ETV Bharat / state

ಬಿಜೆಪಿ ಸರ್ಕಾರ ರಚನೆ ಸಾಧ್ಯತೆ:  ಬಾಗಲಕೋಟೆ ಶಾಸಕರಿಗೆ ಸಚಿವ ಸ್ಥಾನದ ಮೇಲೇನೇ ಕಣ್ಣು...!

ಕುಮಾರಸ್ವಾಮಿ ಸದನದಲ್ಲಿ ವಿಶ್ವಾಸ ಮತ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ಮಾತುಗಳಿವೆ. ಈ ನಡುವೆ ಬಾಗಲಕೋಟೆಯಲ್ಲಿ ಶಾಸಕರು ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದು ಲೆಕ್ಕಾಚಾರಗಳು ಜೋರಾಗಿ ಸಾಗಿವೆ.

ಶಾಸಕರು.
author img

By

Published : Jul 25, 2019, 2:09 PM IST

ಬಾಗಲಕೋಟೆ: ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆ ಆಗುತ್ತಿರುವ ಹಿನ್ನೆಲೆ, ಬಾಗಲಕೋಟೆ ಜಿಲ್ಲೆಯ ಬಿಜೆಪಿ ಶಾಸಕರು ಸಚಿವ ಸ್ಥಾನದ ಮೇಲೆ ಕಣ್ಣು ಇಟ್ಟಿದ್ದರಿಂದ ರಾಜಕೀಯ ಚಟುವಟಿಕೆ ಗರಿಗೆದರಿದೆ.

ಬಾಗಲಕೋಟೆ ಜಿಲ್ಲೆಯ ಏಳು ಮತ ಕ್ಷೇತ್ರದಲ್ಲಿ ಈಗಾಗಲೇ ಐವರು ಬಿಜೆಪಿ ಶಾಸಕರು ಮತ್ತು ಇಬ್ಬರು ಕಾಂಗ್ರೆಸ್ ಶಾಸಕರು ಇದ್ದಾರೆ. ಅದರಲ್ಲಿ ಬಾದಾಮಿ ಮತಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರಾಗಿರುವುದು ವಿಶೇಷವಾಗಿತ್ತು.

ಈಗ ಬಿಜೆಪಿ ಸರ್ಕಾರ ರಚನೆ ಆದಲ್ಲಿ ಮುಧೋಳ ಶಾಸಕರಾಗಿರುವ ಗೋವಿಂದ ಕಾರಜೋಳ ಅವರಿಗೆ ಸಚಿವ ಸ್ಥಾನ ಸಿಗುವುದು ಖಚಿತ. ಯಾಕೆಂದರೆ ರಾಜ್ಯಮಟ್ಟದಲ್ಲಿ ಇವರು ಬಿಜೆಪಿ ಪಕ್ಷದ ಮುಖಂಡರಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಸಚಿವ ಸ್ಥಾನ ಸಿಗಲಿದೆ. ಇನ್ನು ಬೀಳಗಿ ಮತಕ್ಷೇತ್ರದ ಶಾಸಕರಾಗಿರುವ ಮುರಗೇಶ ನಿರಾಣಿ ಅವರು ಯಡಿಯೂರಪ್ಪನವರ ಆಪ್ತರಾಗಿದ್ದಾರೆ. ಬಿಜೆಪಿ ಪಕ್ಷಕ್ಕೆ ಬಹಳಷ್ಟು ಸೇವೆ ಸಲ್ಲಿಸುತ್ತಿರುವ ಮುರಗೇಶ ನಿರಾಣಿ ಅವರು, ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕೈಗಾರಿಕಾ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಹೀಗಾಗಿ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂಬುದು ಬೆಂಬಗಲಿರ ಅಭಿಪ್ರಾಯ.

ಬಾಗಲಕೋಟೆ ಶಾಸಕರಾದ ವೀರಣ್ಣ ಚರಂತಿಮಠ ಅವರು, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿ, ಅಭಿವೃದ್ಧಿ ಪರ ಎಂದು ಹೆಸರು ವಾಸಿಯಾಗಿದ್ದರೆ. ಈ ಸಲ ಶಿಕ್ಷಣ ಸಚಿವರಾಗಲಿದ್ದಾರೆ ಎಂದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿದೆ. ಆದರೆ, ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಸ್ಪಷ್ಟನೆ ನೀಡಿ, ನನಗೆ ಯಾವುದೇ ಸಚಿವ ಸ್ಥಾನದ ಆಕಾಂಕ್ಷೆ ಇಲ್ಲ ಎಂದು ತಿಳಿಸಿದ್ದಾರೆ.

