ETV Bharat / state

ಜಮಖಂಡಿಯನ್ನು ಜಿಲ್ಲೆಯನ್ನಾಗಿ ಮಾಡಲು ನಾನು ಶತ ಪ್ರಯತ್ನ ಮಾಡುತ್ತೇನೆ : ಆನಂದ ನ್ಯಾಮಗೌಡ

ಜಮಖಂಡಿಯನ್ನು ಸ್ವಚ್ಛ, ಸುಂದರವಾಗಿಸಲು ನಗರಸಭೆ ಅಧ್ಯಕ್ಷರು, ಸರ್ವ ಸದಸ್ಯರ ಒಗ್ಗಟ್ಟಿನೊಂದಿಗೆ ಕಾರ್ಯ ನಿರ್ವಹಿಸಿ ಮಾದರಿ ನಗರವನ್ನಾಗಿಸುವ ಸಂಕಲ್ಪ ಮಾಡಲಾಗಿದೆ..

author img

By

Published : Nov 8, 2020, 5:07 PM IST

Updated : Nov 8, 2020, 5:53 PM IST

Anand Nyamagouda
ಶಾಸಕ ಆನಂದ ನ್ಯಾಮಗೌಡ

ಬಾಗಲಕೋಟೆ : ಜಮಖಂಡಿಯನ್ನು ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ನಾನು ಪ್ರಾಮಾಣಿಕ ಶತ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.

ನಗರದ ಓಲೇಮಠದಲ್ಲಿ ಶ್ರೀಮಠದ ಡಾ. ಚನ್ನಬಸವ ಮಹಾಸ್ವಾಮಿಗಳು ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜಮಖಂಡಿಯನ್ನು ಸ್ವಚ್ಛ, ಸುಂದರವಾಗಿಸಲು ನಗರಸಭೆ ಅಧ್ಯಕ್ಷರು, ಸರ್ವ ಸದಸ್ಯರ ಒಗ್ಗಟ್ಟಿನೊಂದಿಗೆ ಕಾರ್ಯ ನಿರ್ವಹಿಸಿ ಮಾದರಿ ನಗರವನ್ನಾಗಿಸುವ ಸಂಕಲ್ಪ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿಡಿಸಿಸಿ ಸಹಕಾರಿ ಬ್ಯಾಂಕ್‌ನ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಶಾಸಕ ಆನಂದ ನ್ಯಾಮಗೌಡ, ನಗರಸಭೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಿದ್ದು ಮೀಶಿ ಹಾಗೂ ನಾಡೋಜ ಪ್ರಶಸ್ತಿಗೆ ಆಯ್ಕೆಯಾದ ಡಾ. ಹೆಚ್ ಜಿ ದಡ್ಡಿ ಅವರನ್ನು ಸನ್ಮಾನಿಸಲಾಯಿತು.

ನ್ಯಾಯವಾದಿ ಡಾ.ಮಲ್ಲಿಕಾರ್ಜುನಯ್ಯಮಠ, ರಾಜು ಸಿಕ್ಕಲಗಾರ, ಶಂಕರಯ್ಯ ಹಿರೇಮಠ ಹಾಗೂ ಇತರರು ಇದ್ದರು.

Last Updated : Nov 8, 2020, 5:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.