು ಹಾಕಿ ಗೆಲ್ಲಿಸಿಕೊಂಡಿದ್ದೀರಿ. ಈಗ ಮೋದಿ ಗೆದ್ದಿದ್ದಾರೆ. ಅಭಿವೃದ್ಧಿ ಬಗ್ಗೆ ಅವರನ್ನ ಕೇಳ್ತಿರಾ? ಇಲ್ಲಾ ನಮ್ಮನ್ನು ಕೇಳ್ತಿರಾ? ಎಂದು ಪ್ರಶ್ನೆ ಮಾಡಿದರು.

  • ಬಾದಾಮಿ ವಿಧಾನಸಭೆ ಕ್ಷೇತ್ರದ ಚಿಮ್ಮನಕಟ್ಟಿ ಗ್ರಾಮದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದೆ. #ಬಾದಾಮಿ #Badami pic.twitter.com/Vx2QiXOGOS

    — Siddaramaiah (@siddaramaiah) June 27, 2019 " class="align-text-top noRightClick twitterSection" data=" ">

ಈ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ 9 ಸಾವಿರ ಲೀಡ್ ಬಂದಿದೆ. ಏನು ಕೆಲಸ ಮಾಡಿದ್ದಾರೆ ಅಂತ ಅವರಿಗೆ ವೋಟ್​​ ಹಾಕಿದ್ದೀರಿ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಅಕ್ಕಿ, ಬಟ್ಟೆ, ಹಾಲು ಸೇರಿದಂತೆ ಮಹಿಳೆಯರಿಗೆ ಉಚಿತ ಶಿಕ್ಷಣ ಕೊಟ್ಟೆವು. ಈ ಕೆಲಸ ಮಾಡಿದ್ದು ನಾವು. ಆದರೆ, ಕೆಲಸವನ್ನೇ ಮಾಡದವರಿಗೆ ವೋಟು ನೀಡಿದ್ದೀರಿ. ಅಷ್ಟು ಲೀಡು ಕೊಟ್ಟಿದ್ದೀರಿ ಅಂದ್ರೆ ಉಜ್ವಲ ಕಾರ್ಯಕ್ರಮ ಬರಬೇಕಿತ್ತು, ಬಂದಿಲ್ಲ. ಆದ್ರೂ ಅಂತವರಿಗೆ ವೋಟು ಹಾಕಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಾದಾಮಿ ತಾಲೂಕಿನ ಆಲೂರ ಎಸ್​ಕೆ ಗ್ರಾಮಕ್ಕೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಪಂಚಾಯತಿಗೆ 150ರಿಂದ 200ರವೆಗೆ ಬಸವ ಆಶ್ರಯ ಮನೆಗಳು ತಂದಿದ್ದೇನೆ. ವಿಧಾನಸಭೆ ಚುನಾವಣೆಯಲ್ಲಿ ನನಗೆ ವೋಟು ಹಾಕಿ ಆಶೀರ್ವಾದ ಮಾಡಿದ್ದೀರಿ. ಆದರೆ, ಕಾಂಗ್ರೆಸ್​ ಅಭ್ಯರ್ಥಿ ವೀಣಾ ಕಾಶಪ್ಪನವರ್​ ಅವರಿಗೆ ಏಕೆ ಮತ ನೀಡಿಲಿಲ್ಲ ಎಂದು ಕೇಳಿದರು.

  • ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ನಿಧನರಾದ ಬಾದಾಮಿಯ ಕಾಕನೂರು ಗ್ರಾಮದ ಯೋಧ ವಿರೂಪಾಕ್ಷ ಅವರ ಮನೆಗೆ ಭೇಟಿ ನೀಡಿ, ಮೃತ ಯೋಧನ ಕುಟುಂಬದವರಿಗೆ ಸಾಂತ್ವನ ಹೇಳಿದೆ. ಇದೇ ಸಂದರ್ಭದಲ್ಲಿ ವೈಯಕ್ತಿಕವಾಗಿ ಒಂದು ಲಕ್ಷ ರೂ.ಗಳ ಪರಿಹಾರ ನೀಡಿ ಅವರ ಕಷ್ಟಕ್ಕೆ ನೆರವಾಗುವ ಚಿಕ್ಕ ಪ್ರಯತ್ನ ಮಾಡಿದ್ದೇನೆ. pic.twitter.com/YkJBMJzS8W

ಈ ಸಂದರ್ಭದಲ್ಲಿ ಚಂದ್ರವ್ವಾ ಎಂಬ ಮಹಿಳೆ ಆಶ್ರಯ ಮನೆ ಇಲ್ಲ. ಕೇಳಿದರೆ ಅಧಿಕಾರಿಗಳು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು. ಆಗ ಸಿದ್ದರಾಮಯ್ಯ, ತಾಪಂ ಸಿಇಒ ಅವರನ್ನು ಕರೆದು, ಮಹಿಳೆಯ ಸಮಸ್ಯೆ ಆಲಿಸಿ ಪರಿಹಾರ ಒದಗಿಸಿಕೊಡಿ ಎಂದು ಹೇಳಿದರು. ಬಳಿಕ ಕಾಕನೂರ ಗ್ರಾಮಕ್ಕೆ ತೆರಳಿದ ಮಾಜಿ ಸಿಎಂ, ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ಯೋಧನ ಮನೆಗೆ ತೆರಳಿ ಕುಟುಂದವರಿಗೆ ಸಾಂತ್ವನ ಹೇಳಿದರು. ತದನಂತರ ಚಿಮ್ಮನಕಟ್ಟಿ ಗ್ರಾಮಕ್ಕೆ ತೆರಳಿ ಸಿಸಿ ರಸ್ತೆಗೆ ಚಾಲನೆ ನೀಡಿದರು.