ಜಿಲ್ಲೆಗೆ ಐದು ಶಾಸಕರಲ್ಲಿ ಇಬ್ಬರಿಗೆ ಮಾತ್ರ ಸಚಿವ ಸ್ಥಾನ ಸಿಗಲಿದೆ, ಗೋವಿಂದ ಕಾರಜೋಳರಿಗೆ ಸಚಿವ ಸ್ಥಾನ ಬಹುತೇಕ ಖಚಿತವಾಗಿದ್ದರೆ, ಮುರಗೇಶ ನಿರಾಣಿ ಅಥವಾ ವೀರಣ್ಣ ಚರಂತಿಮಠ ಎಂಬುದು ಇನ್ನು ಸ್ಪಷ್ಟತೆ ಇಲ್ಲ. ತೇರದಾಳ ಮತಕ್ಷೇತ್ರದ ಶಾಸಕರಾಗಿರುವ ಸಿದ್ದು ಸವದಿ ಹಾಗೂ ಹುನಗುಂದ ಮತಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ ಅವರೂ ಸಚಿವ ಸ್ಥಾನದ ಆಕಾಂಕ್ಷೆ ಹೊಂದಿದ್ದರೂ ಅವರಿಗೆ ಸಚಿವ ಸ್ಥಾನ ಸಿಗುವುದು ಅನುಮಾನವಿದೆ. ಏಕೆಂದರೆ ಈಗಾಗಲೇ ರಾಜೀನಾಮೆ ನೀಡಿದ ಶಾಸಕರ ಒತ್ತಡಕ್ಕೂ ಬಿಎಸ್​​ವೈ ಮಣಿಯಲೇಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.

