ETV Bharat / state

ನೀವು ಯಾರದಾದರೂ ಚಡ್ಡಿ ಬಿಚ್ಚಿಸಿಕೊಳ್ಳಿ, ಜನರ ಚಡ್ಡಿ ಬಿಚ್ಚಿಸೋ ಕೆಲಸ ಮಾಡಬೇಡಿ: ಕುಮಾರಸ್ವಾಮಿ - ಪರಿಷತ್​ ಚುಣಾವಣೆ

ಪಕ್ಷದಲ್ಲಿ ಭಿನ್ನಾಭಿಪ್ರಾಯಗಳಿವೆ. ಆದರೆ ಪಕ್ಷಕ್ಕೆ ಮತ ಹಾಕುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಕುಮಾರಸ್ವಾಮಿ ಹೇಳಿದರು. ಇದೇ ವೇಳೆ ಕಾಂಗ್ರೆಸ್​ ಮತ್ತು ಬಿಜೆಪಿ ಮಧ್ಯೆ ನಡೆಯುತ್ತಿರುವ ಚಡ್ಡಿ ವಾರ್​ ಕುರಿತು ಟೀಕಿಸಿದ್ದಾರೆ.

H D Kumaraswamy
ಎಚ್ ಡಿ‌ ಕುಮಾರಸ್ವಾಮಿ
author img

By

Published : Jun 5, 2022, 8:25 PM IST

ಬಾಗಲಕೋಟೆ: ನೀವು ಯಾರದಾದರೂ ಚಡ್ಡಿ ಬಿಚ್ಚಿಸಿಕೊಳ್ಳಿ, ನಾಡಿನ ಜನರ ಚಡ್ಡಿ ಬಿಚ್ಚಿಸೋ ಕೆಲಸ ಈ ನಾಡಿನಲ್ಲಿ ಆಗಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ‌ ಕುಮಾರಸ್ವಾಮಿ ಅವರು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ಅವರು ಬಾಗಲಕೋಟೆ ನಗರಕ್ಕೆ ವಾಯುವ್ಯ ಶಿಕ್ಷಕರ ವಿಧಾನ ಪರಿಷತ್ ಚುನಾವಣೆ ಪ್ರಚಾರರ್ಥ ಆಗಮಿಸಿದ ಸಂದರ್ಭದಲ್ಲಿ ಮಾತನಾಡುತ್ತ, ನಿಮಗೆ ಕೈಜೋಡಿಸಿ ಮನವಿ ಮಾಡುತ್ತೇನೆ. ಈ ನಾಡಿನ ಜನರ ಗೌರವ ಉಳಿಸುವಂತಹ ಕೆಲಸ ಮಾಡಿ. ವಿಧಾನ ಪರಿಷತ್ ಚುನಾವಣೆ ಇನ್ನೂ ತುಂಬಾ ದೂರ ಇದೆ. ಜನರಲ್ ಚುನಾವಣೆಗೆ ಇನ್ನೂ ಸಾಕಷ್ಟು ವಿಷಯಗಳಿವೆ ಎಂದರು.

ಅಸಮಾಧಾನಿತ ಕಾಂಗ್ರೆಸ್ ನಾಯಕ ಎಸ್ ಆರ್ ಪಾಟೀಲ್ ಸಂಪರ್ಕ ವಿಚಾರವಾಗಿ ಪ್ರತಿಕ್ರಿಯೆ ‌ನೀಡಿ, ಇಲ್ಲಿಯವರೆಗೆ ನಾನು ಎಸ್ ಆರ್ ಪಾಟೀಲ್ ಜೊತೆ ಚರ್ಚೆ ಮಾಡಿಲ್ಲ. ಎಸ್ ಆರ್ ಪಾಟೀಲ್ ಮನೆಗೆ ಊಟಕ್ಕೆ ಹೋಗ್ತೀರಾ ಎಂಬ ಪ್ರಶ್ನೆಗೆ, ಇಲ್ಲ.. ನನಗೆ ಆಹ್ವಾನ ಇಲ್ಲ ಎಂದರು. ಈಗ ನಾನು ಅವರನ್ನ ಭೇಟಿ ಮಾಡಿದರೆ ಅದು ನನ್ನ ಸ್ವಾರ್ಥ ಆಗುತ್ತೆ. ವಿಧಾನ ಪರಿಷತ್ ಚುನಾವಣೆ ಮುಗಿದ ಮೇಲೆ ಸಂದರ್ಭ ಬಂದರೆ ನೋಡೋಣ ಎಂದು ತಿಳಿಸಿದರು.

ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ ಸೆಳೆಯುವ ವಿಚಾರವಾಗಿ ಮಾತನಾಡಿ, ಅದರಲ್ಲಿ ಅವರೆಲ್ಲಾ ಪರಿಣಿತರಿದ್ದಾರೆ. ಈಗಾಗಲೇ ಪ್ರಯತ್ನ ಶುರುವಾಗಿದೆ. ಜೆಡಿಎಸ್ ಮತ ಒಡೆಯಬೇಕೆನ್ನೋದು ಎರಡೂ ಪಕ್ಷಗಳಲ್ಲೂ ನಡೆಯುತ್ತಿದೆ. ನಾನು ಆರಾಮವಾಗಿದ್ದೇನೆ ಎಂದು ತಿರುಗೇಟು ನೀಡಿದ ಕುಮಾರಸ್ವಾಮಿ, ನಮ್ಮ ಪಕ್ಷದ ಕೆಲವು ಶಾಸಕರಲ್ಲಿ ಭಿನ್ನಾಭಿಪ್ರಾಯ ಇರೋದು ನಿಜ. ಆ ಭಿನ್ನಾಭಿಪ್ರಾಯ ಹೊರತುಪಡಿಸಿ ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತ ಹಾಕುತ್ತಾರೆ ಅನ್ನೋ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ: ಪೀರ್‌ಪಾಷಾ ಬಂಗ್ಲೆ ಮೂಲ ಅನುಭವ ಮಂಟಪ : ಸಂಶೋಧನೆ ನಡೆಸಲು ಸಿಎಂಗೆ ಮಠಾಧೀಶರ ನಿಯೋಗ ಮನವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.