ETV Bharat / state

ರೌದ್ರಾವತಾರ ತಾಳಿದ ನದಿಗಳು... ಜೀವನ್ಮರಣ ಹೋರಾಟದಲ್ಲಿವೆ ವಾನರ ಸೇನೆ!

author img

By

Published : Aug 19, 2020, 6:41 PM IST

Updated : Aug 19, 2020, 7:16 PM IST

ಬಾದಾಮಿ ತಾಲೂಕಿನ ಚಿಕ್ಕನಸಿಬಿ ಗ್ರಾಮದ ನದಿ ದಡದ ಗಿಡದಲ್ಲಿದ್ದ ಮಂಗಗಳು ಜೀವನ್ಮರಣದ ಹೋರಾಟ ನಡೆಸಿವೆ. ಮರದಲ್ಲಿರುವ ಮಂಗಗಳನ್ನ ರಕ್ಷಿಸಿ ಎಂದು ಗ್ರಾಮಸ್ಥರು ಎಷ್ಟೇ ಮನವಿ ಮಾಡಿದ್ರು, ಅಧಿಕಾರಿಗಳ್ಯಾರೂ ಸ್ಪಂದಿಸುತ್ತಿಲ್ಲ.

Monkey's
ಮಂಗಗಳು

ಬಾಗಲಕೋಟೆ: ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು ರೌದ್ರಾವತಾರ ತಾಳಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಮಾಡಿವೆ. ಹೀಗಾಗಿ ಜಿಲ್ಲೆಯ ಮುಧೋಳ, ಜಮಖಂಡಿ ಹಾಗೂ ಬಾದಾಮಿ ತಾಲೂಕಿನ ಹಲವಾರು ಗ್ರಾಮಗಳು ಜಲಾವೃತಗೊಂಡಿವೆ.

ನಡು ನೀರಿನಲ್ಲಿ ಕಂಗಾಲಾದ ಮಂಗಗಳು

ಇದು ಕೇವಲ ಜನರಿಗೆ ಅಷ್ಟೇ ಅಲ್ಲ, ಪ್ರಾಣಿ-ಪಕ್ಷಿಗಳು ಸಹ ನರಕಯಾತನೆ ಉಂಟಾಗಿದೆ. ಜಲಾವೃತದಿಂದ ಜನತೆ ಆತಂಕಗೊಂಡು ಬೇರೆಡೆಗೆ ಸ್ಥಳಾಂತರವಾಗುತ್ತಿದ್ದಾರೆ. ಆದರೆ ಮೂಕ ಪ್ರಾಣಿಗಳ ಮೂಕ ರೋಧನೆ ಕೇಳುವಂತಿಲ್ಲ.

ಮಲಪ್ರಭಾ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿರುವ ಪರಿಣಾಮ ನದಿ ವಿಸ್ತಾರಗೊಂಡು ತನ್ನ ರೌದ್ರಾವತಾರ ಪ್ರದರ್ಶಿಸಿಸುತ್ತದೆ. ಇದರಿಂದ ಬಾದಾಮಿ ತಾಲೂಕಿನ ಚಿಕ್ಕನಸಿಬಿ ಗ್ರಾಮದ ನದಿ ದಡದ ಗಿಡದಲ್ಲಿದ್ದ ಮಂಗಗಳು ಜೀವನ್ಮರಣದ ಹೋರಾಟ ನಡೆಸಿವೆ. ಮರದಲ್ಲಿರುವ ಮಂಗಗಳನ್ನ ರಕ್ಷಿಸಿ ಎಂದು ಗ್ರಾಮಸ್ಥರು ಎಷ್ಟೇ ಮನವಿ ಮಾಡಿದ್ರು, ಅಧಿಕಾರಿಗಳ್ಯಾರೂ ಸ್ಪಂದಿಸುತ್ತಿಲ್ಲ. ಹೀಗಾಗಿ ಮಂಗಗಳು ದಿಕ್ಕು ತೋಚದಂತಾಗಿ, ಮುಳುಗುವ ಮರದಲ್ಲೇ ರಕ್ಷಣೆಗಾಗಿ ಜೀವ ಕೈಯಲ್ಲಿ ಹಿಡಿದುಕೊಂಡು ಕಾಯುತ್ತಿವೆ.

ನಂತರ ಗ್ರಾಮಸ್ಥರು ಆಕ್ರೋಶದಿಂದ ಅಧಿಕಾರಿಗಳಿಗೆ ಹಾಗೂ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಅಗ್ನಿಶಾಮಕ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆಗಮಿಸಿ, ಬೋಟ್ ಮೂಲಕ ಕಾರ್ಯಚರಣೆ ನಡೆಸಿದರು. ಆದರೆ ಭಯದಿಂದ ಮಂಗಗಳು ನೀರಿನಲ್ಲಿ‌ ಜಿಗಿದು ಬೇರೆಡೆ ಸ್ಥಳಾಂತರಗೊಂಡವು.

Last Updated : Aug 19, 2020, 7:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.