ETV Bharat / state

ಸಿದ್ದು ಮತಕ್ಷೇತ್ರಕ್ಕೆ ಭೇಟಿ ನೀಡಿದ ಬಿಎಸ್​ವೈ ಮಾಡಿದ್ದೇನು? - undefined

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾದಾಮಿ ಮತಕ್ಷೇತ್ರಕ್ಕೆ ಇಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್ .ಯಡಿಯೂರಪ್ಪ ಭೇಟಿ ನೀಡಿ ಬರ ಅಧ್ಯಯನ ನಡೆಸಿದರು. ಬರ ಅಧ್ಯಯನ ಪ್ರವಾಸ ಹಮ್ಮಿಕೊಂಡಿದ್ದರು.

ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್ .ಯಡಿಯೂರಪ್ಪ
author img

By

Published : Jun 7, 2019, 2:15 PM IST

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾದಾಮಿ ಮತಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್ .ಯಡಿಯೂರಪ್ಪ ಬರ ಅಧ್ಯಯನ ಪ್ರವಾಸ ಹಮ್ಮಿಕೊಳ್ಳುವ ಮೂಲಕ ರಾಜಕೀಯವಾಗಿ ತಿರುಗೇಟು ನೀಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ .ಯಡಿಯೂರಪ್ಪ

ಇಂದು ಬಾದಾಮಿ ಮತಕ್ಷೇತ್ರದ ಮುಷ್ಟಿಗೇರಿ ಗ್ರಾಮಕ್ಕೆ ಭೇಟಿ ನೀಡಿರುವ ಯಡಿಯೂರಪ್ಪ ಧರ್ಮಸ್ಥಳ ಮಂಜುನಾಥ ಸಂಘದಿಂದ 12 ಲಕ್ಷ ವೆಚ್ಚದಲ್ಲಿ ನಿರ್ಮಾಣ ಆಗಿರುವ ಕರೆ ಕಾಮಗಾರಿ ವೀಕ್ಷಣೆ ಮಾಡಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಬಾದಾಮಿ ತಾಲೂಕಿನಲ್ಲಿ ಮಳೆ ಆಗಿಲ್ಲ. ಗೋ ಶಾಲೆ ತೆರೆದಿಲ್ಲ. ಮೇವು ಬ್ಯಾಂಕ್ ಮಾಡಿದ್ದರೂ. ಎಷ್ಟು ವಿತರಣೆ ಆಗಿದೆ ಎಂಬುದಕ್ಕೆ ಲೆಕ್ಕ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಳೆ ಇಲ್ಲದೆ ಭೀಕರ ಬರಗಾಲ ಎದುರಾಗಿದ್ದು, ಎಷ್ಟರ ಮಟ್ಟಿಗೆ ಸರ್ಕಾರ ಪರಿಹಾರ ಕಾರ್ಯ ಕೈಗೊಂಡಿದೆ ಎಂಬ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆಸಲಾಗಿದೆ. ಪ್ರಭಾವಿ ನಾಯಕರ ಕ್ಷೇತ್ರ ಆಗಿದ್ದರಿಂದ ಬರ ಪರಿಹಾರದ ಬಗ್ಗೆ ಮಾಹಿತಿ ಪಡೆಯಲು ಆಗಮಿಸಿದ್ದೇನೆ ಎಂದು ಬಿಎಸ್​ವೈ ಹೇಳಿದರು.

ಮಧ್ಯಂತರ ಚುನಾವಣೆಗೆ ಸಜ್ಜಾಗಿ ಎಂಬ ನಿಖಿಲ್​ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಎಸ್​​ವೈ, ​ ಹೀಗೆ ಹೇಳಲು ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು. ಮಧ್ಯಂತರ ಚುನಾವಣೆ ನಡೆಯಲು ಬಿಜೆಪಿ ಅವಕಾಶ ನೀಡಲ್ಲ.105 ಜನ ಬಿಜೆಪಿ ಶಾಸಕರು ಇದ್ದೇವೆ. ಈಗ ಮತ್ತೆ ಒಂದೇ ವರ್ಷ ದಲ್ಲಿ ಚುನಾವಣೆ ನಡೆಸಲು ಅವಕಾಶ ಕೊಡಲ್ಲ. ಸರ್ಕಾರ ನಡೆಸಲು ಯೋಗ್ಯತೆ ಇಲ್ಲದಿದ್ರೆ ಮನೆಗೆ ಹೋಗಲಿ, ರಾಜ್ಯದಲ್ಲಿ ಬಿಜೆಪಿ ಉತ್ತಮ ಆಡಳಿತ ನೀಡುತ್ತದೆ ಎಂದರು.

