ETV Bharat / state

ಲಿಂಗಾಯತ ಸಮಾಜಕ್ಕೆ ನೋವಾಗುವ ರೀತಿಯಲ್ಲಿ ಮಾತನಾಡಿಲ್ಲ: ವಿಜಯಾನಂದ ಕಾಶಪ್ಪನವರ್​

ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಹಾಗೂ ಲಿಂಗಾಯತ ಸಮಾಜದ ವರ್ಗದವರಿಗೆ ಓಬಿಸಿಯಲ್ಲಿ ಸೇರ್ಪಡೆ ಮಾಡಲು ಹೋರಾಟ ಮಾಡುತ್ತಿದ್ದೇವೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರು ತಿಳಿಸಿದ್ದಾರೆ.

ವಿಜಯಾನಂದ ಕಾಶಪ್ಪನವರ್​
ವಿಜಯಾನಂದ ಕಾಶಪ್ಪನವರ್​
author img

By

Published : Oct 24, 2022, 9:40 PM IST

ಬಾಗಲಕೋಟೆ: ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಸಿಗಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹಾಕಲು ಹುಕ್ಕೇರಿಯಲ್ಲಿ ನಡೆದ ಪಂಚಮಸಾಲಿ ಸಮಾಜದ ಹೋರಾಟದಲ್ಲಿ ಬಣಜಿಗ ಸಮಾಜವಾಗಲಿ, ಲಿಂಗಾಯತ ಅನ್ಯ ವರ್ಗದವರನ್ನು ಅವಹೇಳನ ಮಾಡಿ ಮಾತನಾಡಿಲ್ಲ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಸ್ಪಷ್ಟಪಡಿಸಿದರು.

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ಮಾತನಾಡಿದರು

ನವನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಸಮಾಜಕ್ಕೆ ಮೀಸಲಾತಿ ದೊರಕಿಸಿಕೊಳ್ಳಲು ಹೋರಾಟ ನಡೆಯುತ್ತಿದೆ. ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಹಾಗೂ ಲಿಂಗಾಯತ ಸಮಾಜದ ವರ್ಗದವರಿಗೆ ಓಬಿಸಿಯಲ್ಲಿ ಸೇರ್ಪಡೆ ಮಾಡಲು ಹೋರಾಟ ಮಾಡುತ್ತಿದ್ದೇವೆ. ಆದರೆ, ಯಾವುದೇ ಲಿಂಗಾಯತ ಸಮಾಜಕ್ಕೆ ನೋವಾಗುವ ರೀತಿಯಲ್ಲಿ ಹುಕ್ಕೇರಿಯ ಹೋರಾಟದ ಭಾಷಣದಲ್ಲಿ ಮಾತನಾಡಿಲ್ಲ ಎಂದರು.

ಯಾರೋ ಪಟ್ಟಭದ್ರ ಹಿತಾಸಕ್ತಿಗಳ ಮಾತನ್ನು ಕೇಳಿ ನಮ್ಮ ವಿರುದ್ಧ ಹೋರಾಟ ಮಾಡಲಾಗುತ್ತಿದೆ. ನಮ್ಮ ಫೋಟೋ ಸುಟ್ಟರೂ ಏನೂ ವ್ಯತ್ಯಾಸ ಆಗುವುದಿಲ್ಲ. ಚುನಾವಣೆಯಲ್ಲಿ ನನಗೆ ಟಿಕೆಟ್ ತಪ್ಪಿಸುತ್ತೇವೆ, ಸೋಲಿಸುತ್ತೇವೆ ಎನ್ನುವವರು ಇವರ್ಯಾರು?. ಟಿಕೆಟ್ ನೀಡುವುದು ನಮ್ಮ ಹೈಕಮಾಂಡ್. ಆದರೆ, ಯಾರದ್ದೋ ಮಾತು ಕೇಳಿ ನನ್ನ ಹಾಗೂ ಬಸವನಗೌಡ ಪಾಟೀಲ ಯತ್ನಾಳ್​ ವಿರುದ್ಧ ಹೋರಾಟ ಮಾಡಿದರೆ ನಾವು ಯಾವುದಕ್ಕೂ ಬಗ್ಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಅ.22ರೊಳಗೆ 2ಎ ಮೀಸಲು ನೀಡದಿದ್ದರೇ ಸಿಎಂ ಮನೆ ಮುಂದೆ ಹೋರಾಟ.. ಮಾಜಿ ಶಾಸಕ ಕಾಶಪ್ಪನವರ್ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.