ಟೋಕಿಯೋ (ಜಪಾನ್): ಪಾರಾಲಿಂಪಿಕ್ನಲ್ಲಿ ಭಾರತೀಯರ ಪದಕದ ಓಟ ಮುಂದುವರೆದಿದೆ. ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ನಲ್ಲಿ ಕೃಷ್ಣ ನಗರ್ ಸೆಮಿ ಫೈನಲ್ನಲ್ಲಿ ಜಯ ದಾಖಲಿಸಿದ ಪೈನಲ್ಗೆ ಅರ್ಹತೆ ಪಡೆದಿದ್ದಾರೆ. ಈ ಮೂಲಕ ಭಾರತಕ್ಕೆ ಮತ್ತೊಂದು ಪದಕ ಖಾತ್ರಿಯಾದಂತಾಗಿದೆ.
ಸಿಂಗಲ್ಸ್ ವಿಭಾಗದಲ್ಲಿ ಗ್ರೇಟ್ ಬ್ರಿಟನ್‌ನ ಕ್ರಿಸ್ಟನ್ ಕೋಂಬ್ಸ್ ಅವರನ್ನು ಸೋಲಿಸಿ ಫೈನಲ್ಗೆ ಪ್ರವೇಶಿಸಿದ್ದಾರೆ. ತನ್ನ ಸೆಮಿಫೈನಲ್ ಎದುರಾಳಿ ಗ್ರೇಟ್ ಬ್ರಿಟನ್‌ನ ಕ್ರಿಸ್ಟನ್ ಕೂಂಬ್ಸ್‌ನನ್ನು 21-10, 21-11 ಅಂತರದಿಂದ ಸೋಲಿಸಿದ್ದಾರೆ. ನಾಳೆ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಚಿನ್ನಕ್ಕಾಗಿ ಸೆಣಸಾಡಲಿದ್ದಾರೆ.
ಓದಿ: Tokyo Paralympics: ಶೂಟಿಂಗ್ನಲ್ಲಿ ನರ್ವಾಲ್ಗೆ ಚಿನ್ನ, ಸಿಂಗರಾಜ್ಗೆ ಬೆಳ್ಳಿ ಪದಕ