Intro:Anchor

Body:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರು ಬರ ಅಧ್ಯಯನ ಪ್ರವಾಸ ಹಮ್ಮಿಕೊಳ್ಳುವ ಮೂಲಕ ರಾಜಕೀಯ ವಾಗಿ ತಿರುಗೇಟು ನೀಡಿದ್ದಾರೆ.
ಬಾದಾಮಿ ಮತಕ್ಷೇತ್ರದ ಮುಷ್ಟಿಗೇರಿ ಗ್ರಾಮಕ್ಕೆ ಆಗಮಿಸಿದ ಯಡಿಯೂರಪ್ಪ ಅಲ್ಲಿ ಧರ್ಮಸ್ಥಳ ಮಂಜುನಾಥ ಸಂಘದಿಂದ 12 ಲಕ್ಷ ವೆಚ್ಚದಲ್ಲಿ ನಿರ್ಮಾಣ ಆಗಿರುವ ಕರೆ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ,ಬಾದಾಮಿ ತಾಲೂಕಿನಲ್ಲಿ ಮಳೆಯು ಆಗಿಲ್ಲ ಗೋ ಶಾಲೆ ತೆರೆದಿಲ್ಲ.ಮೇವು ಬ್ಯಾಂಕ್ ಮಾಡಿದ್ದರು,ಎಷ್ಟು ವಿತರಣೆ ಆಗಿದೆ,ಎಷ್ಟು ಸಂಗ್ರಹ ಇದೆ ಎಂಬ ಮಾಹಿತಿ ಅಧಿಕಾರಿಗಳ ಬಳಿ ಇಲ್ಲ.ಮಳೆ ಇಲ್ಲ ಭೀಕರ ಬರಗಾಲ ಇದ್ದರೂ,ಎಷ್ಟರ ಮಟ್ಟಿಗೆ ಪರಿಹಾರ ಕಾರ್ಯ ಮಾಡಿದ್ದಾರೆ ಎಂದು ಅಧಿಕಾರಿಗಳೊಂದಿಗೆ ಚರ್ಚೆಸಲು ಆಗಮಿಸಿದ್ದೇನೆ.ಪ್ರಭಾವಿ ನಾಯಕರ ಕ್ಷೇತ್ರ ಆಗಿದ್ದರಿಂದ ಬರ ಪರಿಹಾರ ಬಗ್ಗೆ ಮಾಹಿತಿ ಪಡೆಯಲು ಆಗಮಿಸಿದ್ದೇನೆ ಎಂದು ತಿಳಿದ ಯಡಿಯೂರಪ್ಪ..
ಮಧ್ಯಂತರ ಚುನಾವಣೆ ಗೆ ಸಜ್ಜಾಗಿ ಎಂದು ಹೇಳಿಕೆ ನೀಡಿದ ನಿಖಿಲ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದು ,ನಿಖಿಲ್ ಗೆ ಹೀಗೆ ಹೇಳಲು ಯಾವ ನೈತಿಕತೆ ಇದೆ.ಚುನಾವಣೆ ಯಲ್ಲಿ ಸೋತಿದ್ದಾರೆ.ಮಧ್ಯಂತರ ಚುನಾವಣೆ ನಡೆಯಲು ಬಿಜೆಪಿ ಅವಕಾಶ ನೀಡಲ್ಲ.105 ಜನ ಬಿಜೆಪಿ ಶಾಸಕರು ಇದ್ದೇವೆ.ಈಗ ಮತ್ತೆ ಒಂದೇ ವರ್ಷ ದಲ್ಲಿ ಚುನಾವಣೆ ನಡೆಸಲು ಅವಕಾಶ ಕೊಡಲ್ಲ,ಸರ್ಕಾರ ನಡೆಸಲು ಯೋಗ್ಯತೆ ಇಲ್ಲದಿದ್ರೆ ಮನೆಗೆ ಹೋಗಲಿ,ರಾಜ್ಯದಲ್ಲಿ ಬಿಜೆಪಿ ಉತ್ತಮ ವಾದ ಆಡಳಿತ ನೀಡುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ನಂತರ ಬಾದಾಮಿ ಯ ಪರಿವೀಕ್ಷಣಾ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ,ಬರದ ಕಾಮಗಾರಿ ಬಗ್ಗೆ ಮಾಹಿತಿ ಪಡೆದುಕೊಂಡರು..

Conclusion:ಈ ಟಿವಿ ಭಾರತ್,ಬಾಗಲಕೋಟೆ..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.