ETV Bharat / sports

French Open: 19ನೇ ಗ್ರ್ಯಾಂಡ್​ ಸ್ಲಾಂ ಟ್ರೋಫಿಗೆ ಮುತ್ತಿಕ್ಕಿ ಸಂಭ್ರಮಿಸಿದ ಜೊಕೊವಿಕ್‌ - 19 ನೇ ಗ್ರಾಂಡ್​ ಸ್ಲಾಂಗೆ ಗೆದ್ದ ನೊವಾಕ್‌ ಜೊಕೊವಿಕ್‌

ಈ ಗ್ರಾಂಡ್​ ಸ್ಲಾಂ ಗೆಲ್ಲುವ ಮೂಲಕ ಮುಕ್ತ ಟೆನಿಸ್ ಯುಗದಲ್ಲಿ ಎಲ್ಲ 4 ಗ್ರ್ಯಾಂಡ್ ಸ್ಲಾಂಗಳಲ್ಲಿ ಕನಿಷ್ಠ ತಲಾ 2 ಬಾರಿ ಪ್ರಶಸ್ತಿ ಜಯಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಜೊಕೊವಿಕ್ ಪಾತ್ರರಾದರು.

Novak Djokovic Makes History
ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಗೆದ್ದ ಜೊಕೊವಿಕ್‌
author img

By

Published : Jun 14, 2021, 7:14 AM IST

ಪ್ಯಾರಿಸ್: ವಿಶ್ವ ನಂ. 1 ಟೆನ್ನಿಸ್‌ ಆಟಗಾರ ನೊವಾಕ್‌ ಜೊಕೊವಿಕ್‌ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದರು. ಈ ಮೂಲಕ ಅವರು ತಮ್ಮ ವೃತ್ತಿಜೀವನದ 19ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸಿದ್ದಾರೆ.

ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ 22 ವರ್ಷದ ಸ್ಟೆಫಾನೋಸ್ ಸಿಸಿಪಾಸ್ ವಿರುದ್ಧ ಅಗ್ರ ಶ್ರೇಯಾಂಕಿತ ನೊವಾಕ್‌ ಜೊಕೊವಿಕ್‌ 6-7 (6-8), 2-6, 6-3, 6-2, 6-4 ಸೆಟ್‌ಗಳಿಂದ ಗೆಲುವು ದಾಖಲಿಸಿದರು. ಗ್ರ್ಯಾಂಡ್ ಸ್ಲಾಂ ಗೆದ್ದ ಮೊದಲ ಗ್ರೀಕ್​ ಆಟಗಾರ ಎನ್ನುವ ಹಂಬಲದಲ್ಲಿದ್ದ 5ನೇ ಶ್ರೇಯಾಂಕಿತ ಸಿಸಿಪಾಸ್ ಮೊದಲೆರಡು ಸೆಟ್ ಗೆದ್ದು ಜೊಕೊವಿಕ್‌ಗೆ ಪ್ರಬಲ ಪೈಪೋಟಿ ನೀಡಿದರು. ಆದರೆ ಮುಂದಿನ 3 ಸೆಟ್‌ಗಳಲ್ಲಿ ಸಿಡಿದೆದ್ದ 34 ವರ್ಷದ ಅನುಭವಿ ಆಟಗಾರ ಜೊಕೊವಿಕ್​​ ದಿಟ್ಟ ತಿರುಗೇಟು ನೀಡಿದರು.

ನಾಲ್ಕು ಗಂಟೆ 11 ನಿಮಿಷಗಳ ಕಾಲ ನಡೆದ ಸುದೀರ್ಘ ಪ್ರಶಸ್ತಿ ಹೋರಾಟದಲ್ಲಿ ಜೊಕೊವಿಕ್, 5 ವರ್ಷದ ಬಳಿಕ (2016) 2ನೇ ಬಾರಿಗೆ ಫ್ರೆಂಚ್ ಓಪನ್ ಪ್ರಶಸ್ತಿಗೆ ಮುತ್ತಿಕ್ಕಿದರು. 13 ಬಾರಿಯ ಚಾಂಪಿಯನ್ ರಾಫೆಲ್​​ ನಡಾಲ್‌ಗೆ ಉಪಾಂತ್ಯದಲ್ಲಿ ಸೋಲುಣಿಸುವ ಮೂಲಕ ಫೈನಲ್​​ ಪ್ರವೇಶಿಸಿದ್ದ ಜೊಕೋ, ಕೊನೆಗೂ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಮುನ್ನ 2012, 2014, 2015, 2020ರ ಫೈನಲ್‌ಗಳಲ್ಲಿ ನಿರಾಸೆ ಇವರು ಅನುಭವಿಸಿದ್ದರು. ಈ ಪೈಕಿ ಮೂರು ಬಾರಿ ನಡಾಲ್ ವಿರುದ್ಧವೇ ಸೋಲು ಕಂಡಿದ್ದರು.

ಈ ಗ್ರ್ಯಾಂಡ್​ ಸ್ಲ್ಯಾಂ ಗೆಲ್ಲುವ ಮೂಲಕ ಮುಕ್ತ ಟೆನಿಸ್ ಯುಗದಲ್ಲಿ ಎಲ್ಲ 4 ಗ್ರಾಂಡ್ ಸ್ಲಾಂಗಳಲ್ಲಿ ಕನಿಷ್ಠ ತಲಾ 2 ಬಾರಿ ಪ್ರಶಸ್ತಿ ಜಯಿಸಿದ ವಿಶ್ವದ ಮೊದಲ ಆಟಗಾರ ಎಂಬ ಪಟ್ಟಕ್ಕೆ ಜೊಕೊ ಪಾತ್ರರಾಗಿದ್ದಾರೆ. ಜೊಕೊವಿಕ್ ವೃತ್ತಿಜೀವನದ 19ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದರೆ, ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ತಲಾ 20 ಗ್ರ್ಯಾಂಡ್ ಸ್ಲಾಂ ಗೆದ್ದಿದ್ದಾರೆ.

ಜೊಕೊವಿಕ್ ಗೆದ್ದಿರುವ 19 ಗ್ರ್ಯಾಂಡ್ ಸ್ಲಾಂ ವಿವರ:

ಆಸ್ಟ್ರೇಲಿಯನ್ ಓಪನ್: 9 (2008, 2011, 2012, 2013, 2015, 2016, 2019, 2020, 2021)

ಫ್ರೆಂಚ್ ಓಪನ್ : 2 (2016, 2021)

ವಿಂಬಲ್ಡನ್: 5 (2011, 2014, 2015, 2018, 2019)

ಯುಎಸ್ ಓಪನ್: 3 (2011,2015,2018)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.