Intro:AnchorBody:ಬಾಗಲಕೋಟೆ -- ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆ ಆಗುತ್ತಿರುವ ಹಿನ್ನೆಲೆ, ಬಾಗಲಕೋಟೆ ಜಿಲ್ಲೆಯ ಬಿಜೆಪಿ ಶಾಸಕರಿಗೆ ಸಚಿವರ ಸ್ಥಾನ ಮೇಲೆ ಕಣ್ಣು ಇಟ್ಟಿದ್ದರಿಂದ ರಾಜಕೀಯ ಚಟುವಟಿಕೆ ಗದುಗೆದರಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಏಳು ಮತ ಕ್ಷೇತ್ರದಲ್ಲಿ ಈಗಾಗಲೇ ಐವರು ಬಿಜೆಪಿ ಶಾಸಕರು ಇದ್ದು,ಇಬ್ಬರು ಕಾಂಗ್ರೆಸ್ ಶಾಸಕರು ಇದ್ದಾರೆ.ಅದರಲ್ಲಿ ಬಾದಾಮಿ ಮತಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಶಾಸಕರು ಇರುವದು ವಿಶೇಷವಾಗಿತ್ತು.
ಈಗ ಬಿಜೆಪಿ ಸರ್ಕಾರ ರಚನೆ ಆದಲ್ಲಿ ಮೀಸಲಾತಿ ಯಲ್ಲಿ ಮುಧೋಳ ಶಾಸಕರಾಗಿರುವ ಗೋವಿಂದ ಕಾರಜೋಳ ಅವರಿಗೆ ಸಚಿವ ಸ್ಥಾನ ಸಿಗುವದು ಖಚಿತ.ಏಕೆಂದರೆ ಮೀಸಲಾತಿ ಅಲ್ಲದೆ ರಾಜ್ಯಮಟ್ಟದಲ್ಲಿ ಬಿಜೆಪಿ ಪಕ್ಷದ ಮುಖಂಡರಾಗಿ ಗುರುತಿಸಿಕೊಂಡಿದ್ದಾರೆ.ಹೀಗಾಗಿ ಅವರಿಗೆ ಸಚಿವ ಸ್ಥಾನ ಸಿಗಲಿದೆ.ಇನ್ನು ಬೀಳಗಿ ಮತಕ್ಷೇತ್ರದ ಶಾಸಕರಾಗಿರುವ ಮುರಗೇಶ ನಿರಾಣಿ ಅವರು ಯಡಿಯೂರಪ್ಪ ನವರ ಆಪ್ತರಾಗಿದ್ದಾರೆ.ಬಿಜೆಪಿ ಪಕ್ಷಕ್ಕೆ ತನು.ಮನ.ಧನ ಮೂಲಕ ಸೇವೆ ಸಲ್ಲಿಸುತ್ತಿರುವ ಮುರಗೇಶ ನಿರಾಣಿ ಅವರು,ಈ ಹಿಂದಿನ ಬಿಜೆಪಿ ಪಕ್ಷದ ಸರ್ಕಾರ ದಲ್ಲಿ ಭಾರಿ ಕೈಗಾರಿಕಾ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.ಹೀಗಾಗಿ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂಬುದು ಬೆಂಬಗಲಿರ ಅಭಿಪ್ರಾಯ ವಾಗಿದೆ.
ಬಾಗಲಕೋಟೆ ಶಾಸಕರಾದ ವೀರಣ್ಣ ಚರಂತಿಮಠ ಅವರು,ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿ,ಅಭಿವೃದ್ಧಿ ಪರ ಎಂದು ಹೆಸರು ವಾಸಿಯಾಗಿದ್ದರೆ.ಈ ಭಾರಿ ಶಿಕ್ಷಣ ಸಚಿವರಾಗಲಿದ್ದಾರೆ ಎಂದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲಿಗರು ಹರಿ ಬಿಟ್ಟಿದ್ದಾರೆ.ಆದರೆ ಅವರು ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸ್ಪಷ್ಟನೆ ನೀಡಿ,ನಾನು ಯಾವುದೇ ಸಚಿವ ಸ್ಥಾನ ಆಕಾಂಕ್ಷೆ ಅಲ್ಲ ಎಂದು ತಿಳಿಸಿದ್ದಾರೆ.ಜಿಲ್ಲೆಗೆ ಐವರ ಶಾಸಕರಲ್ಲಿ ಇಬ್ಬರಿಗೆ ಮಾತ್ರ ಸಚಿವ ಸ್ಥಾನ ಸಿಗಲಿದೆ.ಗೋವಿಂದ ಕಾರಜೋಳ ರಿಗೆ ಖಚಿತವಾಗಿದ್ದರೆ,ಮುರಗೇಶ ನಿರಾಣಿ ಯೋ,ಅಥವಾ ವೀರಣ್ಣ ಚರಂತಿಮಠ ಯೋ ಎಂಬುದು ಸ್ಪಷ್ಟತೆ ಇಲ್ಲಾ,ತೇರದಾಳ ಮತಕ್ಷೇತ್ರದ ಶಾಸಕರಾಗಿರುವ ಸಿದ್ದು ಸವದಿ ಹಾಗೂ ಹುನಗುಂದ ಮತಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ ಅವರು ಸಚಿವ ಸ್ಥಾನದ ಆಕಾಂಕ್ಷೆ ಆಗಿದ್ದರೂ,ಅವರಿಗೆ ಸಚಿವ ಸ್ಥಾನ ನೀಡುವದು ಕನಸಿನ ಮಾತು.ಏಕೆಂದರೆ ಈಗಾಗಲೇ ರಾಜಿನಾಮೆ ನೀಡಿದ ಶಾಸಕರಿಗೆ ಒತ್ತಡಕ್ಕೂ ಮನಿಯಬೇಕಾಗುತ್ತದೆ.
ಯಡಿಯೂರಪ್ಪ ನವರು ಮುಖ್ಯಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕಾರ ನಂತರ ಸಚಿವ ಸಂಪುಟದಲ್ಲಿ ಯಾರಿಗೆ ಸೇರಸಬೇಕು ಎಂಬುವ ಚರ್ಚೆ ಸಮಯದಲ್ಲಿ ಜಿಲ್ಲೆಗೆ ಯಾರಿಗೆ ಸಚಿವ ಸ್ಥಾನ ಸಿಗಲಿದೆಯೇ ಎಂಬುದು ಕುತೂಹಲಕಾರಿಯಾಗಿದೆ.Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.