ಮೆಲ್ಬೋರ್ನ್ : ಸರ್ಬಿಯಾದ ಟೆನಿಸ್ ತಾರೆ ನೊವಾಕ್ ಜೋಕೊವಿಕ್ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಅವರನ್ನು ಮಣಿಸಿ 2021ರ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ವಿಶ್ವದ ನಂಬರ್ ಒನ್ ಶ್ರೇಯಾಂಕದ ಆಟಗಾರ ಜೋಕೊವಿಕ್ 4ನೇ ಶ್ರೇಯಾಂಕದ ಮೆಡ್ವೆಡೆವ್ ಅವರನ್ನು 7-5, 6-2, 6-2 ರಲ್ಲಿ ಮಣಿಸುವ ಮೂಲಕ ವೃತ್ತಿ ಜೀವನದ 9ನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಈ ಮೂಲಕ 18ನೇ ಗ್ರ್ಯಾಂಡ್ಸ್ಲಾಮ್ ಗೆದ್ದು ಅತಿ ಹೆಚ್ಚು ಗ್ರ್ಯಾಂಡ್ಸ್ಲಾಮ್ ಗೆದ್ದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ನಡಾಲ್ (20) ಮತ್ತು ಫೆಡರರ್ (20) ಗೆ ಮತ್ತಷ್ಟು ಹತ್ತಿರವಾಗಿದ್ದಾರೆ.
-
"Class act." 💯
— #AusOpen (@AustralianOpen) February 21, 2021 " class="align-text-top noRightClick twitterSection" data="
Here, here @DjokerNole 👏@DaniilMedwed | #AO2021 | #AusOpen pic.twitter.com/R1aHehylbY
">"Class act." 💯
— #AusOpen (@AustralianOpen) February 21, 2021
Here, here @DjokerNole 👏@DaniilMedwed | #AO2021 | #AusOpen pic.twitter.com/R1aHehylbY"Class act." 💯
— #AusOpen (@AustralianOpen) February 21, 2021
Here, here @DjokerNole 👏@DaniilMedwed | #AO2021 | #AusOpen pic.twitter.com/R1aHehylbY
ಅಲ್ಲದೆ ಒಂದೇ ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿಯನ್ನು 9 ಅಥವಾ ಅದಕ್ಕಿಂತ ಹೆಚ್ಚುಬಾರಿ ಗೆದ್ದ ವಿಶ್ವದ 2ನೇ ಟೆನಿಸ್ ಪ್ಲೇಯರ್ ಎಂಬ ಶ್ರೇಯಕ್ಕೆ ಪಾತ್ರರಾದರು. ಸ್ಪೇನ್ನ ರಾಫೆಲ್ ನಡಾಲ್ 13 ಬಾರಿ ಫ್ರೆಂಚ್ ಓಪನ್ ಗೆದ್ದು ಮೊದಲ ಸ್ಥಾನದಲ್ಲಿದ್ದಾರೆ.
ಅಲ್ಲದೆ ಕಳೆದ ನವೆಂಬರ್ನಿಂದ ಸೋಲನ್ನೇ ಅರಿಯದೇ ಸತತ 20 ಗೆಲುವಿನೊಂದಿಗೆ ಮುನ್ನುಗ್ಗುತ್ತಿದ್ದ ಮೆಡ್ವೆಡೆವ್ ಓಟಕ್ಕೆ ಬ್ರೇಕ್ ಹಾಕಿದ್ದಾರೆ. ಜೊತೆಗೆ ಕಳೆದ ವರ್ಷ ನಿಟ್ಟೋ ಎಟಿಪಿ ಫೈನಲ್ಸ್ ಪಂದ್ಯದ ಸೋಲಿಗೆ ರಷ್ಯಾ ಆಟಗಾರ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ. ಜೋಕೊವಿಕ್ ಇದೀಗ ಎಟಿಪಿ ಪಂದ್ಯಗಳ ಮುಖಾಮುಖಿಯಲ್ಲಿ 5-3 ರಿಂದ ಮುನ್ನಡೆ ಸಾಧಿಸಿದ್ದಾರೆ.
ನೊವಾಕ್ ಜೋಕೊವಿಕ್ 9 ಆಸ್ಟ್ರೇಲಿಯನ್ ಓಪನ್, ಒಂದು ಫ್ರೆಂಚ್ ಓಪನ್, 5 ವಿಂಬಲ್ಡನ್ ಓಪನ್ ಮತ್ತು 3 ಯುಎಸ್ ಓಪನ್ ಪ್ರಶಸ್ತಿ ಗೆದ್ದಂತಾಗಿದೆ.