ETV Bharat / state

'ಹಜಾಮ' ಪದ ಬಳಕೆ.. ಸಿದ್ದರಾಮಯ್ಯ ವಿರುದ್ದ ಹಡಪದ ಸಮಾಜದ ಪ್ರತಿಭಟನೆ.. - ಬಾಗಲಕೋಟೆ ಪ್ರತಿಭಟನೆ ಸುದ್ದಿ

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಾಗಲಕೋಟೆಯಲ್ಲಿ ಶ್ರೀ ಶಿವಶರಣ ಹಡಪದ ಅಪ್ಪಣ್ಣ ಸಮಾಜ ಅಭಿವೃದ್ಧಿ ಸಂಘಟನೆ ವತಿಯಿಂದ ಪ್ರತಿಭಟನೆ.

ಸಿದ್ದರಾಮಯ್ಯ ವಿರುದ್ದ ಹಡಪ ಸಮಾಜದ ಪ್ರತಿಭಟನೆ
ಸಿದ್ದರಾಮಯ್ಯ ವಿರುದ್ದ ಹಡಪ ಸಮಾಜದ ಪ್ರತಿಭಟನೆ
author img

By

Published : Dec 3, 2019, 5:49 PM IST

ಬಾಗಲಕೋಟೆ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರ ಸಂದರ್ಭದಲ್ಲಿ ಹಡಪದ ಸಮಾಜವನ್ನು ಹಜಾಮ ಎಂಬ ಪದ ಬಳಕೆ ಮಾಡಿರುವುದಕ್ಕೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಬಾಗಲಕೋಟೆಯಲ್ಲಿ ಶ್ರೀ ಶಿವಶರಣ ಹಡಪದ ಅಪ್ಪಣ್ಣ ಸಮಾಜ ಅಭಿವೃದ್ಧಿ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಯಿತು.

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಹಡಪ ಸಮಾಜದ ಪ್ರತಿಭಟನೆ..

ತಂಗಡಗಿ ಮಠದ ಅನ್ನದಾನಿ ಹಡಪದ ಅಪಣ್ಣ ಸ್ವಾಮೀಜಿಗಳ ನೇತೃತ್ವದ ಪ್ರತಿಭಟನೆಯು ನವನಗರದ ಅಂಬೇಡ್ಕರ್ ಭವನದಿಂದ ಪ್ರಾರಂಭಿಸಿ ಜಿಲ್ಲಾಡಳಿತ ಭವನದವರೆಗೆ ಪಾದಯಾತ್ರೆ ಬಂದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರ ವಿರುದ್ಧ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಸ್ವಾಮೀಜಿ, ಬಸವ ತತ್ವದ ಅನುಯಾಯಿ ಆಗಿರುವ ಸಿದ್ದರಾಮಯ್ಯ ಒಂದು ಜಾತಿಯ ಬಗ್ಗೆ ಕೀಳಾಗಿ ಮಾತನಾಡಿರುವುದು ಖಂಡನೀಯ. ಸವಿತಾ ಸಮಾಜಕ್ಕೆ ಪ್ರೋತ್ಸಾಹಿಸುವ ಅವರು ಹಡಪದ ಸಮಾಜಕ್ಕೆ ಹಜಾಮ ಎಂದು ಬಳಕೆ ಮಾಡಿರುವ ಬಗ್ಗೆ ಕ್ಷಮೆಯಾಚಿಸಬೇಕು. ಈ ಬಗ್ಗೆ ಕ್ಷಮೆ ಕೇಳದೆ ಇದ್ದಲ್ಲಿ ಸಿದ್ದರಾಮಯ್ಯನವರಿಗೆ ಮುಂದೆ ಏನು ಮಾಡಬೇಕು ಎಂಬುದು ಗೊತ್ತಿದೆ. ಅವರನ್ನು ಶಾಸಕತ್ವ ಸ್ಥಾನದಿಂದ ತೆಗೆದು ಹಾಕುವಂತೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿ, ತಮ್ಮ ಬೇಡಿಕೆ ಇರುವ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.

Intro:Anchor

Body:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಪ ಚುನಾವಣಾ ಪ್ರಚಾರ ಸಮಯದಲ್ಲಿ ಹಡಪದ ಸಮಾಜವನ್ನು ಹಜಾಮ ಎಂಬ ಪದ ಬಳಕೆ ಮಾಡಿರುವುದಕ್ಕೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ,ಬಾಗಲಕೋಟೆ ಯಲ್ಲಿ ಶ್ರೀ ಶಿವಶರಣ ಹಡಪದ ಅಪ್ಪಣ್ಣ ಸಮಾಜ ಅಭಿವೃದ್ಧಿ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿದರು.
ತಂಗಡಗಿ ಮಠದ ಅನ್ನದಾನಿ ಹಡಪದ ಅಪಣ್ಣ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರತಿಭಟನೆ ಯನ್ನು ನವನಗರದ ಅಂಬೇಡ್ಕರ್ ಭವನ ದಿಂದ ಪ್ರಾರಂಭ ಮಾಡಿ,ಜಿಲ್ಲಾಡಳಿತ ಭವನದವರೆಗೆ ನಡೆಸಲಾಯಿತು. ಈ ಸಮಯದಲ್ಲಿ ಸಿದ್ದರಾಮಯ್ಯನವರು ನವರ ವಿರುದ್ಧ ಘೋಷಣೆ ಹಾಕುತ್ತಾ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸ್ವಾಮೀಜಿಯವರು ಮಾತನಾಡಿ,ಬಸವ ತತ್ವದ ಅನುಯಾಯಿ ಆಗಿರುವ ಸಿದ್ದರಾಮಯ್ಯನವರು ಒಂದು ಜಾತಿಯ ಬಗ್ಗೆ ಕೀಳಾಗಿ ಮಾತನಾಡಿರುವುದು ಖಂಡನೀಯವಾಗಿದೆ.ಸವಿತಾ ಸಮಾಜಕ್ಕೆ ಪ್ರೋತ್ಸಾಹಿಸುವ ಸಿದ್ದರಾಮಯ್ಯನವರು ಹಡಪದ ಸಮಾಜಕ್ಕೆ ಹಜಾಮ ಎಂದು ಬಳಕೆ ಮಾಡಿರುವ ಬಗ್ಗೆ ಕ್ಷಮೆಯಾಚಿಸಬೇಕು.ಈ ಬಗ್ಗೆ ಕ್ಷಮೆ ಕೇಳದೆ ಇದ್ದಲ್ಲಿ ಸಿದ್ದರಾಮಯ್ಯನವರಿಗೆ ಮುಂದೆ ಎನು ಮಾಡಬೇಕು ಎಂದು ಗೊತ್ತಿದೆ.ಅವರ ಶಾಸಕತ್ವ ದಿಂದ ತೆಗೆದು ಹಾಕುವಂತೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಮಯದಲ್ಲಿ ತಮ್ಮ ಬೇಡಿಕೆ ಇರುವ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು..

ಬೈಟ್-- ಅನ್ನದಾನಿ ಹಡಪದ ಅಪ್ಪಣ್ಣ ಸ್ವಾಮೀಜಿ(ತಂಗಡಗಿ ಮಠ)

Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.