ಪ್ಯಾರಿಸ್ : ಜಪಾನ್ ಸ್ಟಾರ್ ನವೋಮಿ ಒಸಾಕ(Naomi Osaka) ಫ್ರೆಂಚ್ ಓಪನ್ನ ಮೊದಲ ಸುತ್ತಿನಲ್ಲಿ ಪೆಟ್ರೀಷಿಯಾ ಮರಿಯಾ ವಿರುದ್ಧ ಗೆಲುವು ಸಾಧಿಸಿ ಶುಭಾರಂಭ ಮಾಡಿದ್ದಾರೆ.
ಫಿಲಿಪ್ ಚಾಟ್ರಿಯರ್ ಕೋರ್ಟ್ನಲ್ಲಿ ನಡೆದ ಪಂದ್ಯದಲ್ಲಿ 35 ದೋಷಗಳನ್ನು ಎಸಗಿದರೂ ವಿಶ್ವದ 2ನೇ ಶ್ರೇಯಾಂಕದ ಒಸಾಕ ರೊಮೇನಿಯಾದ ಆಟಗಾರ್ತಿ ವಿರುದ್ಧ 6-4, 7(7)-6(4)ರಲ್ಲಿ ಗೆಲುವು ಸಾಧಿಸಿ 2ನೇ ಸುತ್ತಿಗೆ ತೇರ್ಗಡೆಯಾದರು.
ಈ ವರ್ಷದ ಆಸ್ಟ್ರೇಲಿಯನ್ ಓಪನ್ ಸೇರಿದಂತೆ 4 ಗ್ರ್ಯಾಂಡ್ ಸ್ಲಾಮ್ ಗೆದ್ದಿರುವ ಒಸಾಕ ಮಣ್ಣಿನ ಅಂಕಣದಲ್ಲಿ 3ನೇ ಸುತ್ತನ್ನು ದಾಟಿಲ್ಲ. ಅವರ ಎಲ್ಲಾ ನಾಲ್ಕು ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿಗಳು ಹಾರ್ಡ್ಕೋರ್ಟ್ನಲ್ಲೇ ಬಂದಿವೆ. ಕಳೆದ ವರ್ಷ ಯುಎಸ್ ಓಪನ್ ಗೆದ್ದಿದ್ದ ಅವರು ಫ್ರೆಂಚ್ ಓಪನ್ನಿಂದ ಹಿಂದೆ ಸರಿದಿದ್ದರು.
ಇನ್ನು, ಮಾಜಿ ನಂಬರ್ ಒನ್ ಹಾಗೂ 3 ಗ್ರ್ಯಾಂಡ್ ಸ್ಲಾಮ್ ವಿಜೇತೆ ಏಂಜಲಿಕ್ ಕೆರ್ಬರ್ ತಮ್ಮ ಮೊದಲ ಸುತ್ತಿನಲ್ಲೇ ಸೋಲು ಕಂಡು ನಿರಾಶೆಯನುಭವಿಸಿದ್ದಾರೆ. ಇದು ಅವರ ಸತತ ಮೂರನೇ ಮೇಜರ್ ಟೂರ್ನಮೆಂಟ್ ಸೋಲಾಗಿದೆ. ಅವರನ್ನು ಉಕ್ರೇನಿಯಾದ 139ನೇ ಶ್ರೇಯಾಂಕಿತೆ ಅನ್ಹೆಲಿನಾ ಕಲಿನಿನಾ ಮಣಿಸಿ 2ನೇ ಸುತ್ತಿಗೆ ಪ್ರವೇಶ ಪಡೆದರು.
ಇದನ್ನು ಓದಿ:ಏಷ್ಯನ್ ಚಾಂಪಿಯನ್ಶಿಪ್ : ಫೈನಲ್ನಲ್ಲಿ ಇಂದು ಮೇರಿ ಕೋಮ್ ಸೇರಿ ನಾಲ್ವರು ಕಣಕ್ಕೆ