ETV Bharat / state

ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಶಾಸಕ ಚರಂತಿಮಠ - MLA Charantimatt latest news

ಶಾಸಕ ವೀರಣ್ಣ ಚರಂತಿಮಠವರು ಇಂದು ಜಿಲ್ಲೆಯಲ್ಲಿ ಸಂಚರಿಸಿ, ವಿವಿಧ ಕಾಮಗಾರಿಗಳ ಕುರಿತು ಪರಿಶೀಲಿಸಿದರು.

Bagalkote
Bagalkote
author img

By

Published : Oct 4, 2020, 11:16 PM IST

ಬಾಗಲಕೋಟೆ : ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ಸ್ಥಳ ಹಾಗೂ ಇನ್ನೂ ಆಗಬೇಕಾದ ಕಾಮಗಾರಿ ಕುರಿತು ಶಾಸಕ ವೀರಣ್ಣ ಚರಂತಿಮಠವರು ಪರಿಶೀಲಿಸಿದರು.

ನವನಗರದ ಕಲಾಭವನಕ್ಕೆ ಭೇಟಿ ನೀಡಿದ ಶಾಸಕರು, ಅಲ್ಲಿಯ ಅವ್ಯವಸ್ಥೆ ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಕಲಾಭವನದ ಹಿಂದಿನ ಆವರಣಕ್ಕೆ ಭೇಟಿ ನೀಡಿದಾಗ ಅಲ್ಲಿಯ ಕಸವನ್ನು ನೋಡಿದ ಶಾಸಕರು, ಅದನ್ನು ಸ್ವಚ್ಛಗೊಳಿಸಲು ಸೂಚಿಸಿದರು.

ಇದಲ್ಲದೇ ಕಲಾಭವನದ ಸಂಕೀರ್ಣದಲ್ಲಿರುವ ಹಳೆ ಬಾಗಲಕೋಟೆ ನಗರದಲ್ಲಿದ್ದ ಗ್ರಂಥಾಲಯ ಕಟ್ಟಡದ ಮಾದರಿಯಲ್ಲೇ ನವನಗರದಲ್ಲಿ ಕಟ್ಟಡವನ್ನು ಶೀಘ್ರದಲ್ಲೇ ನಿರ್ಮಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳ ಕಾರ್ಯಾಲಯಕ್ಕೆ ಸಂಬಂಧಿಸಿದಂತೆ ನೂತನ ರೆಕಾರ್ಡ್ ರೂಂ ನಿರ್ಮಾಣ ಮಾಡಲು ನೀಲಿನಕ್ಷೆ ತಯಾರಿಸಲು ಸ್ಥಳದಲ್ಲೇ ಇದ್ದ ತಹಶೀಲ್ದಾರ್ ಹಿರೇಮಠರಿಗೆ ತಿಳಿಸಿದರು.

ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ನಡೆಯುತ್ತಿರುವ ಈಜುಕೊಳದ ದುರಸ್ತಿ ಕಾಮಗಾರಿಗಳನ್ನು ಪರಿಶೀಲಿಸಿದರು. ನಂತರ ಕ್ರೀಡಾ ವಸತಿ ನಿಲಯಕ್ಕೆ ಭೇಟಿ ನೀಡಿ ಅಲ್ಲಿ ಕೈಗೊಂಡಿರುವ ವಿವಿಧ ದುರಸ್ತಿ ಕಾಮಗಾರಿಗಳನ್ನು ಪರಿಶೀಲಿಸಿ ಕಾಮಗಾರಿ ಗುಣಮಟ್ಟದ್ದಾಗಿರಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ಚರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಓ ಟಿ.ಭೂಬಾಲನ್, ಪಿ.ಆರ್.ಇಡಿ ಇಇ ಕೊಟಗಿ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎನ್.ವಾಯ್. ಕುಂದರಗಿ, ನಿರ್ಮಿತಿ ಕೇಂದ್ರದ ಕಿರಣ, ಪಿಡಬ್ಲ್ಯೂಡಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಪ್ರಶಾಂತ ಗಿಡ್ಡದಾನಪ್ಪಗೋಳ, ಸಹಾಯಕ ಕಾರ್ಯನಿರ್ವಾಹಕ ಕೊಟಗಿ ಸೇರಿದಂತೆ ಇತರರು ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.