ಬಾಗಲಕೋಟೆ: ಬಾದಾಮಿ ತಾಲೂಕಿನ ಹೊಸೂರು ಗ್ರಾಮದಲ್ಲಿ ಸಿಡಿಲು ಬಡಿದು ಸಾವನ್ನಪ್ಪಿದ 26 ವರ್ಷದ ಮಹಿಳೆ ಶಾಂತಮ್ಮ ಅಣ್ಣಪ್ಪ ಭೋವಿ ಅವರ ಮನೆಗೆ ತಹಶೀಲ್ದಾರ್ ಎಸ್.ಎಸ್.ಇಂಗಳೆ, ಅಧಿಕಾರಿಗಳಾದ ರಾಜು ಚಿಮ್ಮನಕಟ್ಟಿ, ಹೊಳಬಸು ಶೆಟ್ಟರ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಇದೇ ವೇಳೆ ಕುಟುಂಬಕ್ಕೆ ಯುವ ನಾಯಕರಾದ ಹೊಳಬಸು ಶೆಟ್ಟರ್ ಹಾಗೂ ರಾಜು ಚಿಮ್ಮನಕಟ್ಟಿ ಅವರು ಸಹಾಯಧನವಾಗಿ 15 ಸಾವಿರ ರೂ.ಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬಿ ದೇವಮಾಳಿ, ಲಾಲಸಾಬ ಹುಲ್ಯಾಳ, ಎಸ್.ಬಿ. ದನ್ನೂರ, ಯಲ್ಲಪ್ಪ ಕಟ್ಟಿಮನಿ, ಮುದಕಪ್ಪ ಹೂಗಾರ, ಯಂಕಣ್ಣ ಕಂಬಳಿ, ರಾಜಶೇಖರ ಗಾರವಾಡ, ಹನಮಂತ ಗುಂಡಿ ಸೆರಿದಂತೆ ಇತರೆ ಮುಖಂಡರು ಉಪಸ್ಥಿತರಿದ್ದರು.