Intro:AnchorBody:ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿನಿಂದ ಎರಡು ದಿನಗಳ ಕಾಲ ಪ್ರವಾಸ ನಡೆಸಿದ್ದಾರೆ. ಹುಬ್ಬಳ್ಳಿ ಮೂಲಕ ಬಾದಾಮಿ ತಾಲೂಕಿನ ಆಲೂರ ಎಸ್ ಕೆ ಗ್ರಾಮಕ್ಕೆ ಆಗಮಿಸಿದ ಸಿದ್ದರಾಮಯ್ಯ ,40 ಲಕ್ಷ ಮಂಜೂರ ಆಗಿರುವ ಗ್ರಾಮ ಪಂಚಾಯತ್ ಕಟ್ಟಡದ ಕ್ಕೆ ಅಡಿಗಲ್ಲು ಹಾಕಿದರು. ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ,ಬಾದಾಮಿ ಮತಕ್ಷೇತದ ಅಭಿವೃದ್ಧಿ ಗೆ ನೂರಾರು ಕೋಟಿ ಹಣ ಬಿಡುಗಡೆ ಮಾಡಿಸಲಾಗಿದೆ.ಆದರೆ ಮನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ಓಟು ಹಾಕಿದ್ದೀರಾ..ಈಗ ಮೋದಿ ಗೆದ್ದಿದ್ದಾರೆ, ಅವರನ್ನ ಕೇಳಿತ್ತೀರಾ,ಇಲ್ಲಾ ನಮ್ಮನ್ನು ಕೇಳಿತ್ತೀರಾ..ಈ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ 9 ಸಾವಿರ ಲೀಡ್ ಬಂದಿದೆ.ಎನು ಕೆಲಸ ಮಾಡಿದ್ದೀರಿ ಅಂತ ಓಟ ಹಾಕಿದ್ದೀರಿ ಎಂದು ಪ್ರಶ್ನೆಸಿದ ಸಿದ್ದರಾಮಯ್ಯ, ಕೆಲಸಾ ಮಾಡೋದು ನಾವು,ಅಕ್ಕಿ,ಬಟ್ಟೆ,ಹಾಲು, ಮಹಿಳೆಯರಿಗೆ ಉಚಿತ ಶಿಕ್ಷಣ ಕೊಟ್ಟಿವು,ಆದರೆ ಕೆಲಸನೆ ಮಾಡಿಲ್ಲ ಓಟ ಹಾಕಿದಿರಿ.ಇಲ್ಲಿನ ಸಂಸದರಿಗೆ 1ಲಕ್ಷ 68 ಸಾವಿರ ಲೀಡ್ ಬಂದಿದೆ. ಉಜ್ವಲ ಕಾರ್ಯಕ್ರಮ ಬರಬೇಕಿತ್ತು ಬಂದಿಲ್ಲ.ಅಂತಹವರಿಗೆ ಓಟ ಹಾಕಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು,ವಿಧಾನ ಸಭಾ ಕ್ಷೇತ್ರದಲ್ಲಿ ಪ್ರತಿ ಪಂಚಾಯತ್ ಗೆ 150 ರಿಂದ 200 ರವೆಗೆ ಬಸವ ಆಶ್ರಯ ಮನೆಗಳು ತಂದಿದ್ದೇನೆ.ವಿಧಾನಸಭೆ ಚುನಾವಣೆಯಲ್ಲಿ ನನಗೆ ಓಟ ಹಾಕಿ ಆಶೀರ್ವಾದ ಮಾಡಿದರಿ,ಆದರೆ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ಅವರಿಗೆ ಏಕೆ ಮತ ನೀಡಿಲಿಲ್ಲ ಎಂದು ಕೇಳಿದರು.ಈ ಸಂದರ್ಭದಲ್ಲಿ ಚಂದ್ರವ್ವಾ ಶಿವನಗೌಡ ಒಗೆನ್ನವರ ಎಂಬ ಮಹಿಳೆ ಆಶ್ರಯ ಮನೆ ಇಲ್ಲ, ಕೇಳಿದರೆ,ಅಧಿಕಾರಿಗಳು ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ ಎಂದು ತಿಳಿಸಿದರು. ಆಗ ಸಿದ್ದರಾಮಯ್ಯ ನವರು ತಾ.ಪಂ ಎಇಓ ಅವರಿಗೆ ಕರೆದು,ಮಹಿಳೆಯ ಸಮಸ್ಯೆ ಆಲಿಸಿ ಪರಿಹಾರ ಒದಗಿಸಬೇಕು ಎಂದು ಹೇಳಿದರು.ನಂತರ ಕಾಕನೂರ ಗ್ರಾಮಕ್ಕೆ ತೆರಳಿ,ಇತ್ತಿಚೆಗೆ ಅಪಘಾತ ದಲ್ಲಿ ಮೃತ ಪಟ್ಟ ಯೋಧನ ಮನೆಗೆ ತೆರಳಿ ಕುಟುಂದವರಿಗೆ ಸ್ವಾಂತನ ಹೇಳಿದರು.ತದನಂತರ ಚಿಮ್ಮನಕಟ್ಟಿ ಗ್ರಾಮಕ್ಕೆ ತೆರಳಿ ಸಿ.ಸಿ.ರಸ್ತೆಗೆ ಚಾಲನೆ ನೀಡಿದರು.Conclusion:ಈ ಟಿವಿ ಭಾರತ್,ಬಾಗಲಕೋಟೆ..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.