ETV Bharat / state

ಲಾಕ್​ಡೌನ್ ಎಫೆಕ್ಟ್: ರೈತರಿಂದ ತರಕಾರಿ ಖರೀದಿಸಿ ಬಡವರಿಗೆ ಹಂಚಿದ ಜಮಖಂಡಿ ಶಾಸಕ

ರೈತರು ಬೆಳೆದ ಬೆಳೆ ಹಾನಿ ಆಗಬಾರದು ಹಾಗೂ ಉಪವಾಸದಿಂದ ಯಾರೂ ಇರಬಾರದು ಎಂಬ ದೃಷ್ಟಿಯಿಂದ ಜಮಖಂಡಿ ಕ್ಷೇತ್ರದ ಶಾಸಕ ಆನಂದ ನ್ಯಾಮಗೌಡ ರೈತರು ಬೆಳೆದ ತರಕಾರಿ ಖರೀದಿ ಮಾಡಿದ್ದಾರೆ.

author img

By

Published : Apr 15, 2020, 4:32 PM IST

Updated : Apr 15, 2020, 6:04 PM IST

Lockdown Effect: Jamakhandi mla buys a farmer's crop and distributes it to the poor
ಲಾಕ್ ಡೌನ್ ಎಫೆಕ್ಟ್: ರೈತರ ಬೆಳೆ ಖರೀದಿಸಿ ಬಡವರಿಗೆ ಹಂಚಿದ ಜಮಖಂಡಿ ಶಾಸಕ

ಬಾಗಲಕೋಟೆ: ರೈತರು ಬೆಳೆದ ಬೆಳೆ ಹಾನಿ ಆಗಬಾರದು ಹಾಗೂ ಉಪವಾಸದಿಂದ ಯಾರೂ ಇರಬಾರದು ಎಂಬ ದೃಷ್ಟಿಯಿಂದ ಜಮಖಂಡಿ ಕ್ಷೇತ್ರದ ಶಾಸಕ ಆನಂದ‌ ನ್ಯಾಮಗೌಡ ರೈತರು ಬೆಳೆದ ತರಕಾರಿಯನ್ನು ನೇರವಾಗಿ ಖರೀದಿ ಮಾಡಿ ನೆರವಾಗಿದ್ದಾರೆ.

ಲಾಕ್​ಡೌನ್ ಎಫೆಕ್ಟ್: ರೈತರಿಂದ ತರಕಾರಿ ಖರೀದಿಸಿ ಬಡವರಿಗೆ ಹಂಚಿದ ಜಮಖಂಡಿ ಶಾಸಕ

ಜಮಖಂಡಿ ಮತಕ್ಷೇತ್ರದ ರೈತರ ಸಮಸ್ಯೆಗಳನ್ನು ವಿಚಾರಿಸಿ ಅವರ ಸಂಕಷ್ಟಗಳನ್ನು ಆಲಿಸಿ ನಂತರ ರೈತರು ಬೆಳೆದ ಸೊಪ್ಪು, ತರಕಾರಿಗಳನ್ನು ಖರೀದಿಸಿದರು. ಈ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ರೈತರಿಗೆ ಭರವಸೆ ನೀಡಿದರು.

ರೈತರು ಬೆಳೆದ ಬೆಳೆಗಳು ಮಾರುಕಟ್ಟೆಯಲ್ಲಿ ಮಾರಟವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಬೆಳೆಗಳನ್ನು ರೈತರಿಂದ ನೇರವಾಗಿ ಖರೀದಿ ಮಾಡಿ ಜಮಖಂಡಿಯ ಬಡಜನರಿಗೆ ಮತ್ತು ಪ್ರತಿಯೊಂದು ಮನೆಗೆ ಉಚಿತವಾಗಿ ಕೊಡುವ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ. ಈ ಯೋಜನೆ ರೈತರಿಗೆ ಹಾಗೂ ಬಡವರಿಗೆ ಅನುಕೂಲವಾಗುತ್ತದೆ ಎಂದು ಶಾಸಕ ಆನಂದ ನ್ಯಾಮಗೌಡ ತಿಳಿಸಿದ್ದಾರೆ.

Last Updated : Apr 15, 2020, 6